ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಚುನಾವಣೆ: ಗೋವಾದಲ್ಲಿ ಶೇ 83, ಪಂಜಾಬ್ ಶೇ 70 ಮತದಾನ

|
Google Oneindia Kannada News

ಪಣಜಿ/ಚಂಡೀಗಢ, ಫೆಬ್ರವರಿ 4: ಗೋವಾದಲ್ಲಿ ಶನಿವಾರ ವಿಧಾನಸಭೆ ಚುನಾವಣೆಗೆ ದಾಖಲೆಯ ಶೇ 83ರಷ್ಟು ಮತದಾನವಾಗಿದೆ. ಅಲ್ಲಿ ಬಿಜೆಪಿ ಆಡಳಿತಾರೂಢ ಪಕ್ಷ. ಎಂಜಿಪಿ, ಶಿವಸೇನೆ ಹಾಗೂ ಜಿಎಸ್ ಎಂ ಮೈತ್ರಿಯೊಂದಿಗೆ ಬಿಜೆಪಿ ಸ್ಪರ್ಧೆ ನಡೆಸಿದೆ. ಚುನಾವಣೆ ಆಯೋಗದ ಮೂಲಗಳ ಪ್ರಕಾರ ಮತದಾನದ ಪ್ರಮಾಣ ಇನ್ನೂ ಹೆಚ್ಚಾಗಲಿದೆ.

ಗಣಿ ಪಾಲೇಪಟ್ಟಿನ ಸಂಖಲಿಮ್, ಬಿಕೋಲಿಮ್ ಮತ್ತು ಕರ್ಕೋರೆಮ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ. ಕೆಲ ಪ್ರಕರಣ ಹೊರತು ಪಡಿಸಿದರೆ ಗೋವಾದಲ್ಲಿ ಶಾಂತಿಯುತ ಮತದಾನವಾಗಿದೆ. 78 ವರ್ಷದ ವ್ಯಕ್ತಿಯೊಬ್ಬರು ಪಣಜಿಯ ಮತದಾನದ ಬೂತ್ ನ ಹೊರಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 11.10 ಲಕ್ಷ ಮತದಾರರಿರುವ ಗೋವಾದಲ್ಲಿ ಶೇ 83ಕ್ಕೂ ಹೆಚ್ಚು ಮತದಾನ ಆಗಿರುವ ಬಗ್ಗೆ ಚುನಾವಣೆ ಆಯೋಗ ಮಾಹಿತಿ ನೀಡಿದೆ. ಮನೋಹರ್ ಪರಿಕ್ಕರ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಒಟ್ಟು ಇನ್ನೂರೈವತ್ತು ಅಭ್ಯರ್ಥಿಗಳಲ್ಲಿ ಪಕ್ಷೇತರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಒಟ್ಟು ನಲವತ್ತು ಸ್ಥಾನಗಳ ಪೈಕಿ ಬಿಜೆಪಿ 36, ಕಾಂಗ್ರೆಸ್ 37, ಎಎಪಿ 39 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಮತ ಎಣಿಕೆ ಮಾರ್ಚ್ 11ರಂದು ನಡೆಯಲಿದೆ.[ಮೀರತ್ ನಲ್ಲಿ ಕರ್ನಾಟಕದ 'ಭ್ರಷ್ಟ' ಮಂತ್ರಿ ಬಗ್ಗೆ ಮೋದಿ ಹೇಳಿದ್ದೇನು?]

Vote

ಇನ್ನು ಪಂಜಾಬ್ ನಲ್ಲಿ ಶೇ 70ರಷ್ಟು ಮತದಾನವಾಗಿದೆ ಎಂದು ಪ್ರಾಥಮಿಕ ಸಂಖ್ಯೆಯನ್ನು ಆಧರಿಸಿ ಚುನಾವಣೆ ಆಯೋಗದ ವಕ್ತಾರ ತಿಳಿಸಿದ್ದಾರೆ. ಕೆಲ ಕಡೆ ಗಲಾಟೆ ಬಿಟ್ಟರೆ ಚುನಾವಣೆ ಶಾಂತಯುತವಾಗಿ ನಡೆದಿದೆ. ಸುಲ್ತಾನ್ ಪುರ್ ಎಂಬಲ್ಲಿ ಎಎಪಿ ಹಾಗೂ ಕಾರ್ಯಕರ್ತರ ಮಧ್ಯೆ ಮಾರಾಮಾರಿಯಾಗಿದೆ.

ಅಕಾಲಿ ದಳದ ಬೆಂಬಲಿಗನೊಬ್ಬ ಮತದಾನ ಕೇಂದ್ರದ ಹೊರಗೆ ಗುಂಡು ಹಾರಿಸಿದ ಪ್ರಕರಣ ನಡೆದಿದೆ. 2012ರ ಚುನಾವಣೆಯಲ್ಲಿ ಶೇ 79ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. ಈ ಬಾರಿಯ ಸಂಖ್ಯೆ ಅಂತಿಮವಾಗಿ ದೊರೆಯಬೇಕಾಗಿದೆ. ಒಟ್ಟು 1,145 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸುವಂತೆ 1.98 ಕೋಟಿ ಮತದಾರರು ಪೈಕಿ ಶೇ 70ರಷ್ಟು ಮತ ಚಲಾಯಿಸಿರುವ ಮಾಹಿತಿ ಸಿಕ್ಕಿದೆ.

ಒಟ್ಟು ಅಭ್ಯರ್ಥಿಗಳ ಪೈಕಿ 81 ಮಹಿಳೆಯರು, ಒಬ್ಬರು ತೃತೀಯ ಲಿಂಗಿ ಚುನಾವಣೆ ಕಣದಲ್ಲಿದ್ದಾರೆ.

English summary
According primary report Goa 83 and Punjab 70 percent of assembly election voting estimated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X