Vande Bharat Express : ವಂದೇ ಭಾರತ್ ಓಡಿಸಿದ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್
ಸೊಲ್ಲಾಪುರ ನಿಲ್ದಾಣ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (ಸಿಎಸ್‌ಎಂಟಿ) ನಡುವೆ ಸೆಮಿ ಹೈಸ್ಪೀಡ್ ರೈಲನ್ನು ಚಾಲನೆ ಮಾಡುವು ಮೂಲಕ ಅವರು ಇತಿಹಾಸ ಬರೆದರು.
ನವದೆಹಲಿ, ಮಾರ್ಚ್ 14: ಇತ್ತೀಚೆಗೆ ಸೊಲ್ಲಾಪುರ ನಿಲ್ದಾಣ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಡುವೆ ಹೊಸದಾಗಿ ಸಂಚರಿಸುವ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸೋಮವಾರ ಏಷ್ಯಾದ ಮೊದಲ ಮಹಿಳಾ ಲೊಕೊ ಪೈಲಟ್ ಓಡಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಅವರ ಹೆಸರೇ ಸುರೇಖಾ ಯಾದವ್.
ಈ ವಂದೇ ಭಾರತ್ ರೈಲನ್ನು ಪ್ರಸ್ತುತ ಮೊದಲ ಬಾರಿಗೆ ಮಹಿಳೆ ಸುರೇಖಾ ಯಾದವ್ ಚಾಲನೆ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ. ಸೊಲ್ಲಾಪುರ ನಿಲ್ದಾಣ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (ಸಿಎಸ್‌ಎಂಟಿ) ನಡುವೆ ಸೆಮಿ ಹೈಸ್ಪೀಡ್ ರೈಲನ್ನು ಚಾಲನೆ ಮಾಡುವು ಮೂಲಕ ಇತಿಹಾಸ ಬರೆದರು.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು, ವಂದೇ ಭಾರತ್ - ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ. ಅವರೇ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಶ್ರೀಮತಿ ಸುರೇಖಾ ಯಾದವ್ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದ ಸತಾರಾದಿಂದ ಬಂದಿರುವ ಸುರೇಖಾ ಯಾದವ್ ಅವರು ಇಲ್ಲಿಯವರೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಸಾಧನೆಗಳಿಗಾಗಿ ಹಲವಾರು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. 1988ರಲ್ಲಿ ಸುರೇಖಾ ಯಾದವ್ ದೇಶದ ಮೊದಲ ಮಹಿಳಾ ರೈಲು ನಿರ್ವಾಹಕರಾಗಿ ನೇಮಕವಾದರು. ಸೆಂಟ್ರಲ್ ರೈಲ್ವೇಯಲ್ಲಿ ತನ್ನ ಹುದ್ದೆಯನ್ನು ಪ್ರಾರಂಭಿಸುವ ಮೊದಲು ಸುರೇಖಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದರು.
ಫೆಬ್ರವರಿ 2023 ರಲ್ಲಿ ವಂದೇ ಭಾರತ್ ರೈಲಿನಲ್ಲಿ ಲೋಕೋ ಪೈಲಟ್ ಆಗಿ ನೇಮಕಗೊಳ್ಳುವ ಮೊದಲು ಅವರು ವಡೋದರಾದ ರೈಲ್ವೇ ಸಂಸ್ಥೆಯಲ್ಲಿ ತರಬೇತಿಯನ್ನು ಮುಗಿಸಿದರು. ವಂದೇ ಭಾರತ್ ರೈಲನ್ನು ಓಡಿಸುವ ಅವಕಾಶಕ್ಕಾಗಿ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅತ್ಯಾಧುನಿಕ ವಂದೇ ಭಾರತ್ ರೈಲನ್ನು ಓಡಿಸುವ ಅವಕಾಶ ನೀಡಿದ್ದಕ್ಕಾಗಿ ಅವರು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಸೆಂಟ್ರಲ್ ರೈಲ್ವೇಸ್ ಪ್ರಕಾರ ಈ ರೈಲು ಸೋಲಾಪುರದಿಂದ ನಿಗದಿತ ಗಂಟೆಗೆ ಹೊರಟು ಐದು ನಿಮಿಷ ಮುಂಚಿತವಾಗಿ ಮುಂಬೈ ಸೆಂಟ್ರಲ್ ನಿಲ್ದಾಣವನ್ನು ತಲುಪಿತು.

450 ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರಯಾಣವನ್ನು ಮುಗಿಸಿದ ನಂತರ ಮುಂಬೈ ರೈಲ್ವೆ ಪ್ಲಾಟ್‌ಫಾರ್ಮ್ ಸಂಖ್ಯೆ 8ರಲ್ಲಿ ಯಾದವ್ ಅವರನ್ನು ಗೌರವಿಸಲಾಯಿತು ಎಂದು ರೈಲ್ವೆ ಹೇಳಿಕೊಂಡಿದೆ. ಪ್ರಸಿದ್ಧ ಮುಂಬೈ-ಪುಣೆ ಡೆಕ್ಕನ್ ಕ್ವೀನ್ ಎಕ್ಸ್‌ಪ್ರೆಸ್ ಮತ್ತು ಮುಂಬೈ ರೈಲ್ವೆ ಕಲ್ಯಾಣ ಮಹಿಳೆಯರ ವಿಶೇಷ ಸ್ಥಳೀಯ ರೈಲು ಎರಡನ್ನೂ ಈ ಹಿಂದೆ ಅಂತರರಾಷ್ಟ್ರೀಯ ಮಹಿಳಾ ದಿನದಂದು (8 ಮಾರ್ಚ್) ಎಲ್ಲಾ ಮಹಿಳಾ ಸಿಬ್ಬಂದಿಗಳೊಂದಿಗೆ ಸೆಂಟ್ರಲ್ ರೈಲ್ವೆ ನಡೆಸಿತು.












Click it and Unblock the Notifications