Asha Bhosle: ಆಶಾ ಭೋಸ್ಲೆಗೆ 16ನೇ ವರ್ಷದಲ್ಲೇ ಮದುವೆ, 2ನೇ ಮದುವೆಯಲ್ಲೂ ಸಂಕಷ್ಟ - ಕಾರಣವೇನು
Asha Bhosle Life: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಭಾನುವಾರ ಮೃತಪಟ್ಟಿದ್ದಾರೆ. ಆಶಾ ಭೋಸ್ಲೆ ಅವರು ಭಾರತೀಯ ಸಿನಿಮಾ ರಂಗದಲ್ಲಿ ಅಮೋಘ ಸಾಧನೆಯನ್ನು ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿರುವ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಅವರ ಕುಟುಂಬದ ಇಚ್ಛೆಗೆ ವಿರುದ್ಧವಾಗಿ 31 ವರ್ಷದ ಗಣಪತ್ರಾವ್ ಭೋಸ್ಲೆ ಅವರೊಂದಿಗೆ ಓಡಿಹೋಗಿ ವಿವಾಹವಾಗಿದ್ದರು. ಆದರೆ, ಈ ವಿವಾಹ ತುಂಬಾ ದಿನ ಉಳಿಯಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯ ಹಾಗೂ ಬೇರೆ ಬೇರೆ ಕಾರಣಗಳಿಗೆ ದೂರವಾಗಿದ್ದರು. ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವುದರೊಂದಿಗೆ ಅವರು ವೈಯಕ್ತಿಕ ಜೀವದನದಲ್ಲೂ ಭಾರೀ ಏರಿಳಿತ ಕಂಡಿದ್ದರು.
1933 ರಲ್ಲಿ ಸಂಗೀತ ಮಂಗೇಶ್ಕರ್ ಕುಟುಂಬದಲ್ಲಿ ಜನಿಸಿದ ಆಶಾ ತಮ್ಮ 9 ನೇ ವಯಸ್ಸಿನಲ್ಲಿ ವೃತ್ತಿಪರವಾಗಿ ಹಾಡಲು ಪ್ರಾರಂಭಿಸಿದರು. ಅವರು 1943 ರಲ್ಲಿ ತಮ್ಮ ಮೊದಲ ಚಲನಚಿತ್ರ ಹಾಡನ್ನು ರೆಕಾರ್ಡ್ ಮಾಡಿದ್ದರು. ಆದರೆ ಆಶಾ ಅವರ ವೈಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳು ಎದುರಾಗಿದ್ದವು. 16ನೇ ವಯಸ್ಸಿನಲ್ಲಿ ಅವರ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಆಶಾ 31 ವರ್ಷದ ಗಣಪತ್ರಾವ್ ಭೋಸ್ಲೆ ಅವರೊಂದಿಗೆ ಓಡಿಹೋಗಿ ಅವರನ್ನು ವಿವಾಹವಾದರು. ಗಣಪತ್ರಾವ್ ಅವರ ವೈಯಕ್ತಿಕ ಕಾರ್ಯದರ್ಶಿಯಾಗಿದ್ದರು. ಆದರೆ, ಆಶಾ ಅವರ ಅತ್ತೆ-ಮಾವಂದಿರು ಅವರ ಜೊತೆ ಕೆಟ್ಟದಾಗಿ ವರ್ತಿಸಿದ್ದರು ಎನ್ನುವ ಕಾರಣಕ್ಕೆ ಅವರು ತಮ್ಮ ಮದುವೆಯನ್ನು ಮುರಿದರು / ವಿಚ್ಛೇದನ ನೀಡಿದ್ದರು. 1960ರಲ್ಲಿ ಮೊದಲ ಪತಿಗೆ ವಿಚ್ಛೇದನ ಕೊಟ್ಟಿದ್ದರು.

1980 ರಲ್ಲಿ ಅವರು ದೀರ್ಘ ಸಮಯದ ನಂತರ ಆರು ವರ್ಷ ಕಿರಿಯ ಸಂಗೀತ ಸಂಯೋಜಕರಾದ ರಾಹುಲ್ ದೇವ್ ಬರ್ಮನ್ ಅವರನ್ನು ವಿವಾಹವಾಗಿದ್ದರು. ಈ ಮದುವೆಗೆ ಬರ್ಮನ್ ಕುಟುಂಬದಿಂದ, ವಿಶೇಷವಾಗಿ ಆರ್‌ಡಿ ಅವರ ತಾಯಿಯಿಂದಲೂ ವಿರೋಧ ವ್ಯಕ್ತವಾಗಿತ್ತು. ರಾಹುಲ್ ಪ್ರಸಿದ್ಧ ಸಂಯೋಜಕ ಸಚಿನ್ ದೇವ್ ಬರ್ಮನ್ ಅವರ ಮಗ. ಅವರು 1994 ರಲ್ಲಿ ನಿಧನರಾದರು. ಆಶಾ ಅವರ ಮೊಮ್ಮಗಳು ಜನೈ ಭೋಸ್ಲೆ ಸಹ ಒಬ್ಬ ಗಾಯಕಿ ಮತ್ತು ಅವರ ಕೊನೆಯ ವರ್ಷಗಳಲ್ಲಿ ಹಿರಿಯ ಗಾಯಕಿಯ ನಿರಂತರ ಒಡನಾಡಿಯಾಗಿದ್ದರು.
ಆಶಾ ಭೋಸ್ಲೆ ವೃತ್ತಿಜೀವನ
ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ, ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾಗಿ ಆಶಾ ಭೋಸ್ಲೆ ಅವರು ಗುರುತಿಸಿಕೊಂಡಿದ್ದಾರೆ. ಹಿಂದಿ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಇವರದ್ದು ಮೇರು ಸಾಧನೆಯಾಗಿದೆ. ಆಶಾ ಅವರ ಅಕ್ಕ ದಿವಂಗತ ಲತಾ ಮಂಗೇಶ್ಕರ್ ಸಹ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಇವರಿಬ್ಬರ ನಡುವೆ ಉತ್ತಮ ಹಾಗೂ ಧನಾತ್ಮಕ ಪೈಪೋಟಿ ಇತ್ತು. 1933 ರಲ್ಲಿ ಸಂಗೀತ ಮಂಗೇಶ್ಕರ್ ಕುಟುಂಬದಲ್ಲಿ ಜನಿಸಿದ ಆಶಾ ತಮ್ಮ 9 ನೇ ವಯಸ್ಸಿನಲ್ಲಿ ವೃತ್ತಿಪರವಾಗಿ ಹಾಡಲು ಪ್ರಾರಂಭಿಸಿದರು. ಅವರು 1943 ರಲ್ಲಿ ತಮ್ಮ ಮೊದಲ ಚಲನಚಿತ್ರ ಹಾಡನ್ನು ರೆಕಾರ್ಡ್ ಮಾಡಿದ. 50ರ ದಶಕದ ಹೊತ್ತಿಗೆ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದರು. ಮುಂದಿನ ಮೂರು ದಶಕಗಳಲ್ಲಿ, ಅವರು ಹೆಚ್ಚಿನ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಿದರು ಹೆಚ್ಚು ಬೇಡಿಕೆ ಗಳಿಸಿದ್ದ ಗಾಯಕಿ ಎನ್ನುವ ಖ್ಯಾತಿ ಆಶಾ ಅವರದ್ದು.
ಪ್ರಾರಂಭದ ದಿನಗಳಲ್ಲಿ ಅವರು ಕ್ಯಾಬರೆ ಅಥವಾ ಇಂದು ಐಟಂ ಹಾಡುಗಳು ಎಂದು ಕರೆಯಲ್ಪಡುವ ನೃತ್ಯಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಿದ್ದರು. ಮುಂದೆ ಆಶಾ ಅವರಿಗೆ ಹಲವು ವೈವಿಧ್ಯಮ ಅವಕಾಶಗಳು ಬಂದವು. ಉಮ್ರಾವ್ ಜಾನ್‌ನಲ್ಲಿ ಗಜಲ್‌ಗಳನ್ನು ಸಹ ಅದ್ಭುತವಾಗಿ ಹಾಡಿದರು. ಏಳು ಬಾರಿ ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದರು ಮತ್ತು ಉಮ್ರಾವ್ ಜಾನ್‌ನ ದಿಲ್ ಚೀಜ್ ಕ್ಯಾ ಹೈ ಮತ್ತು ಇಜಾಜತ್‌ನ ಮೇರಾ ಕುಚ್ ಸಾಮಾನ್‌ಗಾಗಿ ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು.
ಇಂದಿನ ಹಾಡುಗಳನ್ನು ನಾನು ಕೇಳುವುದಿಲ್ಲ
ಆಶಾ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಸಾಧನೆ ಮಾಡಿದ್ದರು. ಈಚೆಗೆ ಮೈ ಸಚ್ ಬೋಲು ತೋ ಮೈ ಆಜ್ ಕೆ ಗಾನೆ ಸುಂತಿ ಹಿ ನಹಿ ಹೂ. / ನಾನು ನಿಜ ಹೇಳುತ್ತೇನೆ ಇಂದಿನ ಹಾಡುಗಳನ್ನು ನಾನು ಕೇಳುವುದಿಲ್ಲ ಎಂದು HT ಸಂದರ್ಶನವೊಂದರಲ್ಲಿ ಹೇಳಿದ್ದರು. ನಾನು ದಿವಂಗತ ಗಾಯಕ ಭೀಮಸೇನ್ ಜೋಶಿ ಅವರ ಹಾಡುಗಳು, ಶಾಸ್ತ್ರೀಯ ಹಾಡುಗಳು ಮತ್ತು ಗಜಲ್‌ಗಳನ್ನು ಕೇಳುತ್ತೇನೆ ಮತ್ತು ಕಲಿಯುತ್ತೇನೆ ಮತ್ತು ಅದೇ ಸಮಯದಲ್ಲಿ ನನ್ನ ಹಾಡುಗಳನ್ನು ಉತ್ತಮಗೊಳಿಸುತ್ತೇನೆ. ಇದರಿಂದಾಗಿ, ನನ್ನ ಹಾಡುವ ಸಾಮರ್ಥ್ಯವು ಉತ್ತಮವಾಗುತ್ತವೆ ಎಂದಿದ್ದರು.












Click it and Unblock the Notifications