ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಡೋಮ್ ಹೆಚ್ಚು ಬಳಸುತ್ತಿರುವುದು ಮುಸ್ಲಿಮರೇ; ಆರೆಸ್ಸೆಸ್ ಮುಖ್ಯಸ್ಥರಿಗೆ ಒವೈಸಿ ಟಾಂಟ್

|
Google Oneindia Kannada News

ಹೈದರಾಬಾದ್, ಅ. 9: ದೇಶದಲ್ಲಿ ಮುಸಲ್ಮಾನರ ಸಂಖ್ಯೆ ಏರುತ್ತಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪರೋಕ್ಷವಾಗಿ ಮಾಡಿದ ಕಾಮೆಂಟ್‌ಗೆ ಒವೈಸಿ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ. ಬದಲಾಗಿ ಮುಸ್ಲಿಮರೇ ಹೆಚ್ಚಾಗಿ ಕಾಂಡೋಮ್ ಬಳಸುತ್ತಿರುವುದು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಸರಾ ಪಥಸಂಚಲನದ ವೇಳೆ ಸರಸಂಘಚಾಲಕ ಮೋಹನ್ ಭಾಗವತ್ ಮಾತನಾಡುತ್ತಾ, ಭಾರತಕ್ಕೆ ಜನಸಂಖ್ಯಾ ನಿಯಂತ್ರಣಕ್ಕೆ ನೀತಿ ರೂಪಿಸುವ ಅಗತ್ಯತೆ ಇದೆ. ಎಲ್ಲರಿಗೂ ಅನ್ವಯ ಆಗುವ ಕಾನೂನು ಬರಬೇಕಿದೆ ಎಂದು ಹೇಳಿದ್ದರು. ಅವರ ಆ ಹೇಳಿಕೆಗೆ ಒವೈಸಿ ಪ್ರತಿಕ್ರಿಯಿಸಿದ್ದು ತಮ್ಮ ಭಾಷಣದ ತುಣುಕೊಂದನ್ನು ಸೋಷಿಯಲ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಹಮದಾಬಾದ್‌ ಕನ್ನಡ ಸಂಘ ಮೆಚ್ಚಿ ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿಅಹಮದಾಬಾದ್‌ ಕನ್ನಡ ಸಂಘ ಮೆಚ್ಚಿ ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ

"ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿಲ್ಲ. ಬದಲಾಗಿ ಇಳಿಯುತ್ತಿದೆ. ಹುಟ್ಟುವ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ. ಯಾರು ಹೆಚ್ಚು ಕಾಂಡೂಮ್ ಬಳಸುತ್ತಿರುವುದು? ನಾವೆಯೇ. ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ," ಎಂದು ಒವೈಸಿ ಈ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಹೆಚ್ಚು ಬೆಳಕು ಚೆಲ್ಲಲು ಒವೈಸಿ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ವರದಿಯೊಂದನ್ನು ಉಲ್ಲೇಖಿಸಿದ್ದು, ಅದರಲ್ಲಿ ಮುಸ್ಲಿಮರಲ್ಲಿ ಸಂತಾನೋತ್ಪತ್ತಿ ದರ (ಟಿಎಫ್‌ಆರ್) ಎಲ್ಲರಿಗಿಂತ ಕಡಿಮೆಗೊಂಡಿದೆ ಎಂದಿದ್ದಾರೆ.

ಹಿಂದು ರಾಷ್ಟ್ರ ಭಾರತ ವಿರೋಧಿ

ಹಿಂದು ರಾಷ್ಟ್ರ ಭಾರತ ವಿರೋಧಿ

ಇದೇ ವೇಳೆ, ಕಾಣೆಯಾಗುತ್ತಿರುವ ಹಿಂದೂ ಹೆಣ್ಮಕ್ಕಳ ಬಗ್ಗೆ ಮಾತನಾಡುವಂತೆ ಒವೈಸಿ ಆರೆಸ್ಸೆಸ್ ಮುಖ್ಯಸ್ಥರಿಗೆ ಸವಾಲು ಹಾಕಿದ್ದಾರೆ. "ಮೋಹನ್ ಭಾಗವತ್‌ಗೆ ನಾನು ಒಂದು ಪ್ರಶ್ನೆ ಕೇಳಬಯಸುತ್ತೇನೆ 2000ರಿಂದ 2019ರವರೆಗೂ ನಮ್ಮ ಲಕ್ಷಾಂತರ ಹಿಂದೂ ಸಹೋದರರಿಯರು ಕಾಣೆಯಾಗಿದ್ದಾರೆ. ಇದು ಸರಕಾರ ನೀಡಿದ ಅಂಕಿ ಅಂಶ. ಈ ಬಗ್ಗೆ ಅವರು ಮಾತನಾಡುವುದಿಲ್ಲ" ಎಂದು ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷದ ಮುಖ್ಯ ಮುಖ್ಯಸ್ಥರು ತಿಳಿಸಿದ್ದಾರೆ.

ಇನ್ನು, ಹಿಂದೂ ರಾಷ್ಟ್ರ ಎಂದರೆ ಭಾರತದ ರಾಷ್ಟ್ರೀಯತೆ ಎಂಬ ಪರಿಕಲ್ಪಯನ್ನು ಒವೈಸಿ ಇದೇ ವೇಳೆ ತಳ್ಳಿಹಾಕಿದ್ದಾರೆ. "ಭಾರತೀಯ ರಾಷ್ಟ್ರೀಯತೆಗೆ ಹಿಂದೂ ರಾಷ್ಟ್ರ ವಿರುದ್ಧವಾಗಿದೆ. ಹಿಂದೂ ರಾಷ್ಟ್ರ ಪರಿಕಲ್ಪನೆಯು ದೇಶ ವಿರೋಧಿಯಾಗಿದೆ. ಭಾರತಕ್ಕೆ ವಿರುದ್ಧವಾಗಿದೆ" ಎಂದು ಅಸಾದುದ್ದೀನ್ ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಬಗ್ಗೆ ದೀದಿ ಮೃದು

ಮೋದಿ ಬಗ್ಗೆ ದೀದಿ ಮೃದು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಕೆಲ ವಿಚಾರಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಮೃದುವಾಗಿ ಮಾತನಾಡುತ್ತಿರುವ ಬಗ್ಗೆ ಒವೈಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇಶದ ತನಿಖಾ ಸಂಸ್ಥೆಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಉದ್ಯಮಿಗಳು ದೇಶ ಬಿಟ್ಟು ಹೋಗುತ್ತಿರುವ ವಿಚಾರದ ಬಗ್ಗೆ ಪ್ರಧಾನಿ ಮೋದಿ ಪರವಾಗಿ ಮಮತಾ ಮಾತನಾಡಿದ್ದರು. ಆ ಬಗ್ಗೆ ಒವೈಸಿ ವ್ಯಂಗ್ಯ ಮಾಡಿದ್ದಾರೆ.

"ಬಂಗಾಳಕ್ಕೆ ನಾನು ಹೋದರೆ ನಮ್ಮನ್ನು ಬಿಜೆಪಿಯ ಬಿ-ಟೀಮ್ ಎನ್ನುತ್ತಾರೆ. ಇವರಿಗೆ ಮೋದಿ ಒಳ್ಳೆಯವರು, ಒವೈಸಿ ಕೆಟ್ಟವರು" ಎಂದು ಮಮತಾ ಬ್ಯಾನರ್ಜಿಯನ್ನು ಒವೈಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಓಪನ್ ಜೈಲ್‌ನಲ್ಲಿ ಮುಸ್ಲಿಮರು

ಓಪನ್ ಜೈಲ್‌ನಲ್ಲಿ ಮುಸ್ಲಿಮರು

ಬಿಜೆಪಿ ಆಡಳಿತದ ಅವಧಿಯಲ್ಲಿ ಮುಸ್ಲಿಮರು ಭಯಭೀತ ಸ್ಥಿತಿಯಲ್ಲಿದ್ದಾರೆ ಎಂದು ಅಸಾದುದ್ದೀನ್ ಒವೈಸಿ ಮತ್ತೊಮ್ಮೆ ಆರೋಪಿಸಿದ್ದಾರೆ. ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲಿ ಮುಸ್ಲಿಮರು ಮುಕ್ತ ಕಾರಾಗೃಹದಲ್ಲಿ ಬದುಕುತ್ತಿರುವಂತೆ ತೋರುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಕಂಬಕ್ಕೆ ಕಟ್ಟಿ ಹೊಡೆದ ಘಟನೆ

ಕಂಬಕ್ಕೆ ಕಟ್ಟಿ ಹೊಡೆದ ಘಟನೆ

ಇತ್ತೀಚೆಗೆ ಗುಜರಾತ್‌ನಲ್ಲಿ ಪೊಲೀಸರು ಮುಸ್ಲಿಮ್ ಯುವಕರನ್ನು ಕಂಬಕ್ಕೆ ಕಟ್ಟಿ ಹೊಡೆದ ಘಟನೆ ಬಗ್ಗೆ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಇದು ನಮ್ಮ ಮರ್ಯಾದೆಯಾ? ಮಿಸ್ಟರ್ ಪ್ರೈಮ್ ಮಿನಿಸ್ಟರ್ ನೀವು ಗುಜರಾತ್‌ನವರಾಗಿದ್ದೀರಿ. ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನಿಮ್ಮ ರಾಜ್ಯದಲ್ಲಿ ಮುಸ್ಲಿಮರನ್ನು ಕಂಬಕ್ಕೆ ಕಟ್ಟಿ ಹೊಡೆಯಲಾಗುತ್ತಿದ್ದರೆ ಜನರು ಶಿಳ್ಳೆ ಹೊಡೆಯುತ್ತಾರೆ. ಕೋರ್ಟ್‌ಗಳನ್ನು ಮುಚ್ಚಿ, ಪೊಲೀಸ್ ಪಡೆಯನ್ನೇ ಸಮಾಪ್ತಿಗೊಳಿಸಿ" ಎಂದು ಒವೈಸಿ ಸಲಹೆ ನೀಡಿದ್ದಾರೆ.

ಇತ್ತೀಚೆಗೆ, ಗುಜರಾತ್‌ನಲ್ಲಿ ಗರ್ಬ ನರ್ತನ ಕಾರ್ಯಕ್ರಮ ನಡೆಯುತ್ತಿದ್ದಾಗ ದುಷ್ಕರ್ಮಿಗಳು ಕಲ್ಲೆಸೆದಿದ್ದರು. ಆ ಘಟನೆಯಲ್ಲಿ ಆರೋಪಿಗಳೆಂದು ಕೆಲ ಮುಸ್ಲಿಮರನ್ನು ಬಂಧಿಸಲಾಗಿತ್ತು. ಅವರನ್ನು ಪೊಲೀಸರು ಕಂಬಕ್ಕೆ ಕಟ್ಟಿ ಛಡಿ ಏಟಿನ ರೀತಿ ಹೊಡೆಯಲಾಗುತ್ತಿತ್ತು. ಅದು ಆಗಿದ್ದು ಸಾರ್ವಜನಿಕ ಪ್ರದೇಶದಲ್ಲಿ, ನೂರಾರು ಜನರ ಸಮ್ಮುಖದಲ್ಲಿ. ಹಾಗೆ ಹೊಡೆಯುತ್ತಿದ್ದ ದೃಶ್ಯವನ್ನು ಜನರು ನೋಡಿ ಖುಷಿಪಡುತ್ತಿದ್ದುದು ವೈರಲ್ ಆದ ವಿಡಿಯೋಗಳಿಂದ ತಿಳಿದುಬರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
AIMIM chief Asaduddin Owaisi has said, there is no rise in muslim population in India, instead it is declining. and it is muslims who are using condoms more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X