ಗೋಡೆಯಾಚೆಗಿನ ಉಗ್ರರ ಪತ್ತೆ ಹಚ್ಚುವ ಪರಿಕರ ಭಾರತೀಯ ಸೇನೆಗೆ ಸೇರ್ಪಡೆ

ಸುಮಾರು 50ರಿಂದ 70 ಮೀಟರ್ ಗಳ ವರೆಗೆ ಗೋಡೆಗಳ ಅಥವಾ ಮತ್ಯಾವುದೇ ಅಡೆತಡೆಗಳ ನಡುವೆ ಅಡಗಿ ಕುಳಿತಿರಬಹುದಾದ ಉಗ್ರರನ್ನು ಪತ್ತೆ ಹಚ್ಚಲು ಸಹಾಯ ಮಾಡುವ ವಿಶೇಷ ರಾಡಾರ್ ಪರಿಕರವನ್ನು ಭಾರತೀಯ ಸೇನೆ ಖರೀದಿಸಲಿದೆ. ಇಸ್ರೇಲ್ ಹಾಗೂ ಅಮೆರಿಕ ಈ ಪರಿಕರಗಳನ

ನವದೆಹಲಿ, ಜೂನ್ 10: ವಾರದ ಹಿಂದಷ್ಟೇ, ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡುವುದಾಗಿ ಪ್ರಕಟಿಸಿದ್ದ ಭಾರತೀಯ ಸೇನೆ, ಇದೀಗ ಗೋಡೆಗಳ ಹಿಂದೆ ಅಥವಾ ಕಟ್ಟಡಗಳ ಒಳಗೆ ಅವಿತಿರುವ ಉಗ್ರರನ್ನು ಪತ್ತೆ ಹಚ್ಚಲು ನೆರವಾಗುವ ರಾಡಾರ್ ಪರಿಕರಗಳನ್ನು ಸೈನಿಕರಿಗೆ ನೀಡಲು ನಿರ್ಧರಿಸಿದೆ. ಈ ಪರಿಕರಗಳನ್ನು ಇಸ್ರೇಲ್ ಹಾಗೂ ಅಮೆರಿಕ ತಯಾರಿಸಿಕೊಡಲಿವೆ.

ಭಾರತದ ಗಡಿಗಳಲ್ಲಿ ಉಗ್ರರು ಹಾಗೂ ನುಸುಳುಕೋರರ ಜತೆಗಿನ ಕಾಳಗಗಳಲ್ಲಿ ಭಾರತೀಯ ಯೋಧರು ಗಂಭೀರವಾಗಿ ಗಾಯಗೊಳ್ಳುವುದನ್ನು ತಪ್ಪಿಸಲು ಬೇಕಾದ ನಾನಾ ಸೌಲಭ್ಯಗಳನ್ನು ಅಳವಡಿಸಲು ಭಾರತೀಯ ಸೇನೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ರಾಡಾರ್ ಮಾಪಕಗಳನ್ನು ಖರೀದಿಸಲು ಸೇನೆ ಮುಂದಾಗಿದೆ.

Army to buy radars that see through walls

ಅಂದಹಾಗೆ, ಈ ಪ್ರತಿಯೊಂದು ರಾಡಾರ್ ಮಾಪಕದಿಂದ ಸುಮಾರು 50ರಿಂದ 50 ಮೀಟರ್ ದೂರದವರೆಗೆ ಯಾವುದೇ ಅಡಗುದಾಣಗಳಲ್ಲಿ ಅವಿತಿರುವ ಉಗ್ರರನ್ನು ಪತ್ತೆ ಹಚ್ಚಲು ಸಾಧ್ಯವಿದೆ.

ಆದರೆ, ಈ ಪರಿಕರದ ಬೆಲೆ ಮಾತ್ರ ದುಬಾರಿ. ಪ್ರತಿ ಪರಿಕರಕ್ಕೆ ಏನಿಲ್ಲವೆಂದರೂ, ಸುಮಾರು 60 ಲಕ್ಷ ಬೆಲೆಯಿದೆ. ಆದರೆ, ಇದರ ಅಗತ್ಯತೆ ಇರುವುದರಿಂದ ಸೇನೆ ಇವುಗಳನ್ನು ಖರೀದಿಸಲು ಸಿದ್ಧತೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+