ಸೇನೆ ಮೇಜರ್ ಪತ್ನಿಯ ಹತ್ಯೆ, ಮತ್ತೋರ್ವ ಮೇಜರ್ ಬಂಧನ

ನವದೆಹಲಿ, ಜೂನ್ 24: ದೆಹಲಿಯ ಕಂಟೋನ್ಮೆಂಟ್ ಸಮೀಪ ಕತ್ತು ಕುಯ್ದ ಸ್ಥಿತಿಯಲ್ಲಿ ಭಾರತೀಯ ಭೂ ಸೇನೆಯ ಮೇಜರ್ ಅವರ ಪತ್ನಿಯ ಮೃತ ದೇಶ ಶನಿವಾರ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಮೇಜರ್ ಅವರನ್ನು ಬಂಧಿಸಲಾಗಿದೆ.

35 ವರ್ಷದ ಶೈಲಜಾ ದ್ವಿವೇದಿ ಅವರ ಮೃತ ದೇಹ ರಸ್ತೆ ಬದಿಯಲ್ಲಿ ಪತ್ತೆಯಾದಾಗ ಅವರ ದೇಹದ ಮೇಲೆ ಹಲವು ಬಾರಿ ಕಾರು ಹತ್ತಿಸಿದ ಸ್ಥಿತಿಯಲ್ಲಿತ್ತು. ಈ ದಂಪತಿಗೆ ಆಪ್ತರಾಗಿದ್ದ ಮೇಜರ್ ಒಬ್ಬರು ಈ ಕೊಲೆಯ ಹಿಂದೆ ಇದ್ದಾರೆ ಎಂಬ ಅನುಮಾನ ಇತ್ತು.

ಇದೇ ಅನುಮಾನದ ಮೇಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನಿಖಿಲ್ ಹಂದ ಅವರನ್ನು ಇಂದು ಬಂಧಿಸಲಾಗಿದೆ. ಮಹಿಳೆ ಕೊಲೆಯಾದ ನಂತರ ನಿಖಿಲ್ ತಲೆ ತಪ್ಪಿಸಿಕೊಂಡಿದ್ದರು, ಮತ್ತು ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇದೀಗ ಅವರನ್ನು ಮೀರತ್ ನಲ್ಲಿ ಬಂಧಿಸಲಾಗಿದೆ.

Army Major arrests in accused of murdering wife of another Army Major

ಶೈಲಜಾ ಅವರು ಸೇನೆಯ ವಾಹನದಲ್ಲಿ ಶನಿವಾರ ಚಿಕಿತ್ಸೆಗಾಗಿ ಮನೆಯಿಂದ ಹೊರಟಿದ್ದರು. ನಂತರ ಅವರ ವಾಪಸ್ ಕರೆದುಕೊಂಡು ಬರಲು ಚಾಲಕ ಕರೆ ಮಾಡಿದಾಗ ಅವರು ಚಿಕಿತ್ಸೆಗೆ ಬಂದಿಲ್ಲ ಎಂಬ ವಿಚಾರ ಗೊತ್ತಾಗಿತ್ತು. ಇದಾದ ನಂತರ ಚಾಲಕ ಪೆರೇಡ್ ಗ್ರೌಂಡ್ ನಲ್ಲಿರುವ ಮನೆಗೆ ಬಂದು ಮೇಜರ್ ಅಮಿತ್ ದ್ವಿವೇದಿಯವರಿಗೆ ಮಾಹಿತಿ ನೀಡಿದ್ದರು.

ಬಳಿಕ 1.28ರ ಸುಮಾರಿಗೆ ಮಹಿಳೆ ಮೃತ ದೇಹ ಬ್ರಾರ್ ಸ್ಕ್ವೇರ್ ನಲ್ಲಿ ಪತ್ತೆಯಾಗಿತ್ತು. ಆದರೆ ಆಕೆ ಶೈಲಜಾ ದ್ವಿವೇದಿ ಎಂದು ತಿಳಿದಿರಲಿಲ್ಲ. ಸಂಜೆ 4.30ರ ವೇಳೆಗೆ ಅಮಿತ್ ಪತ್ನಿ ನಾಪತ್ತೆಯಾಗಿರುವ ಪ್ರಕರಣವನ್ನು ನರೈನಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಕೊನೆಗೆ ಅದು ಅವರ ಪತ್ನಿಯ ಮೃತ ದೇಹ ಎಂದು ತಿಳಿದು ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+