ಹೊಸ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, ತೃತೀಯಲಿಂಗಿಗೆ ಪ್ರಮುಖ ಸ್ಥಾನ
Recommended Video

ನವದೆಹಲಿ, ಜನವರಿ 08: ಸಾಮಾಜಿಕ ಕಾರ್ಯಕರ್ತ, ಮಾಜಿ ಪತ್ರಕರ್ತೆ, ತೃತೀಯಲಿಂಗಿ ಅಪ್ಸರಾ ರೆಡ್ಡಿ ಅವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ (ಎಐಎಂಸಿ) ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ 134 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರಿಗೆ ಇಂಥ ಹುದ್ದೆಯನ್ನು ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ(ಜನವರಿ 08)ದಂದು ಅಪ್ಸರಾ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಕಾಲೇಜು ದಿನಗಳಿಂದಲೇ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಅಪ್ಸರ ಭಾಗವಹಿಸಿದ್ದರು. ನಂತರ ತಮಿಳುನಾಡಿನ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾರೊಂದಿಗೆ ಚರ್ಚಿಸಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು.
Congress: Apsara Reddy, one of India’s most well-known transgender journalist and activist has been appointed as National General Secretary, All India Mahila Congress (AIMC) by party president Rahul Gandhi pic.twitter.com/wcQY4TNEVw
— ANI (@ANI) January 8, 2019
2016ರಲ್ಲಿ ಭಾರತೀಯ ಜನತಾ ಪಕ್ಷದಲ್ಲಿದ್ದ ಅಪ್ಸರಾ ಅವರು ನಂತರ ಅಣ್ಣಾಡಿಎಂಕೆ (ಎಐಎಡಿಎಂಕೆ) ಪಕ್ಷ ವಕ್ತಾರರಾಗಿದ್ದರು. ಬಿಜೆಪಿಯಲ್ಲಿ ಸಮಾನತೆ ಇಲ್ಲ ಎಂದು ಟೀಕಿಸಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದ ನಂತರ ಶಶಿಕಲಾ ನಟರಾಜನ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು.












Click it and Unblock the Notifications