ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಲೋರೊಥಾನ್ ಸರಣಿ 13' ಚಿತ್ರಕಲಾ ಉತ್ಸವಕ್ಕೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಆಗಸ್ಟ್ 01: ಚಿತ್ರಕಲೆಗಳಿಗೆ ಮರು ಜೀವ ತುಂಬಲು ಮತ್ತುಅದನ್ನು ಉತ್ತೇಜಿಸುವ ಜತೆಗೆ ಸಾಧ್ಯವಾದಷ್ಟು ಸೃಜನಶೀಲತೆಯಿಂದ ಕಾಗದದ ಮೇಲೆ ಕಲಾವಿದರ ಕಲ್ಪನೆಯನ್ನು ಸೆರೆಹಿಡಿಯುವ ಉದ್ದೇಶದಿಂದ ''ಕಲೊರೋಥಾನ್-ನಿಮ್ಮ ಕಲ್ಪನೆಗೆ ಬಣ್ಣತುಂಬಿ'' (Colorothon - Draw your imagination season 13) ಸರಣಿ 13 ಎಂಬ ರಾಷ್ಟ್ರೀಯ ಉತ್ಸವಕ್ಕೆ(ಸ್ಪರ್ಧೆ) ಅರ್ಜಿ ಆಹ್ವಾನಿಸಲಾಗಿದೆ.

ಭಾರತದ ಅತೀ ದೊಡ್ಡ ಆನ್‌ಲೈನ್‌ ಚಿತ್ರಕಲಾ ಸ್ಪರ್ಧೆ ಆಗಿರುವ ಈ ಉತ್ಸವವನ್ನು ಬ್ರೀಥ್ ಎಂಟರ್‌ಟೈನ್‌ಮೆಂಟ್ ಮತ್ತು ಕಿಡ್ಸ್‌ಚೌಪಲ್‌ನ ನಡೆಸಲಿವೆ. ಇದೊಂದು ಭಾರತ ಮಟ್ಟದ ಕಾರ್ಯಕ್ರಮವಾಗಿದ್ದು, ಇದರಲ್ಲಿ ನವದೆಹಲಿ, ಲಕ್ನೋ, ಚೆನ್ನೈ, ಬೆಂಗಳೂರು, ಮತ್ತು ಹೈದರಾಬಾದ್‌ ನಗರಗಳು ಸೇರಿದಂತೆ ದೇಶದಾದ್ಯಂತ ವಿವಿಧ ಭಾಗಗಳ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಸ್ಪರ್ಧೆಯಲ್ಲಿ ಈ ಭಾರಿ ದೇಶದ ಯಾವ ಮೂಲೆಯ ಕಲಾವಿದ ಸಹ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ನ.14ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಚಿತ್ರಕಲೆ ಪ್ರೋತ್ಸಾಹಿಸಿ ಮರು ಜೀವ ತುಂಬುವ ಉದ್ದೇಶದಿಂದ ಈ ಆನ್‌ಲೈನ್ ಉತ್ಸವ ನಡೆಯಲಿದೆ. ಇದು ವಿದ್ಯಾರ್ಥಿಗಳಿಗೆ ಶಿಕ್ಷಣದ ಏಕಮುಖ ದಿನಚರಿಯಿಂದ ಮುಕ್ತಿ ನೀಡಲು ನೆರವಾಗುತ್ತದೆ. ಕಲಾವಿದರು ಆನ್‌ಲೈನ್‌ನಲ್ಲಿ ಚಿತ್ರಿಸುವ ಮೂಲಕ ಎಕ್ಸ್‌ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಮಾಡಲಿದ್ದಾರೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಆಂಭವಾಗಲಿದೆ. ಕಿಡ್ಸ ಚೌಪಲ್ ಮೊಬೈಲ್ ಅಪ್ಲಿಕೇಷನ್ ಗಳಲ್ಲಿ ಅರ್ಜಿ ಅಪ್ಲೋಡ್ ಮಾಡಬಹುದಾಗಿದೆ.

Application Invite for Colorothon Series 13 online Art competition

ಈವರೆಗೆ 'ಕಲೊರೋಥಾನ್' ಸ್ಪರ್ಧಾ ಉತ್ಸವವನ್ನು ಭೌತಿಕವಾಗಿ ನಡೆಸಲಾಗಿತ್ತು. ಕೋವಿಡ್ ಹಿನ್ನೆಲೆ ಕಲಾವಿದರು, ಕಲೆಗೆ ತುಸು ಹಿನ್ನೆಲೆ ಉಂಟಾಗಿದ್ದರ ಪರಿಣಾಮ ಈ ಭಾರಿ 13ಸರಣಿಯನ್ನು ಆನ್‌ಲೈನ್‌ ನಲ್ಲಿ ಏರ್ಪಡಿಸಲಾಗಿದೆ. ಭೌತಿಕವಾಗಿ ನಡೆದ ಕಳೆದ 12ಸರಣಿಗಳು ಎಲ್ಲ ಕಲಾವಿದರನ್ನು ಒಳಗೊಳ್ಳಲು ಆಗಿರಲಿಲ್ಲ. ಕೋವಿಡ್ ಹಿನ್ನೆಲೆ ನಡೆಸುತ್ತಿರುವ ಆನ್‌ಲೈನ್‌ ನಿಂದಾಗಿ ಈ ಭಾರಿ ದೇಶದ ಮೂಲೆ ಮೂಲೆಗಳ ಕಲಾವಿದರ ಪಾಲ್ಗೊಳ್ಳಲು ಅವಕಾಶ ಸಿಕ್ಕಂತಾಗಿದೆ ಎಂದು 15 ವರ್ಷದ ಬಹುಮುಖ ಪ್ರತಿಭೆ, ಕಲಾವಿದೆ ಮತ್ತು ಪ್ರದರ್ಶಕಿ, ಕಿಡ್ಸ್‌ಚೌಪಾಲ್‌ನ ಬ್ರಾಂಡ್ ಅಂಬಾಸಿಡರ್ ತಿಸ್ಯಾ ಸಿಂಗ್ ತಿಳಿಸಿದರು.

ಈ ತಿಸ್ಯಾ ಸಿಂಗ್ ಅವರೇ ಈ ಭಾರಿಯ ಸ್ಪರ್ಧೆಯ ನೇತೃತ್ವ ವಹಿಸಲಿದ್ದಾರೆ. ಇವರಿಗೆ ಸಾಥ್ ಕಿಡ್ಸ ಚೌಪಲ್ ಸಹ ಸಂಸ್ಥಾಪಕ ಧೀರಜ್ ಸಿಂಗ್, ಆಶಿಶ್ ಶ್ರೀವಾಸ್ತವ ಮತ್ತು ದೇವೇಂದ್ರ ಜೈಸ್ವಾಲ್ ಅವರು ಮಕ್ಕಳಿಗೆ ಪ್ಯಾನ್ ಇಂಡಿಯಾ ಕಾರ್ಯಕ್ರಮ ರೂಪಿಸಿ ಕೊಟ್ಟಿದ್ದಾರೆ. ದೇಶಾದ್ಯಂತದ ಮಕ್ಕಳು ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಕಲೊರೊಥಾನ್‌ನ ಸಂಸ್ಥಾಪಕ ಟ್ರಸ್ಟಿ ಕಿಶೋರ್ ಜೋಸೆಫ್ ಹೇಳಿದರು.

Application Invite for Colorothon Series 13 online Art competition

ಉನ್ನತ ಸ್ಥರದ 300 ವರ್ಣಚಿತ್ರ Colorothon ನ ಚಾರಿಟಿ ಪಾಲುದಾರರಿಗೆ ವಿತರಿಸಲಾಗುವುದು. ಯುವ ಪ್ರತಿಭೆಗಳು ಉದ್ಯಮಿಗಳಾಗಲು ಶಾಪ್‌ಡಾಟ್ ಕಿಡ್ಸಚೌಪಲ್ ಟಾಟ್ ಕಾಮ್‌ನಲ್ಲಿ ಅಗ್ರ ಇನ್ನೂರು ವರ್ಣಚಿತ್ರ ಖರೀದಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.

ಸ್ಫರ್ಧಾ ಉತ್ಸವದ ಸಂಕ್ಷಿಪ್ತ ವಿವರ

1. ಸ್ಪರ್ಧೆಗೆ ಉಚಿತ ಪ್ರವೇಶ ಇರಲಿದೆ.

2. ಮಕ್ಕಳ ದಿನಾಚರಣೆ (ನ.14 -ಡಿ.15 ರವರೆಗೆ) ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.

3. ಸ್ಪರ್ಧೆಯನ್ನು ವಯಸ್ಸಿನ ಆಧಾರದಲ್ಲಿ ಮಕ್ಕಳಿಗಾಗಿ ಮಾತ್ರ ಮೂರು ವಿಭಾಗವಾಗಿ ವಿಂಗಡಿಸಲಾಗಿದೆ. 'ಆರ್ಟ್ ಟ್ರೀಟ್' ನಲ್ಲಿ ಎಲ್‌ಕೆಜಿಯಿಂದ 2 ನೇತರಗತಿ, 'ಆಲ್ ಎಬೌಂಟ್ ಶೇಡ್ಸ್'ನಲ್ಲಿ 3ರಿಂದ 7ನೇ ತರಗತಿ ಮಕ್ಕಳು ಮತ್ತು 'ಕ್ರಿಯೇಟಿವ್ ಸ್ಟ್ರೀಕ್' ನಲ್ಲಿ 8ರಿಂದ 12ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

4. ಕಲಾವಿದರಿಗೆ ಇ- ಪ್ರಮಾಣಪತ್ರ ಮತ್ತು ಎಕ್ಸ್ಲೂಸಿವ್ ವಲ್ಡ್ ರೆಕಾರ್ಡ್ ನಿಂದ ಮೆಚ್ಚುಗೆ ಪತ್ರ ದೊರೆಯಲಿದೆ.

5. ಪ್ರತಿ ವಿಭಾಗದಲ್ಲಿ 200ರಂತೆ ಒಟ್ಟು 600 ಅತ್ಯುತ್ತಮ ವರ್ಣಚಿತ್ರಗಳನ್ನು ಕಿಡ್ಸ್‌ಚೌಪಲ್ ಇ-ಕಾಮರ್ಸ್ ವೆಬ್‌ಸೈಟ್ ನಲ್ಲಿ ಹರಾಜಿಗೆ ಹಾಕಲು ಆಯ್ಕೆ ಆಗಲಿವೆ.

6. ಸಮಾರಂಭದಲ್ಲಿ ತೀರ್ಪುಗಾರರು ಆಯ್ಕೆ ಮಾಡುವ 15 ಅತ್ಯುತ್ತಮ ಚಿತ್ರಗಳಿಗೆ (ಪ್ರತಿ ವಿಭಾಗದಲ್ಲಿ 5ರಂತೆ) ಬಹುಮಾನ ನೀಡಲಾಗುವುದು.

English summary
Application Invite for 'Colorothon Series 13' online Art competition. The application process will begin on November 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X