MBA ಓದಿಲ್ಲ, ಆದ್ರೂ ವಿಶ್ವದ ಬೃಹತ್ ಟೆಕ್ ಕಂಪನಿಗೆ ಬಾಸ್: ಇದು ಆ್ಯಪಲ್‌ನ ಹೊಸ ಸಿಇಒ ಜಾನ್ ಟರ್ನಸ್ ಯಶೋಗಾಥೆ

ನಾಯಕತ್ವ ಎಂದರೆ ಕೇವಲ ದೊಡ್ಡ ದೊಡ್ಡ ಡಿಗ್ರಿ ಅಥವಾ ಎಂಬಿಎ ಪದವಿಗಳನ್ನ ಪಡೆದವರಲ್ಲಿ ಮಾತ್ರ ಇರುವುದಿಲ್ಲ ಎಂಬುದಕ್ಕೆ ಆ್ಯಪಲ್ ಕಂಪನಿಯ ಹೊಸ ಸಿಇಒ ಜಾನ್ ಟರ್ನಸ್ ಒಂದೊಳ್ಳೆ ಉದಾಹರಣೆ. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಟೆಕ್ ಕಂಪನಿಯೊಂದರ ಚುಕ್ಕಾಣಿ ಹಿಡಿದಿರುವ ಇವರ ಬಳಿ ಯಾವುದೇ ಮ್ಯಾನೇಜ್‌ಮೆಂಟ್ ಪದವಿ ಇಲ್ಲ ನೋಡಿ.

ಜಾನ್‌ ಅವರ ಹಿನ್ನೆಲೆಯನ್ನ ನೋಡುವುದಾದರೆ ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್. ಸೆಪ್ಟೆಂಬರ್ 1, 2026ರಂದು ಅಧಿಕೃತವಾಗಿ ಆ್ಯಪಲ್ ಕಂಪನಿಯ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಜಾನ್ ಟರ್ನಸ್ ಅವರ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿ.

Apple CEO John Ternus From Mechanical Engineer to Leading the World s Biggest Tech Giant

ಆ್ಯಪಲ್ ಹೊಸ ಸಿಇಒ ಜಾನ್ ಟರ್ನಸ್ ಹಿನ್ನೆಲೆ

ಜಾನ್ ಟರ್ನಸ್ ಅವರು ಉನ್ನತ ಹುದ್ದೆಗೇರಲು ಯಾವುದೇ ಸಾಂಪ್ರದಾಯಿಕ ಮಾರ್ಗವನ್ನ ಅನುಸರಿಸಲಿಲ್ಲ. ಆ್ಯಪಲ್ ಕಂಪನಿಗೆ ಸೇರುವ ಮೊದಲು ಅವರು ಸಾಮಾನ್ಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2001ರಲ್ಲಿ ಆ್ಯಪಲ್ ಸಂಸ್ಥೆಯನ್ನ ಸೇರಿದ ಅವರು, ತಮ್ಮ ಆಳವಾದ ಜ್ಞಾನ, ಕೌಶಲ್ಯ ಮತ್ತು ಪರಿಶ್ರಮದ ಮೂಲಕ ಹಂತ ಹಂತವಾಗಿ ಮೇಲೇರಿದರು.

ಆರಂಭದಲ್ಲಿ ಸಣ್ಣಪುಟ್ಟ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಕಷ್ಟಕರವಾದ ಟೆಕ್ನಿಕಲ್‌ ಸಮಸ್ಯೆಗಳನ್ನ ಬಗೆಹರಿಸುವ ಮೂಲಕ ಆಡಳಿತ ಮಂಡಳಿಯ ಗಮನ ಸೆಳೆದರು. ತಮ್ಮ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದ ಅವರು, ಇಂದು ಯಾವುದೇ ಉನ್ನತ ಮ್ಯಾನೇಜ್‌ಮೇಂಟ್‌ ಪದವಿ ಇಲ್ಲದೇ ಇದ್ದರೂ ಕೂಡ ಕಂಪನಿಯ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದರು.

ಐಫೋನ್‌ನಿಂದ ಮ್ಯಾಕ್‌ವರೆಗೆ ಜಾನ್ ಟರ್ನಸ್ ಯಶಸ್ಸಿನ ಕಥೆ

ಆ್ಯಪಲ್ ಕಂಪನಿಯಲ್ಲಿ ಜಾನ್ ಟರ್ನಸ್ ಅವರ ಕೊಡುಗೆ ಅಪಾರ. ಇವರು ಕೇವಲ ಒಂದು ವಿಭಾಗಕ್ಕೆ ಸೀಮಿತವಾಗದೆ, ಕಂಪನಿಯ ಪ್ರಮುಖ ಉತ್ಪನ್ನಗಳಾದ ಐಫೋನ್, ಮ್ಯಾಕ್, ಐಪ್ಯಾಡ್, ಏರ್‌ಪಾಡ್ಸ್ ಮತ್ತು ಆ್ಯಪಲ್ ವಾಚ್ ಸೇರಿದಂತೆ ಹಾರ್ಡ್‌ವೇರ್ ವಿಭಾಗದ ನಾಯಕತ್ವವನ್ನ ಅವರು ಸರಿಯಾಗಿ ನಿಭಾಯಿಸಿದ್ದರು.

ಕಂಪನಿಯಲ್ಲಿ ಎಲ್ಲಾ ಉತ್ಪನ್ನಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆಯನ್ನ ಹೆಚ್ಚಿಸುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ಇವರ ನಿರಂತರ ಶ್ರಮ ಮತ್ತು ನಾಯಕತ್ವ ಗುಣಗಳಿಂದಾಗಿಯೇ ಇಂದು ತಂತ್ರಜ್ಞಾನ ವಲಯದಲ್ಲಿ ಹೊಸ ಮೈಲಿಗಲ್ಲುಗಳನ್ನ ಸಾಧಿಸಲು ಸಾಧ್ಯವಾಗಿದೆ.

ಕಾಲಾನಂತರದಲ್ಲಿ ಅವರು ಕಂಪನಿಯ ಜಾನ್‌ ಟರ್ನಸ್‌ ಒಂದು ಅನಿವಾರ್ಯ ಶಕ್ತಿಯಾಗಿ ರೂಪುಗೊಂಡರು. ಇದೇ ಕಾರಣಕ್ಕೆ ಅವರನ್ನ ಆ್ಯಪಲ್‌ನ ಭವಿಷ್ಯದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.

ನಾಯಕತ್ವದ ಪಾಠಗಳು

ಜಾನ್ ಟರ್ನಸ್ ಅವರ ಈ ಅದ್ಭುತ ಪಯಣ ನಮಗೆಲ್ಲರಿಗೂ ಒಂದು ಮೌಲ್ಯಯುತವಾದ ಪಾಠವನ್ನು ಕಲಿಸುತ್ತದೆ. ಒಂದು ಒಳ್ಳೆಯ ಡಿಗ್ರಿ ಕೇವಲ ಅವಕಾಶಗಳ ಬಾಗಿಲನ್ನ ಮಾತ್ರ ತೆರೆಯಬಹುದು, ಆದರೆ ನಿಮ್ಮ ಕೌಶಲ್ಯ, ಎಗ್ಸೀಗ್ಯುಶನ್‌, ಹೊಂದಿಕೊಳ್ಳುವಿಕೆ ಮತ್ತು ಪ್ರಸ್ತುತ ಜಗತ್ತಿನಲ್ಲಿ ಪರಿಣಾಮ ಬೀರುವ ಸಾಮರ್ಥ್ಯ ಇದ್ದರೆ ಮಾತ್ರ ನಿಮ್ಮನ್ನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.

ಇಂದು ನಾವು ಕೇವಲ ಪ್ರಮಾಣಪತ್ರಗಳನ್ನ ಸಂಗ್ರಹಿಸುವತ್ತ ಹೆಚ್ಚು ಗಮನ ಹರಿಸುತ್ತೇವೆ. ಆದರೆ ನಿಜವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮರೆತುಬಿಡುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+