ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ಯುವಕರ ಪ್ರೇರಕ ಶಕ್ತಿ apj@abdulkalam.com

By ಡಾ. ಅನಂತ ಕೃಷ್ಣನ್
|
Google Oneindia Kannada News

ಕೊಚ್ಚಿ, ಜು. 28: ದೇಶದ ಲಕ್ಷಾಂತರ ಯುವಕರಿಗೆ ಪ್ರೇರಣೆಯಂತಿದ್ದ [email protected] ತನ್ನ ಮಾತು ನಿಲ್ಲಿಸಲಿದೆ. ಕ್ಷಿಪಣಿ ಪಿತಾಮಹ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗೆ ಇ ಮೇಲ್ ಸಹ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.

ದಶಕಗಳ ಕಾಲದಿಂದ www.abdulkalam.com ವೆಬ್ ತಾಣದ ಮೂಲಕ ಲಕ್ಷಾಂತರ ಮಂದಿ ತಮ್ಮ ಸಮಸ್ಯೆಗಳನ್ನು, ದೇಶದ ಕುರಿತಾದ ಕನಸುಗಳನ್ನು, ಪ್ರಶ್ನೆಗಳನ್ನು ಹಂಚಿಕೊಳ್ಳುತ್ತಿದ್ದರು.[ಅಗಲಿದ ಮಹಾನ್ ಚೇತನಕ್ಕೆ ದೇಶಾದ್ಯಂತ ಅಶ್ರುತರ್ಪಣ]

kalam

ಕಲಾಂರ ವೆಬ್ ತಾಣವನ್ನು ಅವರ ನೆಚ್ಚಿನ ಅನುಯಾಯಿಗಳಲ್ಲಿ ಒಬ್ಬರಾದ ವಿ. ಪೊನ್ನರಾಜ್ ನೋಡಿಕೊಳ್ಳುತ್ತಿದ್ದರು. ಕ್ಷಿಪಣಿ ಮಾನವನ ಯೋಚನೆಗಳು, ಚಿಂತನೆಗಳು ಈ ತಾಣದ ಮೂಲಕ ಲಕ್ಷಾಂತರ ಜನರಿಗೆ ಲಭ್ಯವಾಗುತ್ತಿತ್ತು.

ರಾಷ್ಟ್ರಪತಿಯಾಗಿ ದೇಶಕ್ಕೆ ಸೇವೆ ಸಲ್ಲಿಸಲು ಆರಂಭಿಸಿದ ಮೇಲೆ ಕಲಾಂ ಅಧಿಕೃತವಾಗಿ ಇಮೇಲ್ ([email protected] ) ಖಾತೆಯೊಂದನ್ನು ತೆರೆದರು. ಮಧ್ಯರಾತ್ರಿವರೆಗೂ ಕಲಾಂ ತಮಗೆ ಬಂದ ಪ್ರತಿಯೊಂದು ಇ ಮೇಲ್ ನ್ನು ಜಾಗರೂಕವಾಗಿ ಗಮನಿಸಿ ಉತ್ತರ ಬರೆಯುತ್ತಿದ್ದರು. ಸಮಸ್ಯೆ ಅಥವಾ ದೂರುಗಳಿದ್ದರೆ ಅದನ್ನು ತಕ್ಷಣ ಸಂಬಂಧಿಸಿದವರಿಗೆ ತಿಳಿಸುತ್ತಿದ್ದರು.[ಸರಳ ವ್ಯಕ್ತಿತ್ವದ ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ]

ಕಲಾಂ ಯಾವುದೇ ಕಾರ್ಯಕ್ರಮಕ್ಕೆ ತೆರಳಿದರೂ, ಸಂವಾದಕ್ಕೆ ಹೋದರೂ ನೀವು ನನಗೆ ಮೇಲ್ ಮಾಡಿ ಸಮಸ್ಯೆಗಳಿದ್ದರೆ ತಿಳಿಸಿ, ನಿಮ್ಮ ಸಲಹೆಗೂ ಮುಕ್ತ ಸ್ವಾಗತವಿದೆ ಎಂದು ವಿದ್ಯಾರ್ಥಿಗಳ ಬಳಿ, ಪತ್ರಕರ್ತರ ಬಳಿ ಹೇಳುತ್ತಿದ್ದರು.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ಸಂದರ್ಶಕರ ಬಳಿ ಕಲಾಂ ಏನು ಹೇಳಿದ್ದರು?
ಒಮ್ಮೆ ಪತ್ರಕರ್ತರೊಬ್ಬರಿಗೆ ಕಲಾಂ ಸಂದರ್ಶನ ಮಾಡುವ ಆಸೆ ಉಂಟಾಯಿತು. ಆದರೆ ಇದೇ ಸಮಯದಲ್ಲಿ ಕಲಾಂ ಸಂಬಂಧಿಕರೊಬ್ಬರಿಗೆ ಆರೋಗ್ಯ ಕೈ ಕೊಟ್ಟಿತು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಕಲಾಂ "ಯಾರೂ ನನ್ನ ಉತ್ತರವನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ನನ್ನ ಕುಟುಂಬ ಸದಸ್ಯರಿಗೆ ಆರೋಗ್ಯ ಸರಿ ಇಲ್ಲದಿರುವಾಗ ಸಂದರ್ಶನ ಅಗತ್ಯವಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದ್ದರು.

ತಿಂಗಳ ನಂತರ ಮತ್ತೆ ಸಂದರ್ಶನ ಮಾಡಲು ಅವಕಾಶ ಸಿಕ್ಕಿತು. ಇದಾದ ಮೇಲೆಯೇ ಒನ್ಇಂಡಿಯಾದಲ್ಲಿ ಕಲಾಂ ಯುವಕರಿಗೆ ನೀಡಿದ್ದ ಸಂದೇಶ ಪ್ರಕಟವಾಯಿತು. ಒನ್ಇಂಡಿಯಾ ಸಂಪಾದಕ ಎ.ಕೆ. ಖಾನ್ ಅವರೊಂದಿಗೆ ಮಾತನಾಡಿದ್ದ ಅಬ್ದುಲ್ ಕಲಾಂ ನ್ಯೂಸ್ ಪೋರ್ಟಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸ್ಫೂರ್ತಿದಾಯಕ ಸುದ್ದಿಗಳು, ನುಡಿಚಿತ್ರಗಳಿದ್ದರೆ ಅದನ್ನು ನನಗೆ ಮೇಲ್ ಮಾಡಿ ಎಂದು ತಿಳಿಸಿದ್ದರು. ಅದರಂತೆ ಮೇಲ್ ಮಾಡಿದ ಸುದ್ದಿಗಳನ್ನು ಓದುತ್ತಿದ್ದ ಕಲಾಂ ಕೆವನ್ನು ಮರುಟ್ವೀಟ್ ಮಾಡಿದ ದಾಖಲೆಗಳು ಇವೆ.

English summary
India's most-sought after email ID -- apj@abdulkalam.com -- will now go silent. Over the year, this email acted as an inspiring channel for millions of followers and well-wishers of former President Dr A P J Abdul Kalam, who passed away in Shillong yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X