Inter Results 2025: 1ನೇ ಮತ್ತು 2ನೇ ವರ್ಷದ ಇಂಟರ್ ಫಲಿತಾಂಶ ಬಿಡುಗಡೆ: ಡೌನ್‌ಲೋಡ್ ವಿಧಾನ..
AP Inter Results 2025: ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ. ಅದರ ಬೆನ್ನಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಮತ್ತವರ ಫೋಷಕರು ಯಾವಾಗ ರಿಸಲ್ಟ್ ಬರುತ್ತೋ ಎಂದು ಕಾಯುತ್ತಿದ್ದಾರೆ. ಇದೀಗ BIEAP 1ನೇ, 2ನೇ ವರ್ಷದ ಫಲಿತಾಂಶಗಳನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ನೆರೆಯ ರಾಜ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಫಲಿತಾಂಶ ತಿಳಿಯಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ.
ಆಂಧ್ರಪ್ರದೇಶದ ಮಧ್ಯಂತರ ಶಿಕ್ಷಣ ಮಂಡಳಿ (BIEAP) ಇಂದು ಒಂದು ಮತ್ತು 2ನೇ ವರ್ಷದ ಫಲಿತಾಂಶ ಪ್ರಕಟಿಸಿದೆ. ಇವು ಆಂಧ್ರ ಪ್ರದೇಶದ ಇಂಟರ್ ಫಲಿತಾಂಶಗಳು- 2025 ಆಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 2025 ರ ಮಧ್ಯಂತರ ಸಾರ್ವಜನಿಕ ಪರೀಕ್ಷೆಗಳನ್ನು (IPE) ಬರೆದಿದ್ದ ಎಲ್ಲ ವಿದ್ಯಾರ್ಥಿಗಳು ಇದೀಗ ಫಲಿತಾಂಶವನ್ನು ವಿಕ್ಷೀಸಬಹುದಾಗಿದೆ ಎಂದು ಮಂಡಳಿಯು ಮಾಹಿತಿ ಮಾಡಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ resultsbie.ap.gov.in ಗೆ ಭೇಟಿ ನೀಡಿ ಪಡೆಯಬೇಕು. ಫಲಿತಾಂಶ ಡೌನ್‌ಲೋಡ್ ಮಾಡಲು ಈ ಕೆಳಗಿನ ವಿಧಾನಪಾಲಿಸಬೇಕು.
ಲಿಂಕ್ ತೆರೆದು ವಿದ್ಯಾರ್ಥಿಗಳ ಪ್ರವೇಶ ಪತ್ರ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಬೇಕು. ಅದರ ವಿಧಾನಗಳು ಇಲ್ಲಿವೆ.
ಫಲಿತಾಂಶ ಡೌನ್‌ಲೋಡ್ ವಿಧಾನಗಳು
* ಮೊದಲ ಹಂತದಲ್ಲಿ ನೀವು ಅಧಿಕೃತ BIEAP ಫಲಿತಾಂಶ ವೆಬ್‌ಸೈಟ್‌ಗೆ resultsbie.ap.gov.in ಭೇಟಿ ನೀಡಿ.
* ನಂತರದ ಹಂತದಲ್ಲಿIPE ಮಾರ್ಚ್ 2025 ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ.
* 1 ನೇ ವರ್ಷ ಅಥವಾ 2 ನೇ ವರ್ಷವೆಂದು ನಿಮ್ಮ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ.
* ನಿಮ್ಮ ಹಾಲ್ ಟಿಕೆಟ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿಬೇಕು. ಬಳಿಕ ಸಬ್ಮಿಟ್ ಕೊಡಿ.
* ಕೂಡಲೇ ಆಂಧ್ರ ಪ್ರದೇಶ ಇಂಟರ್ಮೀಡಿಯೇಟ್ ಫಲಿತಾಂಶ 2025 ಕಾಣಿಸುತ್ತದೆ.
* ನೀವು ಕೂಡಲೇ ಆ ಫಲಿತಾಂಶವನ್ನು ಭವಿಷ್ಯದ ಉಪಯೋಗಕ್ಕಾಗಿ ಡೌನ್ಲೋಡ್ ಮಾಡಿಕೊಳ್ಳಬೆಕು.
* ಫಲಿತಾಂಶದ ಒಂದು ಪ್ರತಿ ಇಟ್ಟುಕೊಳ್ಳಬೇಕು.

BIEAP ಇಂಟರ್ ಫಲಿತಾಂಶ ವೆಬ್‌ಸೈಟ್‌ಗೆ ಭೇಟಿ ನೀಡಿದೇ ಪಡೆದುಕೊಳ್ಳುವುದು ಹೇಗೆ? ಅದಕ್ಕೆ ಇರುವ ಪರ್ಯಾಯ ಮಾರ್ಗಗಳು ಯಾವುವು? ಇಲ್ಲಿದೆ ನೋಡಿ...
* ವಿದ್ಯಾರ್ಥಿಗಳು ಮನ ಮಿತ್ರ ಸೇವೆಯಾದ ವಾಟ್ಸಾಪ್ ಸಂಖ್ಯೆಗೆ ನೀವು 9552300009 ಗೆ "ಹಾಯ್" ಎಂದು ಸಂದೇಶ ಕಳುಹಿಸಬೇಕು. ನಿಮ್ಮ ವಿಷಯವಾರು ಅಂಕಗಳು, ವಿಭಾಗ ಮತ್ತು ಡಿಜಿಟಲ್ ಅಂಕಪಟ್ಟಿಯನ್ನು ತಕ್ಷಣ ಸ್ವೀಕರಿಸಿ ಅಲ್ಲಿ ನೀಡಲಾಗುತ್ತದೆ.
ಯಾವುದಾದರು ವಿದ್ಯಾರ್ಥಿಗಳು ಅಂಕಗಳು ತಪ್ಪಾಗಿದ್ದಲ್ಲಿ ಅವುಗಳನ್ನು ಮರು ಎಣಿಕೆ, ಪರಿಶೀಲನೆಗೆ ಒಳಪಡಿಆಳಗುತ್ತದೆ.
ಉತ್ತರ ಪತ್ರಿಕೆಗಳ ಮರು ಪರಿಶೀಲನೆ ನಡೆಯುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ಯಾವುದೇ ಅನುಮಾನ ಇದ್ದಲ್ಲಿ ತಾವು ನಿಮ್ಮ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಶಿಕ್ಷಣ ಮಂಡಳಿ ತಿಳಿಸಿದೆ.












Click it and Unblock the Notifications