ಮತ್ತೊಂದು ವಿಸ್ಟಾಡೋಮ್‌ ರೈಲಿಗೆ ಶೀಘ್ರ ಚಾಲನೆ, ಸ್ಥಳ ಮಾರ್ಗ ತಿಳಿಯಿರಿ

ಶ್ರೀನಗರ, ಅಕ್ಟೋಬರ್‌ 16: ಭಾರತೀಯ ರೈಲ್ವೇ ಶೀಘ್ರದಲ್ಲೇ ಕಾಶ್ಮೀರದಲ್ಲಿ ಮೊದಲ ವಿಸ್ಟಾಡೋಮ್ ರೈಲನ್ನು ಬಡ್ಗಾಮ್ ಮತ್ತು ಬಾರಾಮುಲ್ಲಾ ನಡುವೆ ಓಡಿಸಲು ಸಿದ್ಧತೆ ಮಾಡಿಕೊಂಡಿದೆ. 40 ಆಸನಗಳ ನೂತನ ವಿಸ್ಟಾಡೋಮ್‌ ಅನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇಲ್ಲವೇ ಕೇಂದ್ರ ರೈಲ್ವೆ ಸಚಿವರು ಉದ್ಘಾಟಿಸಲಿದ್ದಾರೆ.

ವಿಸ್ಟೋಡೋಮ್ ಕೋಚ್‌ಗಳು ಯಾವುವು?

ಪ್ರವಾಸೋದ್ಯಮ ಉತ್ತೇಜಿಸಲು ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ 180 ಡಿಗ್ರಿ ವಿಹಂಗಮ ನೋಟವನ್ನು ಸವಿಯಲು ವಿಸ್ಟೋಡೋಮ್ ಕೋಚ್‌ಗಳನ್ನು ಪರಿಚಯಿಸಿತು. ವಿಸ್ಟಾಡೋಮ್ ಕೋಚ್ ಭಾರತೀಯ ರೈಲ್ವೇ ತಯಾರಿಸಿದ ಅತ್ಯಾಧುನಿಕ ಕೋಚ್ ಆಗಿದೆ. ಪ್ರಯಾಣಿಕರಿಗೆ ಪ್ರಯಾಣದ ಉತ್ತಮ ಸೌಕರ್ಯ ಪಕೃತಿ ಸವಿಯುತ್ತಾ ಪ್ರಯಾಣಿಸುವ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿ ದೊಡ್ಡ ಗಾಜಿನ ಕಿಟಕಿಗಳನ್ನು ಹೊಂದಿರುವ ವಿಶೇಷ ಕೋಚ್‌ಗಳು ಎಲ್ಇಡಿ ದೀಪಗಳು, ತಿರುಗಿಸಬಹುದಾದ ಆಸನಗಳು ಮತ್ತು ಅಂತರ್ಗತ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಯನ್ನು ಸಹ ಹೊಂದಿದೆ.

vistadome-train-will-flagoff-soon

ಉದ್ಘಾಟನೆ ದಿನಾಂಕ:

ಉದ್ದೇಶಿತ ಮೊದಲ ವಿಸ್ಟಾಡೋಮ್ ರೈಲು ಅಕ್ಟೋಬರ್ 19, 2023 ರಂದು ಕಾಶ್ಮೀರಕ್ಕೆ ಸಿಗಲಿದೆ ಎಂದು ತಿಳಿದುಬಂದಿದೆ. ಬಡ್ಗಾಮ್ ಮತ್ತು ಬಾರಾಮುಲ್ಲಾ ನಡುವಿನ ಈ ರೈಲು ಪ್ರೇಮಿಗಳಿಗೆ, ಪ್ರವಾಸಿಗರಿಗೆ ಉತ್ತಮ ಪ್ರಯಾಣ ಅನುಭವವನ್ನು ನೀಡಲಿದೆ.

ನಿರ್ಮಾಣ ವೆಚ್ಚ:

ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ ಈ ಹೊಚ್ಚ ಹೊಸ ವಿಸ್ಟಾಡೋಮ್ ಕೋಚ್ ಅನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ತಯಾರಿಸಿದೆ. ಈ ರೈಲಿನ ನಿರ್ಮಾಣದ ಅಂದಾಜು ವೆಚ್ಚ 4 ಕೋಟಿ ರೂಪಾಯಿ ಆಗಿದೆ. ಮಾರ್ಚ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುವ ಉಧಮ್‌ಪುರ-ಬನಿಹಾಲ್ ಹಳಿಯನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಘೋಷಿಸಿದ್ದರು.

ಪ್ರಸ್ತುತ ಏಳು ರೈಲುಗಳು ಸೇರಿದಂತೆ 19 ರೈಲು ಸೇವೆಗಳು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ-ಬನಿಹಾಲ್ ಸೆಕ್ಟರ್‌ನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ದಿನನಿತ್ಯದ ಆಧಾರದ ಮೇಲೆ (ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಸೇರಿದಂತೆ) ಸರಿಸುಮಾರು 30,000 ಪ್ರಯಾಣಿಕರು ಸೇವೆಗಳನ್ನು ಪಡೆಯುತ್ತಾರೆ. 2013 ರಲ್ಲಿ ಕಾಶ್ಮೀರವು ತನ್ನ ಮೊದಲ ರೈಲು ಸೇವೆಯನ್ನು ಆರಂಭ ಮಾಡಿತ್ತು.

ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಮಾರ್ಗ:

ಇದು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೇ (USBRL) ಒಂದು ಮಹತ್ವದ ಯೋಜನೆಯಾಗಿದೆ. ಇದು ಭಾರತೀಯ ರೈಲ್ವೆಯ ಉತ್ತರ ವಲಯದ ಫಿರೋಜ್‌ಪುರ ರೈಲ್ವೇ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ. ಒಮ್ಮೆ ಕಾರ್ಯಾರಂಭಗೊಂಡರೆ ವಿಸ್ಟಾಡೋಮ್ ಕೋಚ್ ಪ್ರಯಾಣಿಕರು ಭೂಮಿಯ ಮೇಲೆ ಸ್ವರ್ಗ ಎಂದು ಕರೆಯಲ್ಪಡುವ ಕಣಿವೆಯ ಸೌಂದರ್ಯವನ್ನು ನಿರಂತರವಾಗಿ ಸವಿಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+