ಗಂಡು ಸಂತಾನ ಆಗಲಿಲ್ಲವೆಂದು ಕತ್ತರಿಸಿಕೊಂಡ!

ಪಾಟ್ನ, ಸೆ.12: ಹೆಣ್ಣು ಸಂತಾನವಾಯಿತೆಂದು ಬಾಣಂತಿಯನ್ನು ಹತ್ಯೆಗೈಯುವ ನೀಚರು ಇರುವ ಕಾಲದಲ್ಲೇ ಗಂಡು ಸಂತಾನಕ್ಕಾಗಿ ಹಾತೊರೆಯುವ ದಂಪತಿಗಳಿಗೇನು ಕಡಿಮೆಯಿಲ್ಲ. ಅದರೆ, ಇದಕ್ಕೆ ಮನಸಿಗೆ ಹಚ್ಚಿಕೊಂಡು ಗಂಡು ಮಗು ಆಗಲಿಲ್ಲವೆಂದು ಕೋಪದಲ್ಲಿ ಪತಿಯೊಬ್ಬ ತನ್ನ ಶಿಶ್ನವನ್ನೇ ಕತ್ತರಿಸಿಕೊಂಡ ಘಟನೆ ನಡೆದಿದೆ.

ಗಂಡ ಹೆಂಡತಿ ನಡುವೆ ಗಂಡು ಸಂತಾನ ಕುರಿತಂತೆ ಭಾರಿ ಮಾತಿನ ಚಕಮಕಿ ನಡೆದಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿಯನ್ನು ಪತ್ನಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗಂಡು ಮಗು ಹೆರಲು ನಿನ್ನಿಂದ ಸಾಧ್ಯವಿಲ್ಲವೇ ಎಂದು ಪತ್ನಿಯನ್ನು ಈತ ಪ್ರಶ್ನಿಸಿದ್ದಾನೆ. ಜಗಳದಲ್ಲಿ ಪತ್ನಿಯ ವಾದ ಮೇಲುಗೈ ಸಾಧಿಸುತ್ತಿದ್ದಂತೆ ಕೋಪಗೊಂಡ ಪತಿರಾಯ ಗಂಡು ಮಗು ನೀಡಲು ಸಾಧ್ಯವಾಗದ ನನ್ನ ಅಂಗ ಇದ್ದರೇನು ಪ್ರಯೋಜನ ಎನ್ನುತ್ತಾ ಅತ್ಯಂತ ಚೂಪಾದ ಚಾಕುವನ್ನು ತೆಗೆದುಕೊಂಡು ಶುಕ್ರವಾರ ಬೆಳಗ್ಗೆ ತನ್ನ ಶಿಶ್ನವನ್ನು ಕತ್ತರಿಸಿ ಹಾಕಿಕೊಂಡಿದ್ದಾನೆ.

Angry Bihar man bobbitises himself

ದಂಪತಿಗಳ ಕೂಗಾಟ, ಅರಚಾಟ ಕೇಳಿಸಿಕೊಂಡ ಪಕ್ಕದ ಮನೆಯವರು ಬಂದು ನೋಡಿ ಗಾಬರಿಯಾಗಿದ್ದಾರೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಪತಿಯನ್ನು ಕರೆದೊಯ್ದಿದ್ದಾರೆ. ['ಶಿಶ್ನ ತುಂಟಾಟ' ಬಹಿರಂಗ: ಗೂಗಲ್]

ವಿಷಯ ತಿಳಿದ ಸಂಬಂಧಿಕರು ಬಿಹಾರ ಸಿವಾನ್ ಜಿಲ್ಲೆಯ ಖೋಜ್ವಾ ಗ್ರಾಮದ ಇವರ ಮನೆಗೆ ಧಾವಿಸಿ ಬಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಬಂಧಿಕರೊಬ್ಬರು, ಪತಿಗೆ ಇನ್ನೂ 30 ವರ್ಷ ವಯಸ್ಸು, ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕತಾರ್ ನಲ್ಲಿ ಈತ ಉದ್ಯೋಗಿಯಾಗಿದ್ದು, ಒಂದು ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದ.

ಇಬ್ಬರ ನಡುವೆ ಗಂಡು ಸಂತಾನಕ್ಕಾಗಿ ಆಗಾಗ ಜಗಳವಾಗುತ್ತಿತ್ತು. ಈ ವಿಷಯವಾಗಿ ಪತ್ನಿಯನ್ನು ದೂಷಿಸುತ್ತಿದ್ದ. ಮೊದಲೆಲ್ಲ ಸುಮ್ಮನಿರುತ್ತಿದ್ದ ಈತನ ಪತ್ನಿ, ಈ ಬಾರಿ ಈತನಿಗೆ ತಿರುಗೇಟು ನೀಡಿ ನಿನ್ನಲ್ಲೇ ಏನೋ ದೋಷ ಇರಬೇಕು ಎಂದೆಲ್ಲ ಹೇಳಿದ್ದು ಅವನಿಗೆ ಚುಚ್ಚಿದ್ದಂತಾಗಿ ಕೋಪದ ಕೈ ಬುದ್ಧಿ ಕೊಟ್ಟು ಈ ರೀತಿ ಮಾಡಿಕೊಂಡಿದ್ದಾನೆ ಎಂದಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪತಿರಾಯನ ಜನನಾಂಗ ಏನಾಯ್ತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ(ಐಎಎನ್ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+