ಜಗನ್ ಆಸ್ತಿ ಕೇವಲ 343 ಕೋಟಿ, ವಾಹನವೇ ಇಲ್ಲ
ಹೈದರಾಬಾದ್, ಏ.18: ಹರಿದು ಹಂಚಿಹೋಗಿರುವ ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣಾ ಕಾವು ದಿನೇ ದಿನೆ ಏರುತ್ತಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಕಡಪ ಜಿಲ್ಲೆಯ ಪುಲಿವೆಂದಲ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ತಮ್ಮ ಬಳಿ 343 ಕೋಟಿ ರೂ ಆಸ್ತಿ ಪಾಸ್ತಿ ಇದೆಯೆಂದು ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಜಗನ್ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ.

ಜತೆಗೆ, ಹೈದರಾಬಾದ್ ಸಿಬಿಐ ಕೋರ್ಟಿನಲ್ಲಿ ತಮ್ಮ ವಿರುದ್ಧ 10 ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂದು ನಮೂದಿಸಿದ್ದಾರೆ.
ನಂದಮೂರಿ ಬಾಲಕೃಷ್ಣ ಆಸ್ತಿ 424 ಕೋಟಿ ರೂ:
ಕರ್ನಾಟಕ ಗಡಿ ಜಿಲ್ಲೆಯಾದ ಹಿಂದೂಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ತೆಲುಗು ದೇಶಂ ಅಭ್ಯರ್ಥಿ ನಂದಮೂರಿ ಬಾಲಕೃಷ್ಣ ಅವರು ಮೊದಲ ಬಾರಿಗೆ ರಾಜಕೀಯ ಅಖಾಡಕ್ಕೆ ಧುಮಕಿದ್ದಾರೆ. ತಮ್ಮ ಬಳಿ 424 ಕೋಟಿ ರೂ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ.
ಚುನಾವಣೆಗೂ ಮುನ್ನವೇ ತಮ್ಮ ಗೆಲುವು ನಿಕ್ಕಿ ಮಾಡಿಕೊಂಡಿರುವ ಬಾಲಯ್ಯನ ಹೆಸರಿನಲ್ಲಿ 170 ಕೋಟಿ ರೂ, ಪತ್ನಿ ವಸುಂಧರಾ ಹೆಸರಿನಲ್ಲಿ 130 ಕೋಟಿ, ಮತ್ತು ಪುತ್ರ ಮೋಕ್ಷಗ್ಯನ ಹೆಸರಿನಲ್ಲಿ 122 ಕೋಟಿ ರೂ ಆಸ್ತಿಯಿರುವುದಾಗಿ ಅವರು ಘೋಷಿಸಿದ್ದಾರೆ.
ನಂದಮೂರಿ ಬಾಲಕೃಷ್ಣಗೆ 25 ಕೋಟಿ ರೂ ಬ್ಯಾಂಕ್ ಸಾಲವೂ ಇದೆ. ಸರಕಾರಕ್ಕೂ ಅವರು 15 ಕ್ಷ ರೂ ಸಾಲ ತೀರಿಸಬೇಕಾಗಿದೆ. 2 ಬಿಎಂಡಬ್ಲ್ಯು ಕಾರುಗಳು, ಒಂದು ಸ್ಕೋಡಾ, ಒಂದು ಆಡಿ ಎ6 ವಾಹನ ಇದೆ. 2012-13ನೇ ಸಾಲಿನಲ್ಲಿ 3 ಕೋಟಿ ರೂ ಆದಾಯ ತೆರಿಗೆಯನ್ನೂ ಪಾವತಿಸಿದ್ದಾರೆ.












Click it and Unblock the Notifications