ಸಂಗೀತ ಕ್ಷೇತ್ರಕ್ಕೆ ಗುಡ್‌ಬೈ ಹೇಳಿದ ಅನನ್ಯಾ ಬಿರ್ಲಾ ಬಗ್ಗೆ ನಿಮಗೆ ಎಷ್ಟು ಗೊತ್ತು?

ಅನನ್ಯಾ ಬಿರ್ಲಾ ಅವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಗಾಯಕಿ. ಆದರೆ ಎರಡು ದೋಣಿಯ ಮೇಲೆ ಸವಾರಿ ಮಾಡಲು ಆಗದು ಎಂದು ನಿರ್ಧರಿಸಿದ ಸಿಂಗರ್‌ ತನ್ನ ನೆಚ್ಚಿನ ಹವ್ಯಾಸಕ್ಕೆ ತಿಲಾಂಜಲಿ ಇಟ್ಟು, ತನ್ನ ಕುಟುಂಬದ ವ್ಯಾಪಾರಗಳನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಅನನ್ಯಾ ಬಿರ್ಲಾ ಆದಿತ್ಯ ಬಿರ್ಲಾ ಗ್ರೂಪ್ ಚೇರ್ಮನ್ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ. ವ್ಯಾಪಾರದಲ್ಲಿ ಹೆಚ್ಚು ಸಮಯ ನೀಡಬೇಕೆಂಬ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇನ್ನು ಅವರ ಚಿತ್ತ ಏನಿದ್ರೂ ಅವರ ವ್ಯಾಪಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ತನ್ನ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಇದು ತನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಎಂದು ಅನನ್ಯಾ ಬಿರ್ಲಾ ಹೇಳಿದ್ದಾರೆ.

Ananya Birla Shifts Focus from Music to Business Labels Decision as Toughest Yet

ಸಂಗೀತ ಕ್ಷೇತ್ರಕ್ಕೆ ಗುಡ್‌ ಬೈ ಏಕೆ?

ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವುದು ಅನಿವಾರ್ಯ. ಎರಡು ವೃತ್ತಿಗೆ ಸಮಯ ನೀಡುವುದು ಹಾಗೂ ಏಕಾಗ್ರತೆ ಸಾಧಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಅನನ್ಯಾ ತನ್ನ ನೆಚ್ಚಿನ ವೃತ್ತಿಗೆ ಗುಡ್‌ ಬಾಯ್‌ ಹೇಳಿದ್ದಾರೆ. ಸಂಗೀತ ಹಾಗೂ ವ್ಯಾಪಾರವನ್ನು ಎರಡನ್ನೂ ಒಟ್ಟಿಗೆ ನಡೆಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಹೀಗಾಗಿ ಈ ಕಠಿಣ ನಿರ್ಧರವನ್ನು ತೆಗೆದುಕೊಳ್ಳಬೇಕಾಯಿತು ಎಂದು ಅನನ್ಯಾ ತಮ್ಮ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಸಂಗೀತವನ್ನು ಬಿಡುವುದು ಎಷ್ಟು ಕಷ್ಟ ಎಂದು ನಾನು ನಿಮಗೆ ಹೇಳಲಾರೆ. ನೀವೆಲ್ಲರೂ ನನಗೆ ನೀಡಿದ ಎಲ್ಲಾ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ.

ಈ ಪೋಸ್ಟ್ ಅನ್ನು ಹಂಚಿಕೊಂಡ ನಂತರ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಲವ್ ಯೂ ಸೋ ಮಚ್ ಎಂದು ಬರೆದುಕೊಂಡಿದ್ದಾರೆ. ಅನನ್ಯಾ ಇದನ್ನು ಕೇಳಲು ತುಂಬಾ ಬೇಸರವಾಗಿದೆ, ಆದರೆ ನೀವು ಇದನ್ನು ಮಾಡುತ್ತಿರಿ! ನಿಮ್ಮ ಎಲ್ಲಾ ಕನಸುಗಳು ಮತ್ತು ಭವಿಷ್ಯದ ಪ್ರಯತ್ನಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಎಂದು ಗಾಯಕ ಅರ್ಮಾನ್ ಮಲಿಕ್ ಬರೆದುಕೊಂಡಿದ್ದಾರೆ.

ಅನನ್ಯಾ ಸ್ವತಂತ್ರ ಮೈಕ್ರೋಫಿನ್ ಮತ್ತು ಅಸೈ ಘಟಕವನ್ನು ನಡೆಸುತ್ತಾರೆ

ಕುಮಾರ್ ಮಂಗಲಂ ಬಿರ್ಲಾ ಅವರ ಹಿರಿಯ ಮಗಳು ಅನನ್ಯಾ ಬಿರ್ಲಾ ಅವರು ಮೈಕ್ರೋಫೈನಾನ್ಸ್ ಕಂಪನಿ ಸ್ವತಂತ್ರ ಮೈಕ್ರೋಫಿನ್ ಮತ್ತು ಡಿಸೈನ್ ಹೌಸ್ ಯುನಿಟ್ ಅಸೈ ಅನ್ನು ಸ್ಥಾಪಿಸಿದ್ದರು. ಕಳೆದ ವರ್ಷ, ಅವರನ್ನು ಆದಿತ್ಯ ಬಿರ್ಲಾ ಗ್ರೂಪ್ ಕಂಪನಿ ಗ್ರಾಸಿಮ್ ಇಂಡಸ್ಟ್ರೀಸ್‌ನ ಮಂಡಳಿಯಲ್ಲಿ ನಿರ್ದೇಶಕರನ್ನಾಗಿ ಮಾಡಲಾಯಿತು. ಅನನ್ಯಾ ತಮ್ಮ ಸಂಗೀತ ವೃತ್ತಿಜೀವನವನ್ನು 2016 ರಲ್ಲಿ ಪ್ರಾರಂಭಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+