Anant Radhika Wedding: ಮದುವೆ ಸಮಾರಂಭದ ಕಳೆ ಹೆಚ್ಚಿಸಲಿವೆ ಬನಾರಸ್‌ ಚಾಟ್‌; ಅತಿಥಿಗಳ ಬಾಯಲ್ಲಿ ನೀರು ಗ್ಯಾರಂಟಿ!

ಬಹುದಿನಗಳ ನಡೆಯುತ್ತಿದ್ದ ಮದುವೆ ಸಮಾರಂಭ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಭಾರತದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಶುಕ್ರವಾರ (ಜುಲೈ 12)ರಂದು ಹಸೆ ಮಣೆ ಏರಲಿದ್ದರೆ. ಈ ಅದ್ಧೂರಿ ಮದುವೆಗೆ ಸಕಲ ಸಿದ್ಧತೆಗಳು ಪೂರ್ಣ ಗೊಂಡಿವೆ.

ಈ ಮದುವೆಯಲ್ಲಿ ಭಾಗ ವಹಿಸುವ ಅತಿಥಿಗಳಿಗೆ ಅಂಬಾನಿ ಕುಟುಂಬ ವಿಶೇಷ ಅತಿಥಿಗಳು ಬನಾರಸ್ ಚೌಕ್‌ನ ಪ್ರಸಿದ್ಧ ಪಾನ್, ಗೋಡೌಲಿಯಾ ವಿಶೇಷ ಚಾಟ್ ಮತ್ತು ಕ್ಷೀರ್ ಸಾಗರ್‌ನ ಸಿಹಿತಿಂಡಿಗಳನ್ನು ಬಡಿಸಲಿದೆ. ಶುಕ್ರವಾರ ನಡೆಯುವ ಆರತಕ್ಷತೆಯಲ್ಲಿ ಬನಾರಸ್ ಗಲಿ ಎಂಬ ಪ್ರತೇಕ ಕೌಂಟರ್‌ ಇರಲಿದ್ದು, ಇಲ್ಲಿ 4 ವಿಧದ ಚಾಟ್, ಸಿಹಿತಿಂಡಿಗಳು ಮತ್ತು ಪಾನ್ ಇರುತ್ತದೆ. ವಾರಣಾಸಿಯಿಂದ 45 ಕುಶಲಕರ್ಮಿಗಳ ತಂಡ ಈಗಾಗಲೇ ಮುಂಬೈ ತಲುಪಿದೆ.

Anant and Radhika s Wedding Banaras Chat to Delight Guests

ಎರಡು ವಾರದ ಹಿಂದೆ ನೀತಾ ಅಂಬನಿ ಬಾಬಾ ವಿಶ್ವನಾಥ್‌ ಮಂದಿರದಕ್ಕೆ ಮದುವೆಯ ಕಾರ್ಡ್‌ ನೀಡಲು ತೆರಳಿದ್ದಾರೆ. ಆಗ ಅವರು ಸ್ಥಳೀಯ ಒಂದು ಚಾಟ್ ಸೇವಿಸಿದರು. ಈ ಚಾಟ್ ಅವರಿಗೆ ತುಂಬ ಇಷ್ಟವಾಯಿತು. ತಡಮಾಡದೇ ಅನಂತ್ ಮದುವೆಯ ಕಾರ್ಯಕ್ರಮಕ್ಕೆ ನೀವು ಅತಿಥೀಗಳಿಗೆ ಇದರ ರುಚಿ ತೋರಿಸಿ ಎಂದು ಆಫರ್‌ ಸಹ ನೀಡಿದರು. ಇದಾದ ಬಳಿಕ ವ್ಯಾಪಾರದ ಮಾತುಕತೆ ಆಯಿತು. ಈಗ ಮುಂಬೈನಲ್ಲಿ ಖಷಿ ಚಾಟ್‌ ಸ್ಟಾಲ್‌ ಸ್ಥಾಪನೆ ಆಗಲಿದೆ.

ಮದುವೆಯಲ್ಲಿ ಟೊಮೆಟೊ ಚಾಟ್, ಪಾಲಕ್ ಚಾಟ್, ಚನಾ ಕಚೋರಿ ಮತ್ತು ಆಲೂ ಟಿಕ್ಕಿ ಚಾಟ್‌ಗಾಗಿ ಬುಕ್ ಆಗಿವೆ. ಈ ಚಾಟ್ ಅನ್ನು ವಿಶೇಷ ಮಣ್ಣಿನ ಕುಲ್ಹಾರದಲ್ಲಿ ನೀಡಲಾಗುತ್ತದೆ. ಈಗಾಗಲೇ 13 ಕುಶಲಕರ್ಮಿಗಳ ತಂಡ ಮುಂಬೈ ತಲುಪಿದೆ. ಇದರ ಇನ್ನೊಂದು ವಿಶೇಷತೆ ಎಂದರೆ, ಬನಾರಸ್ ನ ಕುಶಲಕರ್ಮಿಗಳು ಮಸಾಲೆ ತಯಾರಿಸಿ ಚಾಟ್ ಮಾಡುತ್ತಾರೆ.

Anant and Radhika s Wedding Banaras Chat to Delight Guests

ಈ ಚಾಟ್‌ ಹೇಗೆ ಮಾಡುತ್ತಾರೆ?

ಚಾಟ್ ರೆಸಿಪಿಯಲ್ಲಿ ಆಲೂಗಡ್ಡೆ, ಟೊಮ್ಯಾಟೊ, ದೇಸಿ ತುಪ್ಪ, ಗರಂ ಮಸಾಲಾ, ಸಕ್ಕರೆ ಪಾಕ, ಟೊಮೆಟೊ ಮಸಾಲಾ, ಚಾಟ್ ಮಸಾಲಾ, ನಿಂಬೆ, ಮೊಸರು, ಸಂಸ್ಕರಿಸಿದ ಹಿಟ್ಟು ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಹಾಕಲಾಗುತ್ತದೆ. ಟೊಮೆಟೊವನ್ನು ಮುಖ್ಯ ಮಸಾಲೆಯಾಗಿ ಪುಡಿಮಾಡಲಾಗುತ್ತದೆ. ಟೊಮೆಟೊ, ಗೋಡಂಬಿ, ಚೀಸ್, ಗರಂ ಮಸಾಲ, ಗಸಗಸೆ ಮಸಾಲಾ ಮತ್ತು ಮೊಸರು ಈ ಮಸಾಲಾಕ್ಕೆ ಸೇರಿಸಲಾಗುತ್ತದೆ

ಬನಾರಸ್‌ನ 50 ವರ್ಷ ಹಳೆಯದಾದ ಅಂಗಡಿಯು ಚಿನ್ನದ ಲೇಪಿತ ಪಾನ್‌ಗೆ ಹೆಸರುವಾಸಿಯಾಗಿದೆ. ಅವರ ಪಾನ್ ಅನೇಕ ವಿದೇಶಿ ಮಸಾಲೆಗಳ ಪರಿಮಳವನ್ನು ಹೊಂದಿರುತ್ತದೆ. ಪಾನ್ ಗಿಲೋರಿ, ಪಂಚ ಮೇವಾ, ಜರ್ದಾ ಪಾನ್, ಕೇಸರ್ ಪಾನ್ ಮತ್ತು ಗುಲಾಬಿ ಪಾನ್ ವೈವಿಧ್ಯಗಳು ಇಲ್ಲಿ ಲಭ್ಯ.

ಕ್ಷೀರ ಸಾಗರದಲ್ಲಿ 150 ಬಗೆಯ ಸಿಹಿತಿಂಡಿಗಳು ಲಭ್ಯವಿವೆ. ಈ ಅಂಗಡಿಯು ಬಂಗಾಳಿ ಸಿಹಿತಿಂಡಿಗಳಿಗೆ ಹೆಸರುವಾಸಿ. ಈ ಸಮಾರಂಭಕ್ಕೆ ದೇಶ ವಿದೇಶದ ಖ್ಯಾತ ಉದ್ಯಮಿಗಳು ನಟರು, ಸೆಲಿಬ್ರಿಟಿಗಳು ಭಾಗವಹಿಸುತ್ತಾರೆ. ಜುಲೈ 13 ರಂದು ಎಲ್ಲಾ ಅತಿಥಿಗಳು ನವವಿವಾಹಿತರನ್ನು ಆಶೀರ್ವದಿಸಲಿದ್ದಾರೆ. ಇದಾದ ಬಳಿಕ ಜುಲೈ 14ರಂದು ಆರತಕ್ಷತೆ ನಡೆಯಲಿದ್ದು, ವಿಶ್ವದೆಲ್ಲೆಡೆಯ ವಿವಿಐಪಿ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಮೂರು ದಿನಗಳ ಕಾರ್ಯಕ್ರಮಗಳು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಮಾತ್ರ ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+