ಕೋವಿಡ್ - 19 ಪರಿಸ್ಥಿತಿ; ಸಿಎಂಗಳ ಜೊತೆ ಅಮಿತ್ ಶಾ ಸಭೆ

ನವದೆಹಲಿ, ಜುಲೈ 02 : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಗುರುವಾರ ಮೊದಲ ಹಂತದ ಸಭೆ ಆರಂಭವಾಗಲಿದೆ.

Recommended Video

      Bangalore No Longer Safe:ಬೆಂಗಳೂರಿನಲ್ಲಿ ಕೊರೊನಾ ಉಗ್ರ ತಾಂಡವ: ಭಯ ಹುಟ್ಟಿಸುವ ಅಂಕಿಅಂಶ! | Oneindia Kannada

      ಗುರುವಾರ ಸಂಜೆ ದೆಹಲಿ, ಉತ್ತರ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ರಾಜ್ಯಗಳಲ್ಲಿನ ಪರಿಸ್ಥಿತಿ, ಕೇಂದ್ರದಿಂದ ಬೇಕಾದ ಸಹಕಾರ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

      Review COVID - 19 Situation Amit Shah Meeting With Chief Ministers

      ಅರವಿಂದ ಕೇಜ್ರಿವಾಲ್, ಯೋಗಿ ಆದಿತ್ಯನಾಥ್, ಮನೋಹರ್ ಲಾಲ್ ಖಟ್ಟರ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ರಾಜ್ಯದಲ್ಲಿನ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಬಗ್ಗೆ ವಿವರಣೆ ನೀಡಲಿದ್ದಾರೆ.

      ಇಂದು ಸಭೆ ನಡೆಯಲಿರುವ ರಾಜ್ಯಗಳ ಪೈಕಿ ದೆಹಲಿಯಲ್ಲಿ 89,802, ಉತ್ತರ ಪ್ರದೇಶದಲ್ಲಿ 24,056 ಮತ್ತು ಹರ್ಯಾಣದಲ್ಲಿ 14,941 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಿವೆ. ಪ್ರತಿದಿನ ಮೂರು ಅಥವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಅಮಿತ್ ಶಾ ಸಭೆ ನಡೆಲಿದ್ದಾರೆ.

      ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚು ಇರುವ ರಾಜ್ಯಗಳಲ್ಲಿ ಆಸ್ಪತ್ರೆಯ ಕೊರತೆ ಎದುರಾಬಾರದು ಎಂದು ಕೇಂದ್ರ ಸರ್ಕಾರ ರೈಲ್ವೆ ಐಸೋಲೇಷನ್ ವಾರ್ಡ್‌ಗಳನ್ನು ಕಳುಹಿಸಿಕೊಟ್ಟಿದೆ.

      ಕೇಂದ್ರ ಗೃಹ ಇಲಾಖೆ ಲಾಕ್ ಡೌನ್‌ ಅನ್ನು ಜುಲೈ 31ರ ತನಕ ಈಗಾಗಲೇ ವಿಸ್ತರಣೆ ಮಾಡಿದೆ. ಈ ಕುರಿತ ಮಾರ್ಗಸೂಚಿಯನ್ನು ಹೊರಡಿಸಿದೆ. ಕೇಂದ್ರದಿಂದ ಬೇರೆ ನೆರವುಗಳು ಬೇಕೇ? ಎಂದು ಅಮಿತ್ ಶಾ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+