ಅಮಿತ್ ಶಾ ಈಗ ಗುಜರಾತ್ ಕ್ರಿಕೆಟ್ ಮಂಡಳಿ ಅಧ್ಯಕ್ಷ

ಅಹಮದಾಬಾದ್, ಜೂ.13: ಗುಜರಾತ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ನಾಯಕ ಅಮಿತ್ ಶಾ ಆಯ್ಕೆಯಾಗಿದ್ದಾರೆ. ಶುಕ್ರವಾರ ಅಮಿತ್ ಶಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಸಿಎ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಆವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಆಪ್ತ ಅಮಿತ್ ಆಯ್ಕೆ ನಿರೀಕ್ಷಿತವಾಗಿತ್ತು.

ಜಿಸಿಎ ನಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಈಗ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರ ಆಯ್ಕೆ ಅವಿರೋಧವಾಗಿದೆ ಎಂದು ಜಿಸಿಎ ಉಪಾಧ್ಯಕ್ಷ ಹಾಗೂ ರಾಜ್ಯಸಭೆ ಸಂಸದ ಪಾರಿಮಾಲ್ ನಾಥ್ವಾನಿ ಹೇಳಿದ್ದಾರೆ.

2009ರ ಸೆಪ್ಟೆಂಬರ್ 15ರಂದು ಕಾಂಗ್ರೆಸ್ ನಾಯಕ ನರಹರಿ ಅಮಿನ್ ಅವರಿಂದ ತೆರವಾದ ಸ್ಥಾನಕ್ಕೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದರು. ಜಿಸಿಎನಲ್ಲಿ 32 ಸದಸ್ಯರಿದ್ದಾರೆ. 80 ಸಂಸತ್ ಸ್ಥಾನದ ಪೈಕಿ ಬಿಜೆಪಿ 73 ಸ್ಥಾನ ಗಳಿಸಿದೆ. ಅಮಿನ್ ಈಗ ಬಿಜೆಪಿ ಸೇರಿದ್ದಾರೆ.

Amit Shah elected president of Gujarat Cricket Association

ಬಿಜೆಪಿಗೆ ಹೊಸ ಅಧ್ಯಕ್ಷ ಯಾರು?: ಬಿಜೆಪಿಗೆ ಹೊಸ ಅಧ್ಯಕ್ಷರು ಯಾರು ಎಂಬ ಪ್ರಶ್ನೆಗೆ ಜೂ.23 ಅಥವಾ 24ರಂದು ಉತ್ತರ ದೊರೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಮೋದಿ ಆಪ್ತ ಅಮಿತ್ ಷಾ ಮತ್ತು ಜಗತ್ ಪ್ರಕಾಶ್ ನಡ್ಡಾ ನಡುವೆ ನೇರ ಪೈಪೋಟಿ ಆರಂಭವಾಗಿದೆ.

ಕೆಲ ದಿನಗಳ ಹಿಂದಿನ ವರೆಗೆ ರಾಜಸ್ಥಾನದ ಹಿರಿಯ ಬಿಜೆಪಿ ನಾಯಕ ಓಮ್ ಮಾಥುರ್ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಇದೀಗ ಅವರು ತೆರೆಯ ಮರೆಗೆ ಸರಿದಿದ್ದು, ನಡ್ಡಾ ಮತ್ತು ಷಾ ನಡುವೆ ಈಗ ನೇರ ಪೈಪೋಟಿ ಏರ್ಪಟ್ಟಿದೆ. ಜೆ.ಪಿ.ನಡ್ಡಾ ಪ್ರಧಾನಿ ಮೋದಿ, ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಮಿತ್ ಷಾರಂತೆ ನಡ್ಡಾ ಕೂಡ ಸಂಘಟನಾಚತುರರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+