G20 Summit: ಪ್ರಧಾನಿ ಮೋದಿ & ಜೋ ಬೈಡನ್ ದ್ವಿಪಕ್ಷೀಯ ಸಭೆ ಆರಂಭ
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ಅಮೆರಿಕ ಅಧ್ಯಕ್ಷರ ಜೊತೆಗೆ ಪಿಎಂ ಮೋದಿ ಮಹತ್ವದ ಮಾತುಕತೆ ಆರಂಭಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದು ಇಳಿದರು. ಈ ವೇಳೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ನೇರವಾಗಿ ಪ್ರಧಾನಿ ಮೋದಿ ಅವರ ನಿವಾಸಕ್ಕೆ ತೆರಳಿದ ಜೋ ಬೈಡನ್ ಚರ್ಚೆ ಆರಂಭಿಸಿದ್ದಾರೆ.
ಪ್ರಧಾನಿ ಮೋದಿ ಅಮೆರಿಕಗೆ ತೆರಳಿದ್ದಾಗ ಜೋ ಬೈಡನ್ ಅವರು ರಾಜಾತಿಥ್ಯ ನೀಡಿದ್ದರು. ಈಗ ಭಾರತಕ್ಕೆ ಬಂದಿರುವ ಅಮೆರಿಕ ಅಧ್ಯಕ್ಷ ಬೈಡನ್ ಅವರಿಗೂ ರಾಜಾತಿಥ್ಯ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೆಹಲಿ ನಿವಾಸದಲ್ಲಿ ಜೋ ಬೈಡನ್ ಅವರಿಗಾಗಿ ಔತಣ ಕೂಡ ಏರ್ಪಡಿಸಲಾಗಿದೆ. ಹಾಗೇ ಈ ವೇಳೆ ಇಬ್ಬರು ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಹಾಗೂ ಭಾರತದ ನಡುವೆ ಬಾಕಿ ಇರುವ ಒಪ್ಪಂದಗಳಿಗೆ ಇಂದು ಇಬ್ಬರೂ ನಾಯಕರು ಸಹಿ ಹಾಕುವ ನಿರೀಕ್ಷೆ ಇದೆ.

ದೊಡ್ಡಣ್ಣನ ಅಧ್ಯಕ್ಷರಿಗೆ ಭಾರಿ ಭದ್ರತೆ
ಅಮೆರಿಕ ಕಾಲಮಾನದ ಪ್ರಕಾರ ನಿನ್ನೆ ಅಂದ್ರೆ ಸೆಪ್ಟೆಂಬರ್ 7ಕ್ಕೆ ಅಮೆರಿಕದಿಂದ ಹೊರಟಿದ್ದರು ಜೋ ಬೈಡನ್. ವಿಶೇಷ ವಿಮಾನದಲ್ಲಿ ಹೊರಟಿದ್ದ ಅಮೆರಿಕ ಅಧ್ಯಕ್ಷ ಬೈಡನ್, ಸಂಜೆ ತಮ್ಮ ಅಧಿಕಾರಿಗಳ ಜೊತೆಗೆ ನವದೆಹಲಿಗೆ ಬಂದು ಇಳಿದಿದ್ದರು. ಬೈಡನ್ ಆಗಮನದ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಹೀಗಾಗಿ ನವದೆಹಲಿ 7 ಸುತ್ತಿನ ಭದ್ರಕೋಟೆ ಆಗಿ ಬದಲಾಗಿದೆ. ಮತ್ತೊಂದು ಕಡೆ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಅವರ ನಿವಾಸದ ತನಕವೂ ಬೈಡನ್ ಅವರಿಗೆ ಭಾರಿ ಭದ್ರತೆ ನೀಡಿ ಕರೆದೊಯ್ಯಲಾಯಿತು. ಅಮೆರಿಕ ಅಧ್ಯಕ್ಷರು ತಮ್ಮ 'ದಿ ಬೀಸ್ಟ್' ಕಾರಿನಲ್ಲಿ ತೆರಳಿದ್ದರು.
Happy to have welcomed @POTUS @JoeBiden to 7, Lok Kalyan Marg. Our meeting was very productive. We were able to discuss numerous topics which will further economic and people-to-people linkages between India and USA. The friendship between our nations will continue to play a… pic.twitter.com/Yg1tz9kGwQ
— Narendra Modi (@narendramodi) September 8, 2023
ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ
ಇನ್ನು ಜೋ ಬೈಡನ್ ಅವರು ತಮ್ಮ ನಿವಾಸಕ್ಕೆ ಆಗಮಿಸಿರುವ ಫೋಟೋಗಳನ್ನ ಪ್ರಧಾನಿ ಮೋದಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ನಾಯಕರ ನಡುವೆ ಈಗ ಮಹತ್ವದ ಸಭೆ ಆರಂಭವಾಗಿದೆ. ಇಡೀ ಜಗತ್ತು ಸಭೆ ಬಗ್ಗೆ ಕುತೂಹಲದಿಂದ ಕಾಯುತ್ತಿದೆ. ಏಕೆಂದರೆ ಚೀನಾ ಮತ್ತು ರಷ್ಯಾದ ಅಧ್ಯಕ್ಷರು ಜಿ20 ಸಭೆಗೆ ಗೈರು ಹಾಜರಾದ ಸಂದರ್ಭದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದೆ. ಹೀಗಾಗಿ ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ ಭಾರತ & ಅಮೆರಿಕ ದ್ವಿಪಕ್ಷೀಯ ಸಭೆ.

ಅಮೆರಿಕ ಅಧ್ಯಕ್ಷರಿಗೆ ವಿಶೇಷ ವ್ಯವಸ್ಥೆ
ಸಾಮಾನ್ಯವಾಗಿ ಜಿ20 ಶೃಂಗಸಭೆ ವೇಳೆ ದ್ವಿಪಕ್ಷೀಯ ಚರ್ಚೆಗೆ ಅವಕಾಶ ಇರಲ್ಲ. ಆದ್ರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಭಾರತ ವಿಶೇಷ ವಿನಾಯಿತಿ ನೀಡಿದೆ. ಎರಡೂ ದೇಶಗಳ ಜೊತೆ ದ್ವಿಪಕ್ಷೀಯ ಮಾತುಕತೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರಮುಖ ವಿಚಾರ ಏನೆಂದರೆ ಅಮೆರಿಕ ಜೊತೆಗಿನ ಸಭೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೆ ಪಿಎಂ ಮೋದಿ ಮುಖ್ಯವಾಗಿ 6 ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ಬೈಡನ್ & ಪ್ರಧಾನಿ ಮೋದಿ ಅವರ ನಡುವೆ ಸಭೆ ಆರಂಭವಾಗಿದೆ. ಇನ್ನೇನು ಕೆಲವೇ ನಿಮಿಷದಲ್ಲಿ ಸಭೆಯಲ್ಲಿ ಚರ್ಚೆಯಾದ ವಿಚಾರಗಳು ತಿಳಿಯಲಿವೆ.












Click it and Unblock the Notifications