ಭಾರತದ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ದೊಡ್ಡಣ್ಣ ಅಮೆರಿಕ!

ಭಾರತ ಅಂದರೆ ಜಗತ್ತಿಗೆ ಒಂದು ಹೆಮ್ಮೆ, ಅದರಲ್ಲೂ ನಮ್ಮ ಹೆಮ್ಮೆಯ ಭಾರತವು ಎಲ್ಲಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ. ಹಾಗೇ ಬಾಹ್ಯಾಕಾಶ ಕ್ಷೇತ್ರದಲ್ಲೂ ಭಾರತದ ಸಾಧನೆ ರಾರಾಜಿಸುತ್ತಿದೆ. 'ನಾಸಾ' ತನ್ನ ಉಪಗ್ರಹ ಉಡಾಯಿಸಲು ಭಾರತವನ್ನ ಅವಲಂಬಿಸುವ ಸ್ಥಿತಿ ನಿರ್ಮಾಣ ಆಗುತ್ತಿದೆ. ಇದೇ ಹೊತ್ತಲ್ಲಿ ಭಾರತದ ಬಾಹ್ಯಾಕಾಶ ಲೋಕದ ಸಾಧನೆಯ ಬಗ್ಗೆ ಮನಸ್ಸು ತುಂಬಿ ಮಾತನಾಡಿದೆ ಜಗತ್ತಿನ ದೊಡ್ಡಣ್ಣ ಅಮೆರಿಕ.

ನಿಮಗೆಲ್ಲಾ ನೆನಪಿರಬಹುದು, ಭಾರತ ತನ್ನ ಮೊದಲ ಬಾಹ್ಯಾಕಾಶ ನೌಕೆ ಉಡಾಯಿಸಲು ಎಷ್ಟೆಲ್ಲಾ ಕಷ್ಟ ಎದುರಿಸಿತ್ತು ಎಂದು. ಆದರೆ ಅದೇ ಕಳೆದ 20 ವರ್ಷದಲ್ಲಿ ಭಾರತದ ಈ ಸಾಧನೆ ಮುಗಿಲೆತ್ತರಕ್ಕೆ ಚಿಮ್ಮಿದೆ. ಒಂದು ನೌಕೆ ಉಡಾಯಿಸಲು ಪರದಾಡಿದ್ದ ಸಂಸ್ಥೆಯೇ ಇಂದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಘಟನೆಗಳನ್ನು ನಿರ್ಧರಿಸುವಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಅದ್ರಲ್ಲೂ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಬಗ್ಗೆ ಅಧ್ಯಯನ ನಡೆಸಿದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಈಗ 'ಚಂದ್ರಯಾನ -3' ಉಡಾವಣೆಗೆ ನಮ್ಮ ಹೆಮ್ಮೆಯ ಇಸ್ರೋ ಸಿದ್ಧತೆ ನಡೆಸಿದ ಸಂದರ್ಭದಲ್ಲೇ ಅಮೆರಿಕ ಕೂಡ ಶಹಬ್ಬಾಷ್ ಎಂದಿದೆ.

American New York Times happy about India achievements in Space

ಭಾರತದ ಸಾಧನೆ ಹೊಗಳಿದ ಅಮೆರಿಕ!

ಹೌದು, 'ಚಂದ್ರಯಾನ -3' ಉಡಾವಣೆಗಾಗಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಜ್ಜಾಗಿರುವ ಹೊತ್ತಲ್ಲೇ ಸಿಹಿಸುದ್ದಿ ಸಿಕ್ಕಿದೆ. ಅಮೆರಕದ ಪ್ರಸಿದ್ಧ ದಿನಪತ್ರಿಕೆಯಾದ 'ನ್ಯೂಯಾರ್ಕ್‌ ಟೈಮ್ಸ್‌' ಭಾರತದ ಸಾಧನೆಯನ್ನು ಹೊಗಳಿದೆ. 'ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ನವೋದ್ಯಮ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಬಾಹ್ಯಾಕಾಶದ ಜೊತೆಗೆ ಭೂಮಿ ಸಾಧಿಸಲಿರುವ ಸಂಪರ್ಕ ವಿಚಾರದಲ್ಲಿ ಭಾರತ ಸಾಕಷ್ಟು ಬೆಳವಣಿಗೆಯನ್ನ ಕಾಣುತ್ತಿದ್ದು, ಚೀನಾಗೆ ಸ್ಪರ್ಧೆ ನೀಡುತ್ತಿದೆ' ಎಂದಿದೆ ನ್ಯೂಯಾರ್ಕ್‌ ಟೈಮ್ಸ್‌. ಈ ಕುರಿತು ವಿಶೇಷ ಲೇಖನದಲ್ಲಿ ಇಸ್ರೋ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದೆ ನ್ಯೂಯಾರ್ಕ್‌ ಟೈಮ್ಸ್‌ ದಿನಪತ್ರಿಕೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅಮೆರಿಕಗೆ ಭೇಟಿ ನೀಡಿದ ನಂತರ ವರದಿ ಪ್ರಕಟವಾಗಿದ್ದು ಕುತೂಹಲ ಕೆರಳಿಸಿದೆ.

ಭಾರತದ 1963ರ ದಿನಗಳ ನೆನಪು

ಈ ಲೇಖನದಲ್ಲಿ ಭಾರತ ತನ್ನ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಆರಂಭಿಸಿದಾಗ ಪರಿಸ್ಥಿತಿ ಹೇಗಿತ್ತು ಎಂಬುದನ್ನ ಕೂಡ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವಿವರಿಸಿದೆ. '1963ರಲ್ಲಿ ತನ್ನ ಮೊದಲ ರಾಕೆಟ್‌ ಲಾಂಚ್ ಮಾಡಿದಾಗ ಭಾರತ ಬಡರಾಷ್ಟ್ರ ಎನಿಸಿಕೊಂಡಿತ್ತು. ಸಣ್ಣದಾಗಿದ್ದ ಗಗನನೌಕೆ ಸೈಕಲ್‌ ಮೇಲೆ ಉಡಾವಣೆ ಕೇಂದ್ರಕ್ಕೆ ಬಂದಿತ್ತು. ಭೂಮಿಯಿಂದ ಸುಮಾರು 124 ಮೈಲು ದೂರದ ಕಕ್ಷೆಯಲ್ಲಿ ಅದನ್ನ ಸೇರಿಸಲಾಗಿತ್ತು. ಆಗ ಭಾರತ ಅಮೆರಿಕ ಮತ್ತು ರಷ್ಯಾಗೆ ಸರಿಸಮನಾಗಿ ಹೆಜ್ಜೆ ಹಾಕಲು ಭಾರತ ಪರದಾಡಿತ್ತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳೆಯೋಕೆ ಭಾರತ ತುಂಬಾ ಕಷ್ಟಪಟ್ಟಿತ್ತು, ಆದರೆ ಈಗ ಬಾಹ್ಯಾಕಾಶ ಲೋಕದಲ್ಲಿ ದೊಡ್ಡ ಸಾಧನೆ ಮಾಡುತ್ತಿದೆ' ಎಂದಿದೆ ಅಮೆರಿಕ ಮೂಲದ ಪ್ರಸಿದ್ಧ ದಿನಪತ್ರಿಕೆ.

American New York Times happy about India achievements in Space

'ಚಂದ್ರಯಾನ-3' ಮೂಲಕ ಮಹತ್ವದ ಸಾಧನೆ

ಅಂದಹಾಗೆ 'ಚಂದ್ರಯಾನ-1' & 'ಚಂದ್ರಯಾನ-2'ಗೆ ಹೋಲಿಸಿದರೆ 'ಚಂದ್ರಯಾನ-3' ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಚಂದ್ರನ ಸುತ್ತ ಅವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿ ಧಾತುರೂಪದ ಸಂಯೋಜನೆ ಮುಂತಾದ ವಿಚಾರಗಳ ಅಧ್ಯಯನಕ್ಕೆ ಇಸ್ರೋ ಸಂಸ್ಥೆ ಸಜ್ಜಾಗಿದೆ. ಚಂದ್ರಯಾನ-3 ಇನ್ನೊಂದು ವಿಶೇಷತೆ ಏನೆಂದರೆ, ಬಾಹ್ಯಾಕಾಶ ನೌಕೆ ಜೊತೆ ರೋವರ್ ಚಂದ್ರನ ಅಂಗಳಕ್ಕೆ ಎಂಟ್ರಿ ಕೊಡಲಿದೆ (Chandrayan 3 Launch).

ಮಾನವನ ಕುತೂಹಲಕ್ಕೆ ಸಿಗುತ್ತಾ ಉತ್ತರ?

ಒಟ್ಟಾರೆ ಹೇಳೋದಾದ್ರೆ ಭಾರತದ ಮಹತ್ವದ ಬಾಹ್ಯಾಕಾಶ ಯೋಜನೆ ಉಡಾವಣೆಗೆ ಕೆಲವೇ ದಿನ ಬಾಕಿ ಇರುವಾಗಲೇ, ಅಮೆರಿಕ ಮೂಲದ ಪತ್ರಿಕೆಯು ಪ್ರಕಟಿಸಿದ ಲೇಖನ ಸಂಚಲನ ಸೃಷ್ಟಿಮಾಡಿದೆ. ಇದು ಭಾರತದ ಸ್ನೇಹಿತ ರಾಷ್ಟ್ರಗಳಿಗೆ ಹೆಮ್ಮೆ ತರಿಸಿದ್ದರೆ, ಭಾರತದ ಶತ್ರು ರಾಷ್ಟ್ರಗಳಿಗೆ ಇರಿಸುಮುರಿಸುವ ಉಂಟು ಮಾಡಿದೆ. ಆದರೂ ಇದಕ್ಕೆಲ್ಲಾ ಕೇರ್ ಮಾಡದೆ ಭಾರತ ಮುನ್ನುಗ್ಗುತ್ತಿದೆ. ಅದ್ರಲ್ಲೂ ಈ ಬಾರಿ ಚಂದ್ರನ ಮೇಲೆ ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಸಾವಿರಾರು ವರ್ಷದಿಂದಲೂ ಮಾನವನಿಗೆ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಆ ಕುತೂಹಲಗಳಿಗೆ ಉತ್ತರ ಹುಡುಕಿ ಚಂದ್ರನತ್ತ ಹೊರಟಿದೆ.

ಉಡಾವಣೆಗೆ ಸಕಲ ಸಿದ್ಧತೆ ಆರಂಭ

'ಚಂದ್ರಯಾನ -3' ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಲಾಂಚ್ ಆಗಲಿದೆ. ಇಸ್ರೋ ಸಂಸ್ಥೆ ಜುಲೈ 13ರ ಮಧ್ಯಾಹ್ನ 2.30ಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಈ ಯೋಜನೆ ಟಾರ್ಗೆಟ್. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಉಡಾಯಿಸುವ ಚಂದ್ರಯಾನ ನೌಕೆ ಲ್ಯಾಂಡ್ ಆಗಲಿದೆ. ಹೀಗಾಗಿ ಇನ್ನೇನು ಕೆಲವೇ ದಿನ ಬಾಕಿ ಇದ್ದಾಗ ಬಾಹ್ಯಾಕಾಶ ನೌಕೆಯ ಉಡಾವಣೆಗೆ ಬೇಕಾದ ಅಂತಿಮ ಹಂತದ ಸಿದ್ಧತೆಗಳು ಅಬ್ಬರದಿಂದ ಸಾಗಿವೆ (Chandrayaan 3 Launch).

ಭಾರತದ ಜೊತೆ ನಾಸಾ ಹೆಜ್ಜೆ!

ಹಿಂದೆ ಭಾರತದ ಜೊತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ತಂತ್ರಜ್ಞಾನ & ಮಾಹಿತಿ ಹಂಚಿಕೊಳ್ಳಲು ಅಮೆರಿಕ ಹಿಂದೇಟು ಹಾಕುತ್ತಿತ್ತು. ಅದ್ರಲ್ಲೂ 'ನಾಸಾ' ಸಂಸ್ಥೆ ಭಾರತದ ಇಸ್ರೋ ಜೊತೆಗೆ ಅಷ್ಟೊಂದು ಒಡನಾಟ ಹೊಂದಿರಲಿಲ್ಲ. ಯಾವಾಗ ಭಾರತದ ಇಸ್ರೋ ಮಂಗಳ ಗ್ರಹಕ್ಕೆ ಉಪಗ್ರಹ ಉಡಾಯಿಸಿ, ಮಂಗಳನ ಕಕ್ಷೆಯಲ್ಲಿ ಯಶಸ್ವಿಯಾಗಿ ಅದನ್ನ ಸುತ್ತು ಹಾಕುವಂತೆ ಮಾಡಿತ್ತೋ ಅಂದಿನಿಂದ ಪರಿಸ್ಥಿತಿ ಬದಲಾಗಿತ್ತು. ಇಸ್ರೋ ಜೊತೆಗೆ ಕೆಲಸ ಮಾಡೋದಕ್ಕೆ ನಾಸಾ ಮುಂದೆ ಬಂದಿತ್ತು. ಹೀಗೆ ಕಳೆದ 8-9 ವರ್ಷದಿಂದ ಇದು ಇನ್ನಷ್ಟು ಹೆಚ್ಚಾಗಿದ್ದು, ಭಾರತದ ಇಸ್ರೋ ಜೊತೆ ಬೆರೆಯಲು ಅಮೆರಿಕದ ನಾಸಾ ಯತ್ನಿಸುತ್ತಿದೆ.

ಒಟ್ನಲ್ಲಿ ಭಾರತ ಎಲ್ಲಾ ಅಡೆತಡೆ ಮೀರಿ ಬಾಹ್ಯಾಕಾಶ ಲೋಕದಲ್ಲಿ ಬೆಳೆದು ನಿಲ್ಲುತ್ತಿದೆ. ಅದರಲ್ಲೂ ಶ್ರೀಮಂತ ರಾಷ್ಟ್ರಗಳಿಗೆ ಠಕ್ಕರ್ ಕೊಡುವಷ್ಟು ಗಟ್ಟಿಯಾಗಿ ಬೆಳೆದಿದೆ ಹಮ್ಮೆಯ ಸಂಸ್ಥೆ ಇಸ್ರೋ. ಇನ್ನೇನು 'ಚಂದ್ರಯಾನ -3' ಕೆಲವೇ ದಿನದಲ್ಲಿ ಬಾಹ್ಯಾಕಾಶಕ್ಕೆ ಹಾರಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಈ ಸಂದರ್ಭದಲ್ಲಿ ಅಮೆರಿಕ ಕೂಡ ಭಾರತವನ್ನು ಹೊಗಳಿದೆ. ಇದರ ಜೊತೆಗೇ ಭಾರತದ ಬಾಹ್ಯಾಕಾಶ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದೆ. ಈ ಮೂಲಕ ತಾನು ಕೂಡ ಭಾರತದ ಜೊತೆ ಬಾಹ್ಯಾಕಾಶ ಲೋಕದಲ್ಲಿ ಹೆಜ್ಜೆ ಹಾಕಲು ಸಿದ್ಧ ಎಂಬ ಮುನ್ಸೂಚನೆ ಕೊಟ್ಟಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+