ಸಾಯುವ ಮುನ್ನ ನರ್ಸ್ ಲಿನಿ ಹೇಳಿದ ಮಾತುಗಳೇನು!?
ಬೆಂಗಳೂರು, ಮೇ 22: ಕೇರಳದಲ್ಲಿ ಮಾರಣಾಂತಿಕ ಎನ್ಐವಿ ವೈರಸ್ (ನಿಪಾ) ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ. ಸೋಂಕು ತಗುಲಿದವರ ಆರೈಕೆಯಲ್ಲಿ ತೊಡಗಿದ್ದ ನರ್ಸ್ ಲಿನಿ ಕೂಡಾ ಚಿಕಿತ್ಸೆ ನೀಡುವ ವೇಳೆಯಲ್ಲಿ ಸೋಂಕಿಗೆ ಬಲಿಯಾಗಿರುವ ದುರ್ಘಟನೆ ನಡೆದಿದೆ.
ಸಾಯುವ ಮುನ್ನ ನರ್ಸ್ ಲಿನಿ (31) ಅವರು ತಮ್ಮ ಪತಿ ಸಜೀಶ್ ಗೆ ಪತ್ರ ಬರೆದಿದ್ದು, ಮನಕಲುಕುವಂತಿದೆ. ಇಬ್ಬರು ಪುತ್ರರಾದ 5 ವರ್ಷ ವಯಸ್ಸಿನ ಸಿದ್ದಾರ್ಥ್ ಹಾಗೂ 2 ವರ್ಷ ವಯಸ್ಸಿನ ರಿಥುಲ್ ಅವರನ್ನು ಲಿನಿ ಅಗಲಿದ್ದಾರೆ.

ಪೆರೆಮ್ರಾ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವಾಗ ಮೃತ ಪಟ್ಟ ಲಿನಿ ಅವರ ಪಾರ್ಥೀವ ಶರೀರವನ್ನು ಆಕೆಯ ಮನೆಗೂ ಕರೆದೊಯ್ಯಲು ಆಗಲಿಲ್ಲ. ಸೋಂಕು ಹರಡುವ ಸಾಧ್ಯತೆಯಿಂದ ಕೋಯಿಕೋಡ್ ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸೋಂಕು ತಗುಲಿರುವುದು ತಿಳಿದ ನಂತರ ಲಿನಿ ತನ್ನ ಪತಿಗಾಗಿ ಪತ್ರವೊಂದನ್ನೂ ಬರೆದು ತಮ್ಮ ಇಂಗಿತ ಹಂಚಿಕೊಂಡಿದ್ದರು. 'ನಾನು ನಿನ್ನನ್ನು ಭೇಟಿಯಾಗುತ್ತೇನೆಂದು ನನಗನ್ನಿಸುತ್ತಿಲ್ಲ. ದಯವಿಟ್ಟು ನನ್ನ ಮಕ್ಕಳನ್ನು ನೋಡಿಕೊ. ನಿನ್ನ ಜತೆ ಮಕ್ಕಳನ್ನೂ ಗಲ್ಫ್ಗೆ ಕರೆದುಕೊಂಡು ಹೋಗು; ನನ್ನ ತಂದೆಯಿದ್ದಂತೆ ಒಬ್ಬನೇ ಇರಬೇಡ, ಪ್ಲೀಸ್' ಎಂದು ಗಲ್ಫ್ನಲ್ಲಿದ್ದ ತನ್ನ ಗಂಡನಿಗೆ ಪತ್ರದಲ್ಲಿ ಕೇಳಿಕೊಂಡಿದ್ದಾರೆ.












Click it and Unblock the Notifications