Alcohol Price: ಮದ್ಯ ಪ್ರಿಯರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್!
ಕೇಂದ್ರ ಸರ್ಕಾರವು ಇದೀಗ ಮದ್ಯ ಪ್ರಿಯರಿಗೆ ಪರೋಕ್ಷವಾಗಿ ಶಾಕ್ ಕೊಡುವುದಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರವು ಕೆಲವೇ ದಿನಗಳ ಮುಂಚೆಯಷ್ಟೇ ಸ್ಟ್ರಾಂಗ್ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆ ಮಾಡಿತ್ತು. ರಾಜ್ಯದಲ್ಲಿ ನಿರಂತರವಾಗಿ ಮದ್ಯದ ಬೆಲೆ ಏರಿಕೆ ಆಗುತ್ತಿರುವುದರಿಂದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಮದ್ಯದ ಬೆಲೆಯು ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಕೇಂದ್ರ ಸರ್ಕಾರದ ಆ ಒಂದು ನಿರ್ಧಾರದಿಂದ ದೇಶದಾದ್ಯಂತ ಮದ್ಯದ ಬೆಲೆ ಹೆಚ್ಚಳವಾಗುವ ಆತಂಕ ಎದುರಾಗಿದೆ. ಮದ್ಯನೀತಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಬಗ್ಗೆ ಅಚ್ಚರಿ ಮೂಡಿದ್ದು. ವಿವಿಧ ಮದ್ಯಗಳ ಬೆಲೆ ಏರಿಕೆ ಆಗುವ ಮುನ್ಸೂಚನೆ ಸಿಕ್ಕಿದೆ. ಅದರ ವಿವರ ಇಲ್ಲಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈಗಾಗಲೇ ಕಳೆದ ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿಗೂ ಹೆಚ್ಚು ಮದ್ಯದ ಬೆಲೆಯನ್ನು ಹೆಚ್ಚಳ ಮಾಡಿದೆ. ಇದೀಗ ಕೇಂದ್ರ ಬಿಜೆಪಿ ಸರ್ಕಾರದ ಸರದಿ. ಕೇಂದ್ರ ಸರ್ಕಾರವು ನೇರವಾಗಿ ಮದ್ಯದ ಬೆಲೆಯನ್ನು ಜಾಸ್ತಿ ಮಾಡುತ್ತಿಲ್ಲ. ಆದರೆ, ವಿದೇಶಿ ಮದ್ಯಕ್ಕೆ ಮಣೆ ಹಾಕಿದ್ದು. ಇದರಿಂದ ಭಾರತದ ಮದ್ಯಗಳ ಬೆಲೆ ಸಹಜವಾಗಿಯೇ ಹೆಚ್ಚಳವಾಗಲಿದೆ. ಮದ್ಯದ ಕಂಪನಿಗಳು ತಮ್ಮ ನಷ್ಟವನ್ನು ಸರಿದೂಗಿಸಿಕೊಳ್ಳಲು ಬೆಲೆ ಏರಿಕೆಯ ಮೊರೆ ಹೋಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಕೇಂದ್ರ ಸರ್ಕಾರ ಮದ್ಯದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿರ್ಧಾರ ಏನು ಅಂತ ಮುಂದೆ ನೋಡೋಣ..

ಕೇಂದ್ರ ಸರ್ಕಾರವು ಅಮೆರಿಕದಿಂದ ಭಾರತಕ್ಕೆ ಆಮದು ಆಗುತ್ತಿರುವ Bourbon Whiskey ಸೇರಿದಂತೆ ವಿವಿಧ ಮದ್ಯಗಳ ಮೇಲಿನ ಆಮದು ಸುಂಕ / ತೆರಿಗೆಯನ್ನು ಬರೋಬ್ಬರಿ ಶೇ 50ರಷ್ಟು ಇಳಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಅಮೆರಿಕಗೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಮೆರಿಕದ ವಿಸ್ಕಿಯ ಮೇಲೆ ಭಾರತವು ಶೇ 150ರಷ್ಟು ಟ್ಯಾಕ್ಸ್ ಹಾಕುತ್ತಿತ್ತು. ಆದರೆ, ಇದೀಗ ಶೇ 50%ರಷ್ಟು ಇಳಿಕೆ ಮಾಡಿದೆ. ಇದರಿಂದ ಭಾರತದ ಮದ್ಯ ಉತ್ಪಾದನ ಕಂಪನಿಗಳಿಗೆ ನಡುಕವುಂಟಾಗಿದ್ದು, ಆರ್ಥಿಕ ನಷ್ಟದ ಆತಂಕ ಎದುರಾಗಿದೆ. ಇದರಿಂದ ವಿವಿಧ ಮದ್ಯಗಳ ಬೆಲೆಯನ್ನು ಹೆಚ್ಚಿಸುವುದಕ್ಕೆ ಕಂಪನಿಗಳು ಈಗಲೇ ಚಿಂತನೆ ಶುರು ಮಾಡಿಕೊಂಡಿವೆ.
ಮದ್ಯ ಕಂಪನಿಗಳಿಗೆ ನಷ್ಟವಾದರೆ ಸಹಜವಾಗಿಯೇ ದೇಶದಲ್ಲಿ ವಿವಿಧ ಮದ್ಯಗಳ ಬೆಲೆ ಏರಿಕೆ ಆಗಲಿದೆ. ಹೀಗಾಗಿ, ಈಗಾಗಲೇ ಮದ್ಯ ಪ್ರಿಯರು ಬೆಲೆ ಏರಿಕೆಯ ಶಾಕ್‌ನಲ್ಲಿ ಇದ್ದಾರೆ. ಅಲ್ಲದೆ ಇನ್ನು ಈ ಬಾರಿ ರಾಜ್ಯ ಸರ್ಕಾರದ ಮಂಡನೆ ಮಾಡಲಿರುವ ಬಜೆಟ್‌ನಲ್ಲೂ ಮದ್ಯದ ಮೇಲೆ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಕಿಕ್ ಬೇಕೆಂದರೆ ಹೆಚ್ಚು ದುಡ್ಡು ಕೊಡಬೇಕಾಗುತ್ತದೆ.
ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ಸಹ ಆಕ್ಷೇಪ ವ್ಯಕ್ತಪಡಿಸಿದೆ. ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾದ ಮೇಲೆ ಅಲ್ಲಿನ ಕಾನೂನು ಮತ್ತು ನೀತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಟ್ರಂಪ್ ಎದುರು ಸಂಪೂರ್ಣವಾಗಿ ಮಣಿದಿರುವ ಮೋದಿಯ ಸರ್ಕಾರ ಅಮೆರಿಕಾದಿಂದ ಆಮದಾಗುವ ಮದ್ಯದ ಮೇಲಿನ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಇದರ ಪರಿಣಾಮ ಭಾರತದ ಮದ್ಯ ಕಂಪನಿಗಳು ದೊಡ್ಡ ಪ್ರಮಾಣದ ನಷ್ಟ ಅನುಭವಿಸುವ ಆತಂಕ ಎದುರಾಗಿದೆ ಎಂದು ಹೇಳಿದೆ.












Click it and Unblock the Notifications