Akshaya Tritiya 2023: ಚಿನ್ನ ಕೊಳ್ಳುವ ಮುನ್ನ ನಗರವಾರು ದರ ತಿಳಿಯಿರಿ

ಬೆಂಗಳೂರು, ಏಪ್ರಿಲ್. 21: ಈ ಬಾರಿಯ ಅಕ್ಷಯ ತೃತೀಯವನ್ನು ಏಪ್ರಿಲ್ 22 ರಂದು ಶನಿವಾರ ಆಚರಿಸಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ರತಿ ಬಾರಿ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯ ಆಚರಿಸಲಾಗುತ್ತದೆ.

ಸಂಸ್ಕೃತದಲ್ಲಿ ಅಕ್ಷಯ ಎಂದರೆ 'ಶಾಶ್ವತ, ಎಂದಿಗೂ ಮುಗಿಯದ ಸಂತೋಷ, ಯಶಸ್ಸು ಮತ್ತು ಆನಂದ' ಎಂಬ ಅರ್ಥವಿದೆ. ಜೊತೆಗೆ ತೃತೀಯಾ ಎಂದರೆ 'ಮೂರನೇ' ಎಂಬ ಅರ್ಥವಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ನಂಬಿಕೆಯೂ ಇದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ.

Akshaya Tritiya 2023: Check City Wise Gold Rate

ಈ ಬಾರಿಯ ಅಕ್ಷಯ ತೃತೀಯಕ್ಕೆ ಚಿನ್ನದ ಖರೀದಿ ಸಮಯವು ಏಪ್ರಿಲ್ 22 ರಂದು ಬೆಳಗ್ಗೆ 07:49 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 23 ರಂದು ಬೆಳಿಗ್ಗೆ 06:13 ಕ್ಕೆ ಕೊನೆಗೊಳ್ಳುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಆದರೂ, ಇಡೀ ದಿನದೊಳಗೆ, ಚಿನ್ನವನ್ನು ಖರೀದಿಸಲು ಹಲವಾರು ಮುಹೂರ್ತಗಳು ಇವೆ.

ಇದು ಯುಗಾದಿ ಮತ್ತು ವಿಜಯ ದಶಮಿ ಜೊತೆಗೆ ವರ್ಷದ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಈ ಮೂರು ದಿನಗಳಲ್ಲಿ ಯಾವುದೇ ದುಷ್ಪರಿಣಾಮಗಳು ಇರುವುದಿಲ್ಲವಾಗಿರುವುದರಿಂದ ಈ ದಿನಗಳಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲು ಶುಭ ಮುಹೂರ್ತವನ್ನು ಪರಿಗಣಿಸಬೇಕಾಗಿಲ್ಲ ಎಂದು ನಂಬಲಾಗಿದೆ.

*ಅಕ್ಷಯ ತೃತೀಯ ದಿನದಂದು ಖರೀದಿಗೆ ಶುಭ ಸಮಯ*

22 ಏಪ್ರಿಲ್ 2023, ಶನಿವಾರ, 07:49 AM

ಏಪ್ರಿಲ್ 23, 2023, ಭಾನುವಾರ, 07:47 AM

Akshaya Tritiya 2023: Check City Wise Gold Rate

ಕಳೆದ 10 ದಿನದಲ್ಲಿ 4 ದಿನ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಉಳಿದ ಆರು ದಿನಗಳ ಪೈಕಿ ನಾಲ್ಕು ಬಾರಿ ಇಳಿಕೆಯಾಗಿದ್ದರೆ, ಕೇವಲ ಒಂದು ಬಾರಿ ಮಾತ್ರ ಅಂದರೆ ಏಪ್ರಿಲ್ 17 ರಂದು ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಹಲವಾರು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಾ ಸಾಗುತ್ತಿದೆ .

ನೀವು ಅಕ್ಷಯ ತೃತೀಯಕ್ಕೆ ಮುಂಚಿತವಾಗಿ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇಂದು ನಗರವಾರು ಚಿನ್ನದ ದರ ಹೇಗಿದೆ ಎಂಬುದನ್ನು ಪಟ್ಟಿಯಲ್ಲಿ ಗಮನಿಸಬಹುದು.

ನಗರ ಚಿನ್ನದ ಬೆಲೆ (22kt) ಚಿನ್ನದ ಬೆಲೆ (24kt)
ದೆಹಲಿ 61,080 ರೂ. 56,000 ರೂ.
ಮುಂಬೈ 60,930 ರೂ. 55,850 ರೂ.
ಬೆಂಗಳೂರು 60,980 ರೂ. 55,900 ರೂ.
ಕೋಲ್ಕತ್ತಾ 60,930 ರೂ. 55,850 ರೂ.
ಹೈದರಾಬಾದ್ 60,930 ರೂ. 55,850 ರೂ.
ಸೂರತ್ 60,980 ರೂ. 55,900 ರೂ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+