ಆಟೋ ಪ್ರಯಾಣಕ್ಕಿಂತ ಕಡಿಮೆ ದರದಲ್ಲಿ ವಿಮಾನ ಪ್ರಯಾಣ!
ಗೋರಖ್ಪುರ, ಸೆಪ್ಟೆಂಬರ್ 04: 'ಇಂದಿನ ದಿನದಲ್ಲಿ ಆಟೋ ರಿಕ್ಷಾ ಪ್ರಯಾಣ ದರಕ್ಕಿಂತ ವಿಮಾನಯಾನ ದರ ಕಡಿಮೆಯಾಗಿದೆ' ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, "ಇಂದು ಆಟೋ ರಿಕ್ಷಾಗಳ ಪ್ರಯಾಣ ದರಕ್ಕಿಂತ ಕಡಿಮೆ ದರದಲ್ಲಿ ವಿಮಾನಯಾನ ಮಾಡಬಹುದು. ಇಂದು ನಾವು ಆಟೋ ರಿಕ್ಷಾದಲ್ಲಿ ಒಂದು ಕಿಮೀ ಪ್ರಯಾಣಿಸುವುದಕ್ಕೆ 5 ರೂ. ತೆರುತ್ತೇವೆ. ಆದರೆ ವಿಮಾನದಲ್ಲಿ ಒಂದು ಕಿಮೀ.ಗೆ ಕೇವಲ 4 ರೂ. ಅಷ್ಟನ್ನೇ ತೆರುತ್ತೇವೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾಗರಿಕ ವಿಮಾನಯಾನ ಸಾಕಷ್ಟು ಪ್ರಗತಿ ಕಂಡಿದೆ. ದರವೂ ಜನಸಾಮಾನ್ಯನಿಗೆ ಕೈಗೆಟುಕುತ್ತಿದೆ. ಆದ್ದರಿಂದ ವಿಮಾನ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ" ಎಂದು ಅವರು ಹೇಳಿದರು.

'2013 ಕ್ಕೂ ಮುನ್ನ ಕೇವಲ 6 ಕೋಟಿ ಜನರಷ್ಟೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಪ್ರಸ್ತುತ 12 ಕೋಟಿ, ಅಂದರೆ ದುಪ್ಪಟ್ಟು ಜನರು ವಿಮಾನ ಪ್ರಯಾಣ ಮಾಡುತ್ತಿದ್ದಾರೆ' ಎಂದು ಹೇಳಿದರು.












Click it and Unblock the Notifications