ಅಬ್ಬಬ್ಬ ಲಾಟ್ರಿ.. ವಿಮಾನ ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್!
ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ ಸಮಸ್ಯೆ ಅನುಭವಿಸಿದ್ದ ಗ್ರಾಹಕರ ನೆರವಿಗೆ ಸಂಸ್ಥೆ ಧಾವಿಸಿದೆ. ಇಂಜಿನ್ ಕೈಕೊಟ್ಟು ದಿಢೀರ್ ರಷ್ಯಾದಲ್ಲಿ ಲ್ಯಾಂಡ್ ಆಗಿದ್ದ ಏರ್ ಇಂಡಿಯಾ ವಿಮಾನ ಈಗ ಸೇಫ್ ಆಗಿ ಅಮೆರಿಕ ತಲುಪಿದೆ. ಹೀಗಾಗಿ ಫ್ಲೈಟ್ ಟಿಕೆಟ್ ಚಾರ್ಜ್ ವಾಪಸ್ ನೀಡಲು ಏರ್ ಇಂಡಿಯಾ ಸಂಸ್ಥೆ ಮುಂದಾಗಿದೆ!
ಹೌದು ನವದೆಹಲಿ ಮೂಲಕ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ದೋಷ ಕಾಣಿಸಿ ತುರ್ತು ಭೂಸ್ಪರ್ಶ ಮಾಡಿತ್ತು. ಹೀಗಾಗಿ ಕಳೆದ 3 ದಿನದಿಂದ ಪ್ರಯಾಣಿಕರು ಸಮಸ್ಯೆಗೆ ಸಿಲುಕಿದ್ದರು. ಇಂತಹ ಪರಿಸ್ಥಿತಿಯಲ್ಲಿ ಟಾಟಾ ಸಂಸ್ಥೆ ಒಡೆತನದ ಏರ್ ಇಂಡಿಯಾ ಪ್ರಯಾಣಿಕರ ನೆರವಿಗೆ ಬಂದಿದತ್ತು. ಏರ್ ಇಂಡಿಯಾ ವಿಶೇಷ ವಿಮಾನದ ವ್ಯವಸ್ಥೆ ಮಾಡಿ ತನ್ನ ಪ್ರಯಾಣಿಕರನ್ನ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಿದೆ. ಈ ನಡುವೆ ಮತ್ತೆ ಒಂದು ಸಿಹಿಸುದ್ದಿ ನೀಡಿದ್ದು, ಫ್ಲೈಟ್ ಚಾರ್ಜ್ ವಾಪಸ್ ನೀಡಲು ಏರ್ ಇಂಡಿಯಾ ಸಂಸ್ಥೆ ಮುಂದಾಗಿದೆ (Air India).

ಪ್ರಯಾಣಿಕರಿಗೆ ಸಿಕ್ತು ಜಾಕ್‌ಪಾಟ್!
ಅಂದಹಾಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 56 ಗಂಟೆಗಳ ನಂತರ ಪ್ರಯಾಣಿಕರು ತಮ್ಮ ಜಾಗ ತಲುಪಿದ್ದಾರೆ. ದೆಹಲಿಯಿಂದ ಹೊರಟು 56 ಗಂಟೆ ನಂತರ ತಮ್ಮ ಜಾಗಕ್ಕೆ ಸೇರಿದ್ದಾರೆ. ಹೀಗಾಗಿ ಅವರ ಸಂಪೂರ್ಣ ಟಿಕೆಟ್ ವೆಚ್ಚವನ್ನ ಏರ್ ಇಂಡಿಯಾ ಮರು ಪಾವತಿ ಮಾಡಲಿದೆ ಎಂದು ತಿಳಿಸಲಾಗಿದೆ. ಇದರ ಜೊತೆ ಏರ್ ಇಂಡಿಯಾ ವಿಮಾನಗಳಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಪ್ರಯಾಣಕ್ಕೆ ಹೆಚ್ಚುವರಿ ವೋಚರ್ ನೀಡುವ ಬಗ್ಗೆ ಕೂಡ ಸಂಸ್ಥೆ ಮಾಹಿತಿ ನೀಡಿದೆ. ಈ ಮೂಲಕ ಸಮಸ್ಯೆಗೆ ಸಿಲುಕಿದ್ದ ಪ್ರಯಾಣಿಕರಿಗೆ ಜಾಕ್‌ಪಾಟ್ ಸಿಕ್ಕಂತಾಗಿದೆ!
ಅಮೆರಿಕ ನೆಲ ತಲುಪಿದ ವಿಮಾನ!
ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 777-200 LR ವಿಮಾನ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದವರು ಸಮಸ್ಯೆಗೆ ಸಿಲುಕಿದ್ದರು. ಕೆಲವರದ್ದು ಕಾಲೇಜ್ ಇತ್ತು, ಇನ್ನೂ ಕೆಲವರು ಕೆಲಸದ ಮೇಲೆ ಅಮೆರಿಕಗೆ ಹೊರಟಿದ್ರು. ಆದರೆ ವಿಮಾನದ ತಾಂತ್ರಿಕ ದೋಷ ಅವರ ಪ್ಲ್ಯಾನ್ ಹಾಳು ಮಾಡಿತ್ತು. ಹೀಗಾಗಿ ರಷ್ಯಾದಲ್ಲಿ ಕುಳಿತು ಭಾರತೀಯ ಪ್ರಯಾಣಿಕರು ಪರದಾಡಿದ್ದರು. ಕೆಲಸಗಳಿಗೆ ತೆರಳಬೇಕಿದ್ದ ಉದ್ಯೋಗಿಗಳು ಕೂಡ ಆದಷ್ಟು ಬೇಗ ನಮ್ಮ ಜಾಗ ತಲುಪಿದರೆ ಸಾಕು ಅನ್ನುವಂತಾಗಿದೆ. ಇದೀಗ AI173D ವಿಮಾನದ ಮೂಲಕ ಪ್ರಯಾಣಿಕರನ್ನ ಸುರಕ್ಷಿತವಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಲಾಗಿದೆ.

ಪ್ರಯಾಣಿಕರಿಗೆ ವಸತಿ, ಆಹಾರದ ಸಮಸ್ಯೆ?
ಇನ್ನು ದಿಢೀರ್ ಯಾವುದೋ ದೇಶದಲ್ಲಿ ಇಳಿದ ಪರಿಣಾಮ ಪ್ರಯಾಣಿಕರು ಪರದಾಡಿಬಿಟ್ಟರು. ಪ್ರಮುಖವಾಗಿ ಎದುರಾದ ಸಮಸ್ಯೆ ಆಹಾರದ್ದು. ಮಹಿಳೆಯರು, ಮಕ್ಕಳು, ವೃದ್ಧರಿಗೆ ನೆಲದ ಮೇಲೆ ಮಲಗಲು ವ್ಯವಸ್ಥೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕೆಲ ವಿಡಿಯೋಗಳು ಕೂಡ ಹರಿದಾಡಿದ್ದವು. ಆದರೆ ಎಲ್ಲ ಸಮಸ್ಯೆ ಅರಿತು ಏರ್ ಇಂಡಿಯಾ ಸಂಸ್ಥೆ ನಿನ್ನೆ ಹೊಸ ವಿಮಾನದ ವ್ಯವಸ್ಥೆ ಮಾಡಿತ್ತು. ಈಗ ತನ್ನ ಗುರಿ ತಲುಪುವಲ್ಲಿ ವಿಮಾನ ಯಶಸ್ವಿಯಾಗಿದೆ. ಇದರ ಜೊತೆಗೆ ಟಿಕೆಟ್ ಹಣವನ್ನೂ ಹಿಂದುರಿಗಿಸಿ ಬದ್ಧತೆ ಮೆರೆದಿದೆ.
ಒಟ್ನಲ್ಲಿ ಏರ್ ಇಂಡಿಯಾ ಸಂಸ್ಥೆ ಮತ್ತೊಮ್ಮೆ ತನ್ನ ಬದ್ಧತೆ ತೋರಿಸಿದೆ. ಪ್ರಯಾಣಿಕರಿಗೆ ಉತ್ತಮ ಸೇನೆ ಒದಗಿಸುವ ಜೊತೆಗೆ, ಅವರ ಸಮಸ್ಯೆಗೂ ಸ್ಪಂದಿಸಿದೆ. ಟೆಕ್ನಿಕಲ್ ಪ್ರಾಬ್ಲಂ ಎದುರಾಗಿ, ವಿಮಾನ ದಿಢೀರ್ ರಷ್ಯಾದ ಲ್ಯಾಂಡ್ ಆಗಿದ್ದರೂ ಪ್ರಯಾಣಿಕರ ಟಿಕೆಟ್ ವೆಚ್ಚ ಮರಳಿಸುತ್ತಿದೆ. ಇದರ ಜೊತೆಗೆ ವೋಚರ್ ಸೌಲಭ್ಯವನ್ನೂ ಕಲ್ಪಿಸಿದೆ. ಹಾಗೇ ಆಗಿರುವ ತೊಂದರೆಗೆ ಪ್ರಯಾಣಿಕರಲ್ಲಿ ಕ್ಷಮೆ ಕೂಡ ಕೇಳಿದೆ. ಈ ನಡುವೆ ಭಾರತದ ವಿಮಾನ ರಷ್ಯಾ ನೆಲದಲ್ಲಿ ಇಳಿದ ವಿಚಾರವನ್ನ ಅಮೆರಿಕ ಕೂಡ ಗಮನಿಸುತ್ತಿತ್ತು. ಈಗ ವಿಮಾನ ಸೇಫ್ ಆಗಿ ಅಮೆರಿಕ ತಲುಪಿರುವುದು ದೊಡ್ಡಣ್ಣನಿಗೂ ಖುಷಿ ತಂದಿದೆ.












Click it and Unblock the Notifications