Breaking; ಏರ್ ಏಷ್ಯಾ ಸ್ವಾಧೀನಕ್ಕೆ ಮುಂದಾದ ಏರ್ ಇಂಡಿಯಾ
ನವದೆಹಲಿ, ಏಪ್ರಿಲ್ 27; ಟಾಟಾ ಒಡೆತನದ ಏರ್ ಇಂಡಿಯಾ ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಚಿಂತನೆ ನಡೆಸಿದೆ. ಮಲೇಷ್ಯಾ ಮೂಲಕ ಏರ್‌ಏಷ್ಯಾ ಸಮೂಹ 16.33ರಷ್ಟು ಪಾಲನ್ನು ಹೊಂದಿದೆ.
ಕಡಿಮೆ ದರದಲ್ಲಿ ವಿಮಾನ ಸೇವೆ ನೀಡುವ ಉದ್ದೇಶದಿಂದ 2014ರಲ್ಲಿ ಆರಂಭವಾದ ಏರ್‌ಏಷ್ಯಾ ಇಂಡಿಯಾ ಕಾರ್ಗೋ, ಚಾರ್ಟರ್ ವಿಮಾನ ಸೇವೆಗಳನ್ನು ಒಳಗೊಂಡಿದೆ.
ಆದರೆ ಇದು ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಹೊಂದಿಲ್ಲ. ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಟಾಟಾ ಒಡೆತನದ ಏರ್ ಇಂಡಿಯಾ ಈ ಕುರಿತು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)ಗೆ ಮನವಿಯನ್ನು ಸಲ್ಲಿಸಿದೆ.

ಕಳೆದ ವರ್ಷ ಏರ್ ಇಂಡಿಯಾ ಲಿಮಿಟೆಡ್ (ಎಐಎಲ್), ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಟಾಟಾ ಸನ್ಸ್ ಪ್ರವೇಟ್ ಲಿಮಿಟೆಡ್‌ನ ಅಂಗ ಸಂಸ್ಥೆ ತಾಲೇಸ್ ಪ್ರವೇಟ್ ಲಿಮಿಟೆಡ್ ಸ್ವಾಧೀನ ಮಾಡಿಕೊಂಡಿತ್ತು.
ಟಾಟಾ ಸಮೂಹ ಈ ವರ್ಷದ ಜನವರಿ 27ರಂದು ಏರ್ ಇಂಡಿಯಾವನ್ನು ತನ್ನ ವಶಕ್ಕೆ ಪಡೆದಿತ್ತು. ಈಗ ಸಮೂಹ ನಾಲ್ಕು ವಿಮಾನಯಾನ ಸಂಸ್ಥೆಗಳನ್ನು ಒಂದೇ ಸೂರಿನಲ್ಲಿ ತರಲು ಬಯಸಿದೆ.
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ವಿಸ್ತಾರ, ಏರ್‌ಏಷ್ಯಾ ಇಂಡಿಯಾವನ್ನು ಒಂದೇ ಸೂರಿನಡಿ ತರುವ ಪ್ರಯತ್ನವನ್ನು ಆರಂಭಿಸಲಾಗಿದೆ. ಇದಕ್ಕಾಗಿ ಒಂದೇ ಕಚೇರಿ ನಿರ್ಮಾಣವಾಗಲಿದ್ದು, ಗುರುಗ್ರಾಮದಲ್ಲಿ ಇದಕ್ಕಾಗಿ ಸ್ಥಳ ಸಹ ಗುರುತಿಸಲಾಗಿದೆ.












Click it and Unblock the Notifications