ಹರ್ಯಾಣದಲ್ಲಿ ಭೂದಾನ: ಅಂದು ಭಾವನಿಗೆ, ಈಗ ತಂಗಿಗೆ

ನವದೆಹಲಿ, ಜ.27- ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಹೊಸ ವರಸೆಯ ಭೂದಾನ ಚಳವಳಿ ಹಮ್ಮಿಕೊಂಡಿದ್ದಾರೆ. ಅಂದು ಹರ್ಯಾಣಾದಲ್ಲಿ ಎಕರೆಗಟ್ಟಲೆ ಜಮೀನನ್ನು ಭಾವನಿಗೆ ಕಾಣಿಕೆಯಾಗಿ ದಕ್ಕುವಂತೆ ನೋಡಿಕೊಂಡಿದ್ದ ರಾಹುಲ್, ಈ ಬಾರಿ ತವರಿನ ಕಾಣಿಕೆಯಾಗಿ ತಂಗಿಗೆ ಧಾರೆಯೆರಿದ್ದಾರೆ.

Gift Deed ( ಹರಿಯಾಣ: ರಾಹುಲ್ ಗಾಂಧಿಯಿಂದಲೂ ಭೂವಶೀಕರಣ )

aicc-vp-rahul-gandhi-gifts-land-haryana-village-to-sister-priyanka

ಹೌದು ಮಾಹಿತಿ ಹಕ್ಕು ಕಾಯಿದೆಯಡಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಎಐಸಿಸಿ ಉಪಾಧ್ಯಕ್ಷ, ಲೋಕಸಭಾ ಚುನಾವಣಾ ಪ್ರಚಾರದ ಸಾರಥಿ ರಾಹುಲ್‌ ಗಾಂಧಿ ಅವರು ತಮ್ಮ ತಂಗಿ ಪ್ರಿಯಾಂಕಾ ರಾಬರ್ಟ್ ವಡೋದ್ರಾಗೆ ಬೆಲೆಬಾಳುವ 6 ಎಕರೆ ಜಮೀನನ್ನು 2012ರಲ್ಲಿ ಉಚಿತವಾಗಿ ನೀಡಿದ್ದಾರೆ. ಗಮನಾರ್ಹವೆಂದರೆ ಈ ಜಮೀನು ಅವರ ಭಾವ ರಾಬರ್ಟ್ ವಡೋದ್ರಾ ಅವರ ಜಮೀನಿಗೆ ಅಂಟಿಕೊಂಡಿದೆ.

2008ರ ಮಾರ್ಚ್ 3ರಂದು ಹರ್ಯಾಣಾದ ಪಲವಾಲ್ ಜಿಲ್ಲೆಯ ಹಸನ್ ಪುರ ಗ್ರಾಮದಲ್ಲಿ ರಾಹುಲ್‌ ಗಾಂಧಿ ಸದರಿ ಜಮೀನನ್ನು 26.47 ಲಕ್ಷ ರೂ. ನೀಡಿ ಖರೀದಿಸಿದ್ದರು. ಕುತೂಹಲದ ಸಂಗತಿಯೆಂದರೆ ಅಂದೇ ರಾಹುಲ್‌ ಗಾಂಧಿಯ ಭಾವ ಆ ಜಮೀನಿನ ಪಕ್ಕದಲ್ಲೇ 36.90 ಲಕ್ಷ ರೂ. ನೀಡಿ 6 ಎಕರೆ ಜಮೀನನ್ನು ಖರೀದಿಸಿದ್ದಾರೆ.

ಮುಂದೆ ರಾಬರ್ಟ್ ವಡೋದ್ರಾ ಜಮೀನು ಖರೀದಿಯನ್ನು ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು ಬಯಲಿಗೆಳೆದಾಗ ಅದು ದೊಡ್ಡ ವಿವಾದವಾಗುತ್ತದೆ. ಇದರಿಂದ ಎಚ್ಚೆತ್ತ ರಾಹುಲ್, ತಾವು ಖರೀದಿಸಿದ್ದ ಜಮೀನನ್ನು 2012ರ ಜುಲೈ 12ರಂದು ಅಕ್ಕನ ಹೆಸರಿಗೆ ಬರೆದುಕೊಡುತ್ತಾರೆ. Vadra-DLF deal ವ್ಯವಹಾರ. ಆ ಖಾಸಗಿ ವಹಿವಾಟನ್ನು ಪ್ರಶ್ನಿಸುವುದಕ್ಕೆ ನೀವ್ಯಾರು ಎಂದು ತನ್ನದೇ ಅಧಿಕಾರಿಯನ್ನು (ಅಶೋಕ್ ಖೇಮ್ಕಾ) ತರಾಟೆಗೆ ತೆಗೆದುಕೊಂಡ ರಾಜ್ಯ ಸರಕಾರವು ಅಶೋಕ್ ಖೇಮ್ಕಾರ ಪ್ರಾಮಾಣಿಕತೆಗೆ ತಕ್ಕ ಶಾಸ್ತಿ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+