ಪ್ರಧಾನಿ ನರೇಂದ್ರ ಮೋದಿ ಹೇರ್ ಸ್ಟೈಲಿಗೂ 'ಕೈ'ಹಾಕಿದ ಕಾಂಗ್ರೆಸ್

Posted By:
Subscribe to Oneindia Kannada

ಲೋಕಸಭಾ ಚುನಾವಣೆಯ ವೇಳೆ ನೀಡಿದ್ದ ಪ್ರಣಾಳಿಕೆಯ ಪ್ರಕಾರ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆಯಾ, ಪ್ರಧಾನಿ ಲೋಕಸಭೆಯಲ್ಲಿ ಏನು ಹೇಳಿಕೆ ನೀಡುತ್ತಿದ್ದಾರೆ ಎನ್ನುವುದನ್ನು ಆಲಿಸುವುದು ಬಿಟ್ಟು ಮೋದಿ ಕೇಶ ವಿನ್ಯಾಸದ ಬಗ್ಗೆ ಇವರಿಗ್ಯಾಕೆ ಚಿಂತೆ ಎಂದು ನೀವು ಅಂದು ಕೊಂಡ್ರೆ ಅದು ಎಐಸಿಸಿ ಪ್ರಧಾನ ಕಾರ್ಯದರ್ಶಿಯವರ ತಪ್ಪು.

ಗುರುವಾರ (ಮಾ 3) ಸಂವಿಧಾನದ ವಿಧಿವಿಧಾನದಂತೆ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ಭಾಷಣದಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಪ್ರಮುಖವಾಗಿ ಗಾಂಧಿ ಕುಟುಂಬವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಸುಮಾರು 75 ನಿಮಿಷದ ಮೋದಿ ಭಾಷಣವನ್ನು ವಿರೋಧ ಪಕ್ಷದವರೂ (ಕೆಲವೊಂದು ಅಡೆತಡೆಯ ನಡುವೆ) ಆಲಿಸುತ್ತಿದ್ದ ವೇಳೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ನೋಟ ಮೋದಿ ಕೇಶವಿನ್ಯಾಸದ ಮೇಲೆ ಬಿದ್ದಿದ್ದು ವಿಶೇಷ.(ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಿ ಪ್ರಿಯಾಂಕ)

ಅಷ್ಟಕ್ಕೇ ಸುಮ್ಮನಿರದ ದಿಗ್ವಿಜಯ್ ಸಿಂಗ್, ಮೋದಿ ತಮ್ಮ ಕೇಶವಿನ್ಯಾಸವನ್ನು ಬದಲಾಯಿಸಿಕೊಂಡಿದ್ದಾರೆ. ಅವರ ಕೇಶ ವಿನ್ಯಾಸಕ ಯಾರು, 'ನೇಷನ್ ವಾಂಟ್ಸ್ ಟು ನೋ' ಎಂದು ಟ್ವೀಟ್ ಮಾಡಿದ್ದಾರೆ.

ಹಲವು ವಿನ್ಯಾಸಗಳ ಮೋದಿ ಕುರ್ತಾ ಎಂದೇ ಹೆಸರಾಗಿರುವ ಡ್ರೆಸ್ ನಲ್ಲಿ ಮಿಂಚುವ ಮೋದಿ, ದೇಶದ ಆಕರ್ಷಕ ಪ್ರಧಾನಿ ಎಂದೇ ಗುರುತಿಸಿಕೊಂಡವರು.

ದಿಗ್ವಿಜಯ್ ಸಿಂಗ್ ಟ್ವೀಟ್ ಗೆ , ಟ್ವಿಟ್ಟರ್ ನಲ್ಲಿ ಪರವಿರೋಧ ಉತ್ತರ, ಮುಂದಿನ ಸ್ಲೈಡ್ ಗಳಲ್ಲಿ..

ರಾಜ್ಯಸಭಾ ಸಚಿವ

ರಾಜ್ಯಸಭಾ ಸಚಿವ

ಗಾಂಧಿ ಕುಟುಂಬದ ಆಪ್ತರಾಗಿರುವ, ಸದ್ಯ ರಾಜ್ಯಸಭಾ ಸದಸ್ಯರಾಗಿರುವ ದಿಗ್ವಿಜಯ್ ಸಿಂಗ್, ಮೋದಿ ತಮ್ಮ ಹೇರ್‌ ಸ್ಟೈಲ್‌ ಬದಲಿಸಿಕೊಂಡಿದ್ದಾರೆ, ಜನರು ಅವರ ಕೇಶವಿನ್ಯಾಸಕ ಯಾರು ಎಂದು ಕೇಳುತ್ತಿದ್ದಾರೆ? ಎಂದು ವ್ಯಂಗ್ಯ ಮಿಶ್ರಿತ ಟ್ವೀಟ್‌ ಮಾಡಿದ್ದರು.

ದಿಗ್ವಿಜಯ್ ಸಿಂಗ್ ಟ್ವೀಟ್

ಮೋದಿ ಕೇಶವಿನ್ಯಾಸದ ಬಗ್ಗೆ ದಿಗ್ವಿಜಯ್ ಸಿಂಗ್ ಟ್ವೀಟ್ ಹೀಗಿತ್ತು..

ಹೀಗೊಂದು ಟ್ವೀಟ್

ನಿಮ್ಮ ಕೆಲಸ ಏನಿದ್ದರೂ ರಾಹುಲ್ ಗಾಂಧಿಯ ಬಟ್ಟೆ ಬದಲಾಯಿಸುವುದು

ಎಂಥಹಾ ಲಕ್ಷ್ಯ

ಎಂಥಹಾ ಲಕ್ಷ್ಯದಿಂದ ನೀವು ಗಮನಿಸಿದ್ದೀರಿ?

ಇಡಿ ದೇಶ ಮೋದಿ ಭಾಷಣ ಕೇಳುತ್ತಿದ್ದಾಗ

ಇಡೀ ದೇಶ ಮೋದಿ ಭಾಷಣ ಕೇಳುತ್ತಿದ್ದಾಗ, ನಿಮಗೆ ಅವರ ಕೇಶವಿನ್ಯಾಸ, ಬಟ್ಟೆ ಮುಖ್ಯವಾಯಿತಾ?

ನಿಮಗೆ ಕೂದಲಿಲ್ಲ

ನಿಮಗೆ ಕೂದಲಿಲ್ಲ, ಹೈರ್ ಸ್ಟೈಲ್ ಬಗ್ಗೆ ಕೇಶವಿನ್ಯಾಸಕರ ಬಗ್ಗೆ ಆಸಕ್ತಿಇದೆಯಾ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AICC General Secretary Digvijay Singh noticed Prime Minister Narendra Modi new hair style, and he has tweeted the same.
Please Wait while comments are loading...