ಧ್ವನಿ ಮೂಲಕ ಕೊರೊನಾ ವೈರಸ್ ಪತ್ತೆ: ಹೊಸ ಸಂಶೋಧನೆ
ನವದೆಹಲಿ, ಏಪ್ರಿಲ್ 17: ಕೊರೊನಾ ವೈರಸ್‌ನ್ನು ಧ್ವನಿ ಮೂಲಕ ಪತ್ತೆ ಹಚ್ಚುವ ಹೊಸ ಸಾಧನವೊಂದನ್ನು ಸಂಶೋಧನೆ ಮಾಡಲಾಗಿದೆ.
ರೋಮ್ ವಿಶ್ವ ವಿದ್ಯಾಲಯದ ಮೂರು ಬಯೋ ಟೆಕ್ನಾಲಜಿ ವಿದ್ಯಾರ್ಥಿಗಳು ಹಾಗೂ ಮುಂಬೈ ಪ್ರೊಫೆಸರ್ ಸೇರಿ ಇದನ್ನು ಸಂಶೋಧಿಸಿದ್ದಾರೆ.
ಸ್ಮಾರ್ಟ್‌ಫೋನ್ ಮೂಲಕ ಕೃತಕ ಬುದ್ಧಿಮತ್ತೆ ಹೊಂದಿರುವ ಧ್ವನಿ ಆಧಾರಿತ ಸಾಧನದ ಮೂಲಕ ಕೊರೊನಾ ವೈರಸ್ ಪರೀಕ್ಷೆ ಮಾಡಬಹುದಾಗಿದೆ. ಈ ಸಾಧನವನ್ನು ರೋಮ್‌ನ ಯೂನಿವರ್ಸಿಟಿ ಆಫ್ ಟೋರ್ ವರ್ಗಾಟಾದಲ್ಲಿ ಮಂದಿಯನ್ನು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಶೇ.98ರಷ್ಟು ಅಧಿಕೃತ ಫಲಿತಾಂಶ ಲಭ್ಯವಾಗಿದೆ.

ಮುಂಬೈನ ಡಿವೈ ಪಾಟೀಲ್ ಇ್‌ಸ್ಟಿಟ್ಯೂಟ್ ಆಫ್ ಬಯೋ ಟೆಕ್ನಾಲಜಿ ಆಂಡ್ ಬಯೋಇನ್‌ಫಾರ್ಮೆಟಿಕ್ಸ್ ನೀಡಿರುವ ಮಾಹಿತಿ ಪ್ರಕಾರ ಮೊಬೈಲ್ ಅಪ್ಲಿಕೇಷನ್ ಮೂಲಕ ಧ್ವನಿ ಆಧಾರದಲ್ಲಿ ರೋಗ ಪತ್ತೆಹಚ್ಚಬಹುದಾಗಿದೆ.
ಸಾಕಷ್ಟು ದೇಶಗಳಲ್ಲಿ ಧ್ವನಿ ಆಧಾರಿತ ಎಐ ಸಾಧನವನ್ನು ಕೊವಿಡ್ 19 ಪರೀಕ್ಷೆ ಬಳಕೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಆದರೆ ಭಾರತೀಯ ಈ ಸಾಧನವು ಈಗಾಗಲೇ ಇಟಲಿಯಲ್ಲಿ ಬಳಕೆ ಮಾಡಲಾಗಿದೆ. ಉತ್ತಮ ಫಲಿತಾಂಶವೂ ಲಭ್ಯವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ರಶ್ಮಿ ಚಕ್ರವರ್ತಿ, ಪ್ರಿಯಾಂಕಾ ಚೌಹಾಣ್, ಪರಿಯಾ ಗಾರ್ಗ್ ಮೂವರು ಸೇರಿ ಈ ಸಾಧನವನ್ನು ಆವಿಷ್ಕರಿಸಿದ್ದಾರೆ.ಯಾರಾದರೂ ಆ ಅಪ್ಲಿಕೇಷನ್‌ನ ಮೈಕ್ರೋ ಫೋನ್ ಮೂಲಕ ಮಾತನಾಡಿದರೆ ಸಾಧನವು ಅವರ ಧ್ವನಿಯು ಆರೋಗ್ಯವಂತ ಹಾಗೂ ವೈರಸ್ ಹೊಂದಿರುವ ವ್ಯಕ್ತಿಯ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕಫ ಹಾಗೂ ಉಸಿರಾಟದ ಶಬ್ದ ಆಧರಿಸಿ ರೋಗವನ್ನು ಕಂಡು ಹಿಡಿಯುವ ಸಾಧನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
ಪ್ರತಿಯೊಬ್ಬರ ಧ್ವನಿಯು 6300 ಪ್ಯಾರಾ ಮೀಟರ್‌ಗಳನ್ನು ಹೊಂದಿರುತ್ತದೆ. ವಿಶ್ವದಾದ್ಯಂತ 1,31,319 ಮಂದಿ ಕೊವಿಡ್ 19 ರೋಗದಿಂದ ಮೃತಪಟ್ಟಿದ್ದಾರೆ. ಯುರೋಪ್‌ನಲ್ಲಿ 88,716 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 26,950 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications