ಚುನಾವಣೆ 2019 ರಣ ತಂತ್ರ : ಬಿಜೆಪಿಯ ಮಿಷನ್ 123ರಲ್ಲಿ ಬದಲಾವಣೆ

Recommended Video

      Lok Sabha elections 2019: ಚುನಾವಣೆ 2019 ರಣ ತಂತ್ರ : ಬಿಜೆಪಿಯ ಮಿಷನ್ 123ರಲ್ಲಿ ಬದಲಾವಣೆ | Oneindia Kannada

      ನವದೆಹಲಿ, ಜನವರಿ 01 : ಲೋಕಸಭೆ ಚುನಾವಣೆ 2019ಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತೊಮ್ಮೆ ತನ್ನ ಮಿಷನ್ 123 ಯೋಜನೆಯನ್ನು ಬದಲಾಯಿಸಿಕೊಂಡಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿನ ಚುನಾವಣೆಯಲ್ಲಿನ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಹೈಕಮಾಂಡ್, ತನ್ನ ರಣತಂತ್ರದಲ್ಲಿ ಭಾರಿ ಬದಲಾವಣೆಯೊಂದಿಗೆ ಕಣಕ್ಕಿಳೀಯಲು ಯೋಜಿಸಿದೆ.

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸುಮಾರು 20 ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಮಿಷನ್ 123 ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. 2014 ರಲ್ಲಿ ಬಿಜೆಪಿ ಸ್ಪರ್ಧಿಸಿ ಸೋಲು ಕಂಡ 123 ಕ್ಷೇತ್ರಗಳ ಬಗ್ಗೆ ಅಲ್ಲಿ ಮೋದಿ ಅಲೆ ಏಕೆ ಸರಿಯಾಗಿ ಕಾರ್ಯಗತವಾಗಲಿಲ್ಲ ಎಂಬುದರ ಬಗ್ಗೆ ಚಿಂತನ ಮಂಥನ ನಡೆಸಲಾಗುತ್ತಿದೆ.

      ಮೋದಿ ಅವರು ಖುದ್ದು ಈ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರೊಟ್ಟಿಗೆ ಜನ ಸಂಪರ್ಕ ಸಭೆ ನಡೆಸಲಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ.

      ಎಲ್ಲೆಲ್ಲಿ ಚುನಾವಣೆ ಪ್ರಚಾರಕ್ಕೆ ಒತ್ತು?

      ಎಲ್ಲೆಲ್ಲಿ ಚುನಾವಣೆ ಪ್ರಚಾರಕ್ಕೆ ಒತ್ತು?

      ಪ್ರಮುಖವಾಗಿ ಪಶ್ಚಿಮ ಬಂಗಾಲ, ಅಸ್ಸಾಂ ಹಾಗೂ ಒಡಿಶಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಒಟ್ಟಾರೆ ಈ ಮೂರು ರಾಜ್ಯಗಳಿಂದ 77 ಲೋಕಸಭಾ ಸ್ಥಾನಗಳಿದ್ದು, ಸದ್ಯ ಬಿಜೆಪಿ 10 ಸ್ಥಾನಗಳನ್ನು ಮಾತ್ರ ಹೊಂದಿದೆ.

      ಯಾರಿಗೆ ಹೆಚ್ಚಿನ ಹೊಣೆ ನೀಡಲಾಗಿದೆ?

      ಯಾರಿಗೆ ಹೆಚ್ಚಿನ ಹೊಣೆ ನೀಡಲಾಗಿದೆ?

      ಬಿಜೆಪಿಯ ಯೂಥ್ ವಿಂಗ್ ನ ಸದಸ್ಯರನ್ನು ಒಗ್ಗೂಡಿಸಿಕೊಂಡು, ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು 14 ಅಂಶಗಳ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಮೊದಲ ಬಾರಿಯ ಮತದಾರರನ್ನು ಸೆಳೆಯಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಪೂನಂ ಮಹಾಜನ್ ಅವರಿಗೆ ನೀಡಲಾಗಿದೆ.

      ಮೊದಲಿಗೆ ಮೋದಿಗೆ ಮತ ನೀಡಿ

      ಮೊದಲಿಗೆ ಮೋದಿಗೆ ಮತ ನೀಡಿ

      ಮೊದಲಿಗೆ ಮೋದಿಗೆ ಮತ ನೀಡಿ ಎಂಬ ಕಾರ್ಯಕ್ರಮಕ್ಕೆ ಜನವರಿ 12 ರಿಂದ ಚಾಲನೆ ನೀಡಲಾಗುತ್ತದೆ. ಮಿಷನ್ 123 ಕಾರ್ಯಕ್ರಮಕ್ಕೆ ಬಿಜೆಪಿ ಒತ್ತು ನೀಡುತ್ತಿರುವುದರ ಬಗ್ಗೆ ಕಳೆದ ವಾರವೇ ಸುಳಿವು ಸಿಕ್ಕಿತ್ತು. ಒಡಿಶಾದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಮೋದಿ ಅವರು ಜನವರಿ 5 ಕ್ಕೆ ಮತ್ತೊಮ್ಮೆ ಒಡಿಶಾಗೆ ಆಗಮಿಸಲಿದ್ದು, ಮಯೂರ್ ಭಂಜ್ ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನವರಿ 15 ಕ್ಕೆ ಮತ್ತೊಂದು ಸಮಾವೇಶ ಹಮ್ಮಿಕೊಳ್ಳುವ ನಿರೀಕ್ಷೆಯೂ ಇದೆ.

      ಹತ್ತು ಸ್ಥಾನಗಳಿಸಲು ಬಿಜೆಪಿ ಯೋಜನೆ

      ಹತ್ತು ಸ್ಥಾನಗಳಿಸಲು ಬಿಜೆಪಿ ಯೋಜನೆ

      ಅಸ್ಸಾಂನಲ್ಲಿ ಡಿಸೆಂಬರ್ 25 ರಂದು ಅತಿ ಉದ್ದದ ರೈಲ್ವೆ ಕಮ್ ರಸ್ತೆ ಸೇತುವೆಯನ್ನು ಉದ್ಘಾಟಿಸಿದ ಮೋದಿ ಅವರು ಜನವರಿ 4 ರಂದು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 14 ಲೋಕಸಭಾ ಸ್ಥಾನಗಳ ಪೈಕಿ 11ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಯೋಜನೆ ಹಾಕಿಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+