ಸ್ಕೂಪ್ ವೂಪ್ ಸಹ ಸಂಸ್ಥಾಪಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ವಸಂತ್ ಕುಂಜ್ ನಲ್ಲಿ ಈ ದೂರನ್ನು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆ 354 ಎ, 509 ಹಾಗೂ 506 ಕಲಂಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.

ನವದೆಹಲಿ, ಏಪ್ರಿಲ್ 12: ಭಾರತದ ಅಂತರ್ಜಾಲ ಸುದ್ದಿಸಂಸ್ಥೆಯಾದ ಸ್ಕೂಪ್ ವೂಪ್ ನ ಸಹ ಸಂಸ್ಥಾಪಕ ಸುಪರ್ಣ್ ಪಾಂಡೆ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಮಾಡಿದ ದೂರು ದಾಖಲಾಗಿದೆ.

ವಾರದ ಹಿಂದಷ್ಟೇ, ದ ವೈರಲ್ ಫೀವರ್ (ಟಿವಿಎಫ್) ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅರುಣಾಭ್ ಕುಮಾರ್ ಅವರ ವಿರುದ್ಧವೂ ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

After TVF's Arunabh Kumar row, a ScoopWhoop co-founder Suparn Pandey face sexual harassment allegations

ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ವಸಂತ್ ಕುಂಜ್ ನಲ್ಲಿ ಈ ದೂರನ್ನು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆ 354 ಎ, 509 ಹಾಗೂ 506 ಕಲಂಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.

ದೂರಿನಲ್ಲೇನಿದೆ?: ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಂತ್ರಸ್ಥ ಮಹಿಳೆಯು ಸ್ಕೂಪ್ ವೂಪ್ ನ ಎಲ್ಲಾ ಇತರ ಸಹ ಸಂಸ್ಥಾಪಕರಾದ ಸಾತ್ವಿಕ್ ಮಿಶ್ರಾ ಹಾಗೂ ಶ್ರೀಪರ್ಣ ಟಿಕೇಕರ್ ವಿರುದ್ಧವೂ ಲೈಂಗಿಕ ಕಿರುಕುಳ ಹಾಗೂ ಹಲ್ಲೆಯ ಆರೋಪ ಮಾಡಿದ್ದಾರೆ.

ಅಲ್ಲದೆ, ತಮ್ಮ ವಿರುದ್ಧ ಮಾಡಲಾದ ಈ ದುಷ್ಕೃತ್ಯವನ್ನು ಮರೆಮಾಚುವ ಪ್ರಯತ್ನಗಳನ್ನೂ ಮಾಡಲಾಗಿತ್ತೆಂದು ಆರೋಪಿಸಿರುವ ಅವರು, ಸ್ಕೂಪ್ ವೂಪ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗುವ ಮಹಿಳಾ ಉದ್ಯೋಗಿಗಳ ಕೂಗು ಕೇಳುವ ವ್ಯವಸ್ಥೆಯೂ ಇಲ್ಲವೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+