Swiggy Egg Ad : ಸ್ವಿಗ್ಗಿ ಕಂಪನಿಯ ಮೊಟ್ಟೆ ಜಾಹೀರಾತು ವೈರಲ್, ವ್ಯಾಪಕ ಟೀಕೆ ಬಳಿಕ ಜಾಹೀರಾತು ಬೋರ್ಡ್‌ ತೆರವು, ಏನಿದು ಘಟನೆ?

'ಸ್ವಿಗ್ಗಿ ಕಂಪನಿ'ಯು ಹೋಳಿ ಹಬ್ಬ ಪ್ರಯುಕ್ತ ಅಳವಡಿಸಿದ್ದ ಮೊಟ್ಟಿ ಜಾಹೀರಾತು ವಿರುದ್ಧ ಟೀಕೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡು ಫಲಕಗಳನ್ನು ತೆರವು ಮಾಡಿದ ಘಟನೆ ನಡೆದಿದೆ.

ನವದೆಹಲಿ, ಮಾರ್ಚ್ 08: ಹಿಂದೂಗಳ ಪವಿತ್ರ ಹಬ್ಬಗಳ ಪೈಕಿ ಒಂದಾಗಿರುವ ಬೇಸಿಗೆ ಆರಂಭದಲ್ಲಿ ಎದುರಾಗುವ ಹೋಲಿ ಹಬ್ಬವು ಒಂದು. ಇದನ್ನು ಮನೆ ಮಂದಿ, ಮಕ್ಕಳು, ಕಚೇರಿ ಸಿಬ್ಬಂದಿ ಸೇರಿದಂತೆ ಎಲ್ಲರು ಆಚರಣೆ ಮಾಡುತ್ತಾರೆ. ಇಂತಹ ಆಚರಣೆಗೆ ವಿರುದ್ಧವೆಂಬಂತಹ ಜಾಹೀರಾತು ನೀಡುವ ಮೂಲಕ 'ಸ್ವಿಗ್ಗಿ ಕಂಪನಿ' ಟೀಕೆಗೆ ಗುರಿಯಾದ ಬಳಿಕ ಎಚ್ಚೆತ್ತುಕೊಂಡ ಘಟನೆ ನಡೆದಿದೆ.

ಆಹಾರ ಸರಬರಾಜು ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ 'ಸ್ವಿಗ್ಗಿ ಕಂಪನಿ'ಯು ಹೋಳಿ ಹಬ್ಬ ಪ್ರಯುಕ್ತ ಜಾಹೀರಾತುವೊಂದನ್ನು ಅಳವಡಿಸಿತ್ತು. ಅದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಟ್ವೀಟ್ಟರ್‌ನಲ್ಲಿ #ಹಿಂದೂಪೊಬಿಕ್‌ಸ್ವಿಗ್ಗಿ (#HinduPhobicSwiggy) ಹ್ಯಾಷ್ ಟ್ಯಾಗ್‌ ಹಾಕಿದ್ದು ಟ್ರೆಂಡ್ ಸೃಷ್ಟಿಸಿತ್ತು.

After the anti-Hindu criticism on Twitter, Swiggy cleared the egg ad of holi fest

'ಸ್ವಿಗ್ಗಿ ಕಂಪನಿ' ಹೋಳಿ ಹಬ್ಬದಾಚರಣೆ ಅಂಗವಾಗಿ ಮೊಟ್ಟೆಯ ಜಾಹೀರಾತುವೊಂದರ ಫಲಕ ಹಾಕಿದ್ದೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುಗಳ ಕೆಂಗಣಿಗೆ ಗುರಿಯಾಯಿತು. 'ಸ್ವಿಗ್ಗಿ ಕಂಪನಿಯು, ಹೋಳಿ ಹಬ್ಬದ ವೇಳೆಯಲ್ಲಿ ತಲೆಯ ಮೇಲೆ ಮೊಟ್ಟೆ ಹೊಡೆಯದಿರಿ. ಮೊಟ್ಟೆಯನ್ನು ಆಮ್ಲೆಟ್‌ ಮಾಡಿಕೊಂಡು ತಿನ್ನಿರಿ' ಎಂದು ಜಾಹೀರಾತು ನೀಡಿ ದೆಹಲಿಯ ವಿವಿಧೆಡೆ ನಾಮಫಲಕ ಅಳವಡಿಸಿತ್ತು.

ಇದರ ವಿರುದ್ಧ ನಡೆದ ಹ್ಯಾಷ್ ಟ್ಯಾಗ್ ಅಭಿಯಾನದಿಂದ ಕೂಡಲೇ ಎಚ್ಚೆತ್ತುಕೊಂಡ ಸ್ವಿಗ್ಗಿ ಕಂಪನಿ ವಿವಾದಿತ ಜಾಹೀರಾತನ್ನು ತೆರವು ಮಾಡಿತು ಎಂದು ಪಿಟಿಐ ವರದಿ ಮಾಡಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಮೊಟ್ಟೆಗಳನ್ನು ಹೊಡೆಯಬೇಡಿ ಎಂದು ಜಾಹೀರಾತು ನೀಡಿದ್ದೀರಿ ಇದು ಅನಗತ್ಯ. ಇದು ಹಿಂದೂ ವಿರೋಧಿ ನಿಲುವು ಎಂದು ಒಂದು ವರ್ಗದ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

After the anti-Hindu criticism on Twitter, Swiggy cleared the egg ad of holi fest

ಹೋಳಿ ಹಬ್ಬದ ಸಂದರ್ಭದಲ್ಲಿ ಸ್ವಿಗ್ಗಿ ಕಂಪನಿಯ ಈ ಕ್ರಮ ಲಕ್ಷಾಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಎಲ್ಲಾ ಹಬ್ಬಗಳಿಗೆ ಗೌರವವನ್ನು ತೋರಿಸಲು ಕಲಿಯಿರಿ. ಆಕ್ಷೇಪಾರ್ಹ ಜಾಹೀರಾತು ತೆಗೆದುಹಾಕಿ. ಅಲ್ಲದೇ ಹಿಂದೂಯೇತರ ಹಬ್ಬಗಳಲ್ಲಿ ಇಂತಹದ್ದನ್ನು ಏಕೆ ಮಾಡುವುದಿಲ್ಲ? ಸಾಮಾಜಿಕ ಜಾಲತಾಣದಲ್ಲಿ ಖಾರವಾದ ಪ್ರಶ್ನೆಗಳು ಸ್ವಿಗ್ಗಿ ಎದುರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+