G20 Summit: ಬಡ ರಾಷ್ಟ್ರಗಳ ಒಕ್ಕೂಟಕ್ಕೆ 'ಜಿ20' ತುಂಬುತ್ತಾ ಆನೆಬಲ?

ಅದು ಕಿತ್ತು ತಿನ್ನುವ ಬಡತನ, ಅಲ್ಲಿ ಒಂದು ಹೊತ್ತಿನ ಅನ್ನ ಸಿಕ್ಕರೆ ಅದೇ ಅವರ ಭಾಗ್ಯ. ಪ್ರತಿವರ್ಷ ಲಕ್ಷಾಂತರ ಮಕ್ಕಳು ಸರಿಯಾಗಿ ಊಟ ಸಿಗದೆ ಸಾಯುತ್ತಾರೆ. ಇಂತಹ ಅತ್ಯಂತ ಕೆಟ್ಟ ಪರಿಸ್ಥಿತಿ ಇರುವ ಖಂಡಕ್ಕೆ ಈಗ ಹೊಸ ಹುಮ್ಮಸ್ಸು ಬಂದಿದೆ. ಇಷ್ಟುದಿನ ಜಾಗತಿಕ ಮಟ್ಟದಲ್ಲಿ ಮೂಲೆಗುಂಪಾಗಿ, ಬಡತನದ ಬೇಗೆಯಲ್ಲಿ ಬೆಂದಿದ್ದ ಆಫ್ರಿಕಾ ಒಕ್ಕೂಟಕ್ಕೆ ಈಗ ಭಾರತ ಹೊಸ ಭರವಸೆ ತುಂಬಿದೆ.

ಅಂದಹಾಗೆ ಇಂದು ಆಫ್ರಿಕಾ ರಾಷ್ಟ್ರಗಳ ಒಕ್ಕೂಟಕ್ಕೆ ಎಂದೂ ಮರೆಯಲಾಗದ ದಿನ. ಹೀಗೆ ಬಡತನ & ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆಫ್ರಿಕಾ ಒಕ್ಕೂಟಕ್ಕೆ ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಹೊಸ ಭರವಸೆ ನೀಡಿದೆ. ಜಿ20 ಶೃಂಗಸಭೆಯಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಖಾಯಂ ಸದಸ್ಯತ್ವ ನೀಡುವ ಪ್ರಸ್ತಾಪ ಅಂಗೀಕರಿಸಲಾಗಿದೆ. ಆಫ್ರಿಕಾ ಒಕ್ಕೂಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಖುಷಿ ಸುದ್ದಿ ಸಿಕ್ಕಿದೆ. 'ಭಾರತ ಮಂಟಪ'ದಲ್ಲಿ ಆರಂಭ ಆಗಿರುವ ಜಿ20 ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ರು. ಈ ಮೂಲಕ ಹಲವು ದಶಕದ ಆಫ್ರಿಕಾ ಕನಸು ನನಸಾಗಿದೆ.

African union is happy now after getting the permanent membership of G20 Family

ಯುರೋಪ್ ಒಕ್ಕೂಟಕ್ಕೆ ಆಫ್ರಿಕಾ ಸಮ!

ಹೌದು, ಜಿ20 ಶೃಂಗಸಭೆಯಲ್ಲಿ ಕೈಗೊಂಡ ನಿರ್ಧಾರ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಏಕೆಂದರೆ ಇಷ್ಟುದಿನ ಜಿ20 ಒಕ್ಕೂಟಕ್ಕೆ ಸೇರಬೇಕು ಎಂದು ಆಫ್ರಿಕಾ ರಾಷ್ಟ್ರಗಳ ನಾಯಕರು ಸಾಕಷ್ಟು ಪ್ರಯತ್ನ ಮಾಡಿದ್ದರು. ಈಗ ಭಾರತದ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರಕ್ಕೆ ಇಡೀ ಜಗತ್ತು ಜೈ ಎಂದಿದೆ. ಐರೋಪ್ಯ ಒಕ್ಕೂಟಕ್ಕೆ ಸಮಾನವಾಗಿ ಆಫ್ರಿಕಾ ಒಕ್ಕೂಟ ಕೂಡ ಖಾಯಂ ಸದಸ್ಯತ್ವ ಪಡೆದುಕೊಂಡಿದೆ. ಜಿ20 ಕುಟುಂಬದ ಸದಸ್ಯತ್ವಕ್ಕೆ ಆಫ್ರಿಕಾ ಒಕ್ಕೂಟಕ್ಕೂ ಸ್ವಾಗತ ಕೋರಿದ ಪ್ರಧಾನಿ ಮೋದಿ, ಜಿ20 & ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿ ಮತ್ತಷ್ಟು ಬಲಗೊಳ್ಳಲಿದೆ ಎಂದಿದ್ದಾರೆ. 'ಸಬ್‌ ಕಾ ಸಾಥ್' ಕಲ್ಪನೆಗೆ ಅನುಗುಣವಾಗಿ ಆಫ್ರಿಕಾ ಒಕ್ಕೂಟ ಕೂಡ ಖಾಯಂ ಸದಸ್ಯತ್ವ ಪಡೆಯಬೇಕು ಎಂದು ಭಾರತ ಹೇಳಿತ್ತು.

ಆಫ್ರಿಕಾ ನಾಯಕರಿಗೆ ಖುಷಿಯೋ ಖುಷಿ

ಜಿ20 ಒಕ್ಕೂಟದಲ್ಲಿ ಖಾಯಂ ಸ್ಥಾನ ಸಿಕ್ಕಿರುವ ಬಗ್ಗೆ ಆಫ್ರಿಕಾದ ವಿವಿಧ ದೇಶಗಳ ನಾಯಕರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಾದ್ ದೇಶದ ಮಾಜಿ ಪ್ರಧಾನಿ ಮೌಸಾ ಫಕಿ ಮಹಾಮತ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆಫ್ರಿಕಾ ಒಕ್ಕೂಟ ಜಿ20ಯಲ್ಲಿ ಸ್ಥಾನ ಪಡೆದಿದ್ದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಹಲವು ವರ್ಷದಿಂದ ಆಫ್ರಿಕಾ ಒಕ್ಕೂಟದ ನಾಯಕರು ಈ ಸ್ಥಾನಮಾನಕ್ಕೆ ಪ್ರಯತ್ನಿಸಿದ್ದ ವಿಚಾರವನ್ನೂ ಮೌಸಾ ಫಕಿ ಮಹಾಮತ್ ಪ್ರಸ್ತಾಪ ಮಾಡಿದ್ದಾರೆ.

African union is happy now after getting the permanent membership of G20 Family

ಒಟ್ನಲ್ಲಿ ಜಗತ್ತಿನ ಎಲ್ಲಾ ದೇಶಗಳಿಗೂ ಸಮಾನ ಪ್ರಾತಿನಿಧ್ಯ ಸಿಗಬೇಕು ಅನ್ನುವ ಭಾರತದ ಆಗ್ರಹಕ್ಕೆ ಮನ್ನಣೆ ಸಿಕ್ಕಂತಾಗಿದೆ. ಅದರಲ್ಲೂ ಆಫ್ರಿಕಾ ದೇಶಗಳು ಸಾಕಷ್ಟು ಸಮಸ್ಯೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿವೆ. ನೈಸರ್ಗಿಕವಾಗಿ ಸಾಕಷ್ಟು ಸಂಪತ್ತು ಹೊಂದಿರುವ ಬಡ ಖಂಡ ಆಫ್ರಿಕಾಗೆ ಅಭಿವೃದ್ಧಿ ಮರೀಚಿಕೆ ಆಗಿದೆ. ಅದರಲ್ಲೂ ಆಫ್ರಿಕಾದ ದೇಶಗಳನ್ನ ಬರೀ ಬಳಸಿಕೊಂಡು ಬಿಸಾಡುತ್ತಿದ್ದಾರೆ ಎಂಬ ಆರೋಪ ಕೂಡ ಪದೇ ಪದೆ ಕೇಳಿಬರುತ್ತಿತ್ತು.

ಈ ಎಲ್ಲಾ ಆರೋಪದ ನಡುವೆ ಭಾರತ ದಿಟ್ಟ ಹೆಜ್ಜೆ ಇಟ್ಟು ಆಫ್ರಿಕಾ ಒಕ್ಕೂಟಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಜಿ20 ಒಕ್ಕೂಟದಲ್ಲಿ ಸ್ಥಾನ ಪಡೆಯುವ ಮೂಲಕ ಭವಿಷ್ಯಕ್ಕೆ ಹೊಸ ಭರವಸೆ ತುಂಬಿಕೊಂಡಿದೆ ಆಫ್ರಿಕಾ ಒಕ್ಕೂಟ. ಈಗಾಗಲೇ ಹಲವು ದೇಶಗಳು ಬಡ ಆಫ್ರಿಕಾ ದೇಶಗಳನ್ನು ಉದ್ಧಾರ ಮಾಡುವ ಭರವಸೆ ನೀಡಿದ್ದವು. ಆದರೆ ಆ ಭರವಸೆಯು ಕೇವಲ ಭರವಸೆಯಾಗಿ ಉಳಿದಿದೆ. ಇದೀಗ ಭಾರತದ ಜೊತೆ ಸೇರಿ ಹೊಸ ಹುಮ್ಮಸ್ಸಿನಲ್ಲಿ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕಲು ಆಫ್ರಿಕಾ ದೇಶಗಳ ಒಕ್ಕೂಟ ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+