ಭಾರತದಿಂದ ಆಮದು, ರಫ್ತು ನಿಲ್ಲಿಸಿದ ತಾಲಿಬಾನ್

ನವದೆಹಲಿ, ಆಗಸ್ಟ್‌ 19: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಂತೆ ಅಫ್ಘಾನಿಸ್ತಾನ-ಭಾರತದ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಕೂಡ ಸ್ಥಗಿತಗೊಂಡಿದೆ. ಭಾರತದೊಂದಿಗೆ ಆಮದು ಹಾಗೂ ರಫ್ತು ವ್ಯವಹಾರವನ್ನು ತಾಲಿಬಾನ್ ಸ್ಥಗಿತಗೊಳಿಸಿದೆ.

ಪ್ರಸ್ತುತ ತಾಲಿಬಾನ್, ಭಾರತದಿಂದ ಪಾಕಿಸ್ತಾನದ ಮಾರ್ಗದಲ್ಲಿ ನಡೆಯುತ್ತಿದ್ದ ಸರಕು ಸಾಗಣೆಗೆ ತಡೆಒಡ್ಡಿದೆ. ಈ ಮೂಲಕ ದೇಶದಿಂದ ಆಮದನ್ನು ನಿಲ್ಲಿಸಿದೆ ಎಂದು ಭಾರತೀಯ ರಫ್ತು ಸಂಸ್ಥೆ (FIEO) ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ತಿಳಿಸಿದ್ದಾರೆ.

'ನಾವು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆಮದು ಸರಕು ಸಾಮಗ್ರಿಗಳು ಪಾಕಿಸ್ತಾನದ ಮೂಲಕ ಸಾಗಬೇಕು. ಆದರೆ ಇಲ್ಲಿಯವರೆಗೂ ತಾಲಿಬಾನ್ ಆಮದು ಸಾಮಗ್ರಿಗಳ ಕಾರ್ಗೋ ಚಲನೆಗೆ ಅವಕಾಶ ಮಾಡಿಕೊಟ್ಟಿಲ್ಲ" ಎಂದು ಹೇಳಿದ್ದಾರೆ.

Recommended Video

      ಕಾಬೂಲ್ ನಲ್ಲಿ ಹಿಂದು ಅರ್ಚಕರ ದೇವಾಲಯ ಪ್ರೇಮ! | Oneindia Kannada
      Afghanistan Crisis: Taliban Stops Export And Import From India

      ಭಾರತ ಅಫ್ಘಾನಿಸ್ತಾನದೊಂದಿಗೆ, ಅದರಲ್ಲೂ ವಿಶೇಷವಾಗಿ ವ್ಯಾಪಾರ ವಹಿವಾಟಿನಲ್ಲಿ ದೀರ್ಘಕಾಲದ ಸಂಬಂಧ ಹೊಂದಿದೆ. ಅಫ್ಘಾನಿಸ್ತಾನದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನೂ ಮಾಡಿದೆ. ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆಯೇ ಎಂಬ ಆತಂಕ ಕೇಂದ್ರವನ್ನು ಕಾಡುತ್ತಿದೆ.

      'ವಾಸ್ತವದಲ್ಲಿ ನಾವು ಅಫ್ಘಾನಿಸ್ತಾನದ ಅತಿ ದೊಡ್ಡ ಪಾಲುದಾರರಾಗಿದ್ದೇವೆ. 2021ರಲ್ಲಿ ಅಫ್ಘಾನಿಸ್ತಾನಕ್ಕೆ ಸುಮಾರು 835 ಮಿಲಿಯನ್ ಡಾಲರ್‌ನಷ್ಟು ನಮ್ಮ ರಫ್ತನ್ನು ಅಂದಾಜಿಸಲಾಗಿದೆ. 510 ಮಿಲಿಯನ್ ಡಾಲರ್‌ ಮೌಲ್ಯದ ಸರಕನ್ನು ಆಮದು ಮಾಡಿಕೊಂಡಿದ್ದೇವೆ. ಆದರೆ ಈ ವ್ಯಾಪಾರ ವಹಿವಾಟಿನ ಹೊರತಾಗಿಯೂ ಅಫ್ಘಾನಿಸ್ತಾನದಲ್ಲಿ ಬೃಹತ್ ಹೂಡಿಕೆ ಮಾಡಿದ್ದೇವೆ. ಸುಮಾರು ಮೂರು ಶತಕೋಟಿಗೂ ಅಧಿಕ ಡಾಲರ್ ಹೂಡಿಕೆ ಮಾಡಲಾಗಿದೆ. ಸುಮಾರು 400ರಷ್ಟು ಯೋಜನೆಗಳಿದ್ದು, ಪ್ರಸ್ತುತ ಕೆಲವು ಯೋಜನೆಗಳು ನಡೆಯುತ್ತಿವೆ' ಎಂದು ವಿವರಿಸಿದರು.

      ಕೆಲವು ಸರಕುಗಳನ್ನು ಅಂತರರಾಷ್ಟ್ರೀಯ ಉತ್ತರ- ದಕ್ಷಿಣ ಸಾರಿಗೆ ಕಾರಿಡಾರ್ ಮಾರ್ಗದಿಂದ ರಫ್ತು ಮಾಡಲಾಗಿದೆ. ಆ ಮಾರ್ಗ ಉತ್ತಮವಾಗಿದೆ. ಕೆಲವು ಸರಕುಗಳು ದುಬೈ ಮಾರ್ಗದ ಮೂಲಕವೂ ಕಾರ್ಯನಿರ್ವಹಿಸುತ್ತಿವೆ ಎಂದರು.

      'ವ್ಯಾಪಾರ ವಹಿವಾಟಿನಲ್ಲಿ ಭಾರತ ಅಫ್ಘಾನಿಸ್ತಾನದೊಂದಿಗೆ ಆರೋಗ್ಯಕರ ಸಂಬಂಧ ಹೊಂದಿದೆ. ಪ್ರಸ್ತುತ ಸಕ್ಕರೆ, ಔಷಧ, ಉಡುಪು, ಟೀ, ಕಾಫಿ, ಸಾಂಬಾರು ಪದಾರ್ಥಗಳು ಹಾಗೂ ಟ್ರಾಮ್ಸಿಷನ್ ಟವರ್‌ಗಳನ್ನು ಅಲ್ಲಿಗೆ ಭಾರತ ರಫ್ತು ಮಡುತ್ತಿತ್ತು. ಡ್ರೈಫ್ರೂಟ್‌ಗಳನ್ನು ಅಲ್ಲಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಗೋಂದು ಹಾಗೂ ಈರುಳ್ಳಿಯನ್ನು ಕೂಡ ಆಮದು ಮಾಡಿಕೊಳ್ಳುತ್ತಿದ್ದೆವು' ಎಂದು ತಿಳಿಸಿದರು.

      ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ಹೊರತಾಗಿಯೂ ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ ವಹಿವಾಟಿನ ಸಂಬಂಧದ ಬಗ್ಗೆ ಅಜಯ್ ಸಹಾಯ್ ಭರವಸೆ ವ್ಯಕ್ತಪಡಿಸಿದ್ದಾರೆ.

      Afghanistan Crisis: Taliban Stops Export And Import From India

      'ಆರ್ಥಿಕ ಅಭಿವೃದ್ಧಿಯೊಂದೇ ಮುನ್ನಡೆ ಸಾಧಿಸಲು ಏಕೈಕ ಮಾರ್ಗ ಎಂಬುದು ಕೆಲವು ಕಾಲದ ನಂತರ ಅಫ್ಘಾನಿಸ್ತಾನದಲ್ಲಿ ಅರಿವಾಗಬಹುದು. ವ್ಯಾಪಾರ ವಹಿವಾಟನ್ನು ಮುಂದುವರೆಸಬಹುದು. ಹೊಸ ಆಡಳಿತ ರಾಜಕೀಯ ನ್ಯಾಯಸಮ್ಮತಿ ಪಾಲಿಸಲು ಬಯಸುತ್ತದೆ ಎಂದು ಭಾವಿಸುತ್ತೇನೆ ಹಾಗೂ ಅದರಲ್ಲಿ ಭಾರತದ ಪಾತ್ರ ಪ್ರಮುಖವಾಗಿರುತ್ತದೆ' ಎಂದು ಹೇಳಿದರು.

      ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಡ್ರೈಫ್ರೂಟ್ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಳವಾಗಬಹುದು ಎಂದು ಫೆಡರೇಷನ್ ಆಫ್ ಇಂಡಿಯಾ ರಫ್ತು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಭಾರತವು ಸುಮಾರು 85%ರಷ್ಟು ಡ್ರೈಫ್ರೂಟ್‌ಗಳನ್ನು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿತ್ತು.

      'ಈ ಬಿಕ್ಕಟ್ಟು ನೇರವಾಗಿ ಬೆಲೆ ಮೇಲೆ ಪರಿಣಾಮ ಬೀರಲಾರದು ಅನಿಸುತ್ತದೆ. ಆದರೆ ಆಮದು ಮೂಲಗಳು ಅಸ್ತಿತ್ವದಲ್ಲಿಲ್ಲ ಎಂದರೆ ಬೆಲೆ ಏರಿಕೆ ಊಹೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

      20 ವರ್ಷಗಳ ನಂತರ ಅಫ್ಘಾನ್‌ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ.
      ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಇದೀಗ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+