ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷಗಳು: ಎಷ್ಟನೇ ಸ್ಥಾನದಲ್ಲಿ ಜೆಡಿಎಸ್?

|
Google Oneindia Kannada News

ಅಸೆಂಬ್ಲಿ ಮತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಿರುವ ಉದಾಹರಣೆಗಳು ಭಾರತದಲ್ಲಿ ಬೇಕಾದಷ್ಟಿವೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡಾಗ, ಹದಿಮೂರು ಪಕ್ಷಗಳ ಜೊತೆ ಸೇರಿ (ಎನ್ಡಿಎ ಮೈತ್ರಿಕೂಟ) ದೇಶವನ್ನು ಮುನ್ನಡೆಸಿದ್ದರು.

ಪ್ರಮುಖವಾಗಿ ದಕ್ಷಿಣಭಾರತದಲ್ಲಿ (ಕೇರಳ ಹೊರತುಪಡಿಸಿ) ಡಿಎಂಕೆ, ಎಐಎಡಿಎಂಕೆ, ಟಿಡಿಪಿ, ಟಿಆರ್ ಎಸ್, ಜೆಡಿಎಸ್ ಹೀಗೆ ಪ್ರಾದೇಶಿಕ ಪಕ್ಷಗಳು ಅಲ್ಲಲ್ಲಿ ಹಿಡಿತವನ್ನು ಹೊಂದಿವೆ. ಇನ್ನು ಬಿಎಸ್ಪಿ, ಎಸ್ಪಿ, ಎನ್ಸಿಪಿ, ಜೆಡಿಯು, ಬಿಜೆಡಿ, ಟಿಎಂಸಿ ಮುಂತಾದ ಪಕ್ಷಗಳು ಆಯಾಯ ರಾಜ್ಯಗಳಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಿವೆ.

ಮೋದಿ ಧೂಳೀಪಟ ಜೆಡಿಎಸ್ ನಿಂದ ಮಾತ್ರ ಸಾಧ್ಯ: ಕುಮಾರಸ್ವಾಮಿ ವಾಗ್ದಾಳಿಮೋದಿ ಧೂಳೀಪಟ ಜೆಡಿಎಸ್ ನಿಂದ ಮಾತ್ರ ಸಾಧ್ಯ: ಕುಮಾರಸ್ವಾಮಿ ವಾಗ್ದಾಳಿ

ದೆಹಲಿ ಮೂಲದ ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ, ದೇಶದ ವಿವಿಧ 22 ಪ್ರಾದೇಶಿಕ ಪಕ್ಷಗಳ ಆಸ್ತಿಮೊತ್ತವನ್ನು ಬಹಿರಂಗ ಪಡಿಸಿದೆ. ಆಯಾಯ ಪಕ್ಷಗಳು ಸಲ್ಲಿಸಿರುವ ಘೋಷಿತ ವಿವರಗಳನ್ನು ಆಧಾರಿಸಿ ಎಡಿಆರ್ ಈ ಮಾಹಿತಿ ಪ್ರಕಟಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಅಫಿಡವಿಟ್ ಆಧರಿಸಿ ಶ್ರೀಮಂತ ಪ್ರಾದೇಶಿಕ ಪಕ್ಷಗಳ ಪಟ್ಟಿಯನ್ನು ರೆಡಿಮಾಡಿರುವ ಎಡಿಆರ್, ಆರು ವಿಭಾಗಗಳಲ್ಲಿ ಪಕ್ಷಗಳು ಹೊಂದಿರುವ ಆಸ್ತಿಯನ್ನು ವರ್ಗೀಕರಿಸಿ ಪಟ್ಟಿ ಸಿದ್ದಮಾಡಿದೆ.

ವಿಕಾಸಪರ್ವ ಯಶಸ್ಸಿನ ನಂತರ ಜೆಡಿಎಸ್ ಮುಂದಿದೆ ಸವಾಲುಗಳು!ವಿಕಾಸಪರ್ವ ಯಶಸ್ಸಿನ ನಂತರ ಜೆಡಿಎಸ್ ಮುಂದಿದೆ ಸವಾಲುಗಳು!

ಎಡಿಆರ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಹೊಸದಾಗಿ ಸೇರ್ಪಡೆಯಾಗಿದೆ. ಹೂಡಿಕೆ, ಚಿರಾಸ್ಥಿ, ಮುಂಗಡ ಹಣ, ಸಾಲ, ಠೇವಣಿ ಹೀಗೆ ಆರು ವರ್ಗದಲ್ಲಿ ಅಸ್ತಿಯ ಮೊತ್ತವನ್ನು ಪ್ರಕಟಿಸಲಾಗಿದೆ. ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ ಜೆಡಿಎಸ್ ಎಷ್ಟನೇ ಸ್ಥಾನದಲ್ಲಿದೆ? ಮುಂದೆ ಓದಿ..

ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಮೊದಲ ಸ್ಥಾನದಲ್ಲಿ

ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಮೊದಲ ಸ್ಥಾನದಲ್ಲಿ

2011-12 ರಿಂದ 2015-16ರ ಅವಧಿಯಲ್ಲಿ ಸಮಾಜವಾದಿ ಪಕ್ಷದ ಆಸ್ತಿ ಬಹುತೇಕ ಮೂರು ಪಟ್ಟು ಜಾಸ್ತಿಯಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಅಫಿಡವಿಟ್ ಪ್ರಕಾರ, ಎಸ್ಪಿ ಪಕ್ಷದ ಒಟ್ಟಾರೆ ಆಸ್ತಿ 634.96 ಕೋಟಿ ರೂಪಾಯಿ. 2011-12ರ ಸಾಲಿನಲ್ಲಿ ಸಮಾಜವಾದಿ ಪಕ್ಷದ ಆಸ್ತಿ 212.86 ಕೋಟಿ ರೂಪಾಯಿ ಇತ್ತು.

ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ

ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ

ತಮಿಳುನಾಡು ಅಸೆಂಬ್ಲಿಯ ವಿರೋಧ ಪಕ್ಷವಾಗಿರುವ ಡಿಎಂಕೆ ಎರಡನೇ ಸ್ಥಾನದಲ್ಲಿದೆ. ತನ್ನ ಒಟ್ಟು ಆಸ್ತಿಮೌಲ್ಯ 257.18 ಕೋಟಿ ರೂಪಾಯಿ ಎಂದು ಡಿಎಂಕೆ ಅಫಿಡವಿಟ್ ಸಲ್ಲಿಸಿದೆ. ಮೂರನೇ ಸ್ಥಾನದಲ್ಲಿ, ರಾಜ್ಯದಲ್ಲಿ ಸತತವಾಗಿ ಎರಡನೇ ಬಾರಿ ಅಧಿಕಾರದಲ್ಲಿರುವ ಎಐಎಡಿಎಂಕೆ ಪಕ್ಷವಿದೆ. 2011-12 ರಿಂದ 2015-16ರ ಅವಧಿಯಲ್ಲಿ ಪಕ್ಷದ (ಎಐಎಡಿಎಂಕೆ) ಆಸ್ತಿಮೊತ್ತ ಶೇ. 155 ಹೆಚ್ಚಾಗಿರುವುದು ಗಮನಿಸಬೇಕಾದ ಅಂಶ. 88.21 ಕೋಟೀ ರೂಪಾಯಿಯಿಂದ 224.87 ಕೋಟಿ ರೂಪಾಯಿಗೆ ಪಕ್ಷದ ಆಸ್ತಿಮೊತ್ತ (ಎಐಎಡಿಎಂಕೆ) ವೃದ್ದಿಯಾಗಿದೆ.

ಟಿಡಿಪಿ ಮತ್ತು ಶಿವಸೇನೆ ನಂತರದ ಶ್ರೀಮಂತ ಪಕ್ಷಗಳು

ಟಿಡಿಪಿ ಮತ್ತು ಶಿವಸೇನೆ ನಂತರದ ಶ್ರೀಮಂತ ಪಕ್ಷಗಳು

ಎಡಿಆರ್ ಮಾಹಿತಿ ಪ್ರಕಾರ ನಾಲ್ಕನೇ ಸ್ಥಾನದಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಮತ್ತು ಶಿವಸೇನೆ ಐದನೇ ಸ್ಥಾನದಲ್ಲಿದೆ. ಟಿಡಿಪಿ ಆಸ್ತಿ 14.6 ಕೋಟಿ ರೂಪಾಯಿಯಿಂದ 65.82 ಕೋಟಿ ರೂಪಾಯಿಗೆ ಹೆಚ್ಚಾದರೆ, ಶಿವಸೇನೆಯ ಆಸ್ತಿ 20.59 ಕೋಟಿ ರೂಪಾಯಿಯಿಂದ 39.58 ಕೋಟಿ ರೂಪಾಯಿಗೆ ಹೆಚ್ಚಾಗಿದೆ.

ಒಟ್ಟು 22 ಪ್ರಾದೇಶಿಕ ಪಕ್ಷಗಳ ಪಟ್ಟಿ

ಒಟ್ಟು 22 ಪ್ರಾದೇಶಿಕ ಪಕ್ಷಗಳ ಪಟ್ಟಿ

ಒಟ್ಟು 22 ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ ಟಿಎಂಸಿ, ಎನ್ಸಿಪಿ ಪಕ್ಷಗಳ ಹೆಸರಿಲ್ಲ. ಆರನೇ ಸ್ಥಾನದಿಂದ ರಾಷ್ಟ್ರೀಯ ಲೋಕದಳ, ನಿತೀಶ್ ಕುಮಾರ್ ಅವರ ಜೆಡಿಯು, ಕೆಸಿಆರ್ ಅವರ ಟಿಆರ್ಎಸ್, ಸಿಕ್ಕಿಂ ಡೆಮೊಕ್ರಾಟಿಕ್, ಡಿಎಂಡಿಕೆ, ಆಮ್ ಆದ್ಮಿ ಪಕ್ಷ, ಶಿರೋಮಣಿ ಅಕಾಲಿದಳ, ಫಾರ್ವರ್ಡ್ ಬ್ಲಾಕ್, ರಾಜ್ ಠಾಕ್ರೆಯವರ ಎಂಎನ್ಎಸ್, ಜೆಎಂಎಂ, ವೈಎಸ್ ಆರ್ ಕಾಂಗ್ರೆಸ್, ಎಲ್ಜೆಪಿ, ಬೋಡೋ ಪೀಪಲ್ ಫ್ರಂಟ್ ಪಕ್ಷಗಳು ಕ್ರಮವಾಗಿ ನಂತರದ ಸ್ಥಾನವನ್ನು ಪಡೆದಿವೆ.

ಜೆಡಿಎಸ್ ಪಕ್ಷಕ್ಕೆ ಶ್ರೀಮಂತ ಪ್ರಾದೇಶಿಕ ಪಕ್ಷಗಳ ಪೈಕಿ ಎಷ್ಟನೇ ಸ್ಥಾನ

ಜೆಡಿಎಸ್ ಪಕ್ಷಕ್ಕೆ ಶ್ರೀಮಂತ ಪ್ರಾದೇಶಿಕ ಪಕ್ಷಗಳ ಪೈಕಿ ಎಷ್ಟನೇ ಸ್ಥಾನ

ದೇಶದ ಶ್ರೀಮಂತ ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ ಜಾತ್ಯಾತೀತ ಜನತಾದಳ 19ನೇ ಸ್ಥಾನದಲ್ಲಿದೆ. 2011-12ರಿಂದ 2015-16ರ ಅವಧಿಯಲ್ಲಿ ಜೆಡಿಎಸ್ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಪಕ್ಷದ ಆಸ್ತಿ ಕ್ರಮವಾಗಿ 0.27, 0.64, 0.34, 0.18, 1.6 ಕೋಟಿ ರೂಪಾಯಿ. ಜೆಡಿಎಸ್ ನಂತರ ಜೆವಿಎಂ, ಅಸ್ಸಾಂ ಗಣಪರಿಷತ್, ಜೆ&ಕೆ ಪಿಡಿಪಿ ಪಕ್ಷಗಳಿವೆ. ( ಎಡಿಆರ್ ಪ್ರಕಟಿಸಿರುವ ವಿಸ್ಕೃತ ವರದಿಗೆ ಇಲ್ಲಿ ಕ್ಲಿಕ್ಕಿಸಿ)

English summary
Delhi based think tank, Association of Democratic Reforms (ADR), released the richest 22 regional political parties of India. Akhilesh Yadav’s Samajwadi Party is top in the table. J&K PDP bottom in the list, in this JDS also listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X