Adani Power: ಅದಾನಿ ಪವರ್ ಲಾಭದಲ್ಲಿ ಭಾರಿ ಜಿಗಿತ

Adani Power: ಅದಾನಿ ಗ್ರೂಪ್‌ನ ಪ್ರಮುಖ ವಿದ್ಯುತ್ ಉತ್ಪಾದನಾ ಕಂಪನಿಯಾದ ಅದಾನಿ ಪವರ್ ಲಿಮಿಟೆಡ್ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್ - ಜೂನ್) ಅತ್ಯುತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಬುಧವಾರ (ಜುಲೈ 22) ಪ್ರಕಟಗೊಂಡ ವರದಿಯ ಪ್ರಕಾರ, ಕಂಪನಿಯ ಒಟ್ಟು ನಿವ್ವಳ ಲಾಭ ಶೇಕಡಾ 47.2ರಷ್ಟು ಹೆಚ್ಚಾಗಿದ್ದು, 4,866.60 ಕೋಟಿ ರೂಪಾಯಿಗೆ ತಲುಪಿದೆ.

ದೇಶಾದ್ಯಂತ ವಿದ್ಯುತ್‌ಗೆ ಹೆಚ್ಚುತ್ತಿರುವ ಬೇಡಿಕೆ, ಸ್ಥಾವರಗಳ ಕಾರ್ಯಕ್ಷಮತೆ ವೃದ್ಧಿ ಹಾಗೂ ಕಂಟಿನ್ಯೂಯಿಂಗ್ ಆಪರೇಷನ್‌ಗಳ ಬಲವರ್ಧನೆ ಈ ಭಾರಿ ಲಾಭಕ್ಕೆ ಮುಖ್ಯ ಕಾರಣವಾಗಿದೆ. ಕಂಪನಿಯ ಕಾರ್ಯಾಚರಣೆಯ ಒಟ್ಟು ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಮನಾರ್ಹವಾಗಿ ಏರಿಕೆಯಾಗಿದೆ. ಬೇಸಿಗೆಯ ಅವಧಿಯಲ್ಲಿ ದೇಶಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದರಿಂದ, ಅದಾನಿ ಪವರ್‌ನ ವಿವಿಧ ಸ್ಥಾವರಗಳಿಂದ ವಿದ್ಯುತ್ ಸರಬರಾಜು ಮತ್ತು ಉತ್ಪಾದನೆ ಹೆಚ್ಚಾಗಿದೆ.

Adani Power Q1 Results Net Profit Jumps 47 2 to Rs 4 866 6 Crore in Q1 FY27 Know details

ಸುಧಾರಿತ ನಿರ್ವಹಣಾ ವೆಚ್ಚ ನಿಯಂತ್ರಣ ಮತ್ತು ಪರಿಣಾಮಕಾರಿ ಇಂಧನ ನಿರ್ವಹಣೆಯಿಂದಾಗಿ ಕಂಪನಿಯ ಇಬಿಟ್ಡಾ (EBITDA) ಶೇಕಡಾವಾರು ಆಧಾರದಲ್ಲಿ ಉತ್ತಮ ಪ್ರಗತಿ ಕಂಡಿದೆ. ಅದಾನಿ ಪವರ್ ತನ್ನ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 45 ಗಿಗಾವ್ಯಾಟ್‌ಗೆ ಏರಿಸುವ ಬೃಹತ್ ಯೋಜನೆಯತ್ತ ವೇಗವಾಗಿ ಹೆಜ್ಜೆ ಇಡುತ್ತಿದೆ.

ಮುಂಬರುವ ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಮತ್ತು ಸುಧಾರಿತ ತಂತ್ರಜ್ಞಾನದ ವಿದ್ಯುತ್ ಸ್ಥಾವರಗಳ ವಿಸ್ತರಣೆ, ಹೊಸ ಸ್ಥಾವರಗಳ ಸ್ಥಾಪನೆ ಹಾಗೂ ಸ್ವಾಧೀನ ಪ್ರಕ್ರಿಯೆಗಳ ಮೂಲಕ ಈ 45 GW ಗುರಿಯನ್ನು ತಲುಪಲು ಕಂಪನಿ ನಿರ್ಧರಿಸಿದೆ. ಅದಾನಿ ಪವರ್ ಆಡಳಿತ ಮಂಡಳಿಯ ಪ್ರಕಾರ, ಭಾರತದ ಆರ್ಥಿಕ ಪ್ರಗತಿಯಿಂದಾಗಿ ಕೈಗಾರಿಕೆ ಮತ್ತು ಗೃಹ ಬಳಕೆಯ ವಿದ್ಯುತ್ ಬೇಡಿಕೆ ಸತತವಾಗಿ ಏರಿಕೆಯಾಗುತ್ತಿದೆ. ಕಂಪನಿಯು ನಿರಂತರ ಮತ್ತು ನಂಬಿಕಸ್ಥ ವಿದ್ಯುತ್ ಪೂರೈಕೆ ಮಾಡುವ ಮೂಲಕ ದೇಶದ ಇಂಧನ ಭದ್ರತೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲೂ ಇದೇ ರೀತಿಯ ಸುಸ್ಥಿರ ಪ್ರಗತಿಯನ್ನು ಕಾಯ್ದುಕೊಳ್ಳುವ ಭರವಸೆ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+