Narendra Modi: ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ನಟ ಪ್ರಕಾಶ್‌ ರಾಜ್‌!

ನಟ ಪ್ರಕಾಶ್‌ ರಾಜ್‌ ಅವರು ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆದು ಮತ್ತೊಮ್ಮೆ ಸುದ್ದಿಯಲ್ಲಿ ಇದ್ದಾರೆ. ಪ್ರಕಾಶ್‌ ರಾಜ್‌ ಹಾಗೂ ಬಿಜೆಪಿ ನಾಯಕರ ನಡುವೆ ಆಗ್ಗಾಗೆ ವಾಕ್ಸಮರಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಮತ್ತೆ ಅದಾನಿ ಕೇಸ್‌ ವಿಷಯವಾಗಿ ಪ್ರಕಾಶ್‌ ರಾಜ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಪೋಟೋವೊಂದನ್ನು ಹಂಚಿಕೊಂಡು ಕಾಲೆಳೆದಿದ್ದಾರೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಆ ಪೋಸ್ಟ್‌ನಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಭಾರತದ ಬಿಲೆನಿಯರ್ ಹಾಗೂ ವಿಶ್ವದಾದ್ಯಂತ ಕೋಟ್ಯಾಂತರ ರೂಪಾಯಿಯ ಉದ್ಯಮಗಳನ್ನು ಹೊಂದಿರುವ ಗೌತಮ್ ಅದಾನಿಗೆ ಅಮೆರಿಕದಿಂದ ಸಂಕಷ್ಟ ಎದುರಾಗಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಅಮೆರಿಕದ ಕೋರ್ಟ್‌ ಈಗಾಗಲೇ ಅದಾನಿಗೆ ವಾರೆಂಟ್‌ ಜಾರಿ ಮಾಡಿದ್ದು, ಅದಾನಿ ಯಾವುದೇ ಕ್ಷಣದಲ್ಲಾದರೂ ಬಂಧನಕ್ಕೆ ಒಳಪಡುವ ಎಲ್ಲಾ ಸಾಧ್ಯತೆಗಳೂ ಇವೆ. ಆದರೆ, ಈ ನಡುವೆ ದೇಶದಲ್ಲಿ ವಿರೋಧ ಪಕ್ಷಗಳು ಹಾಗೂ ನಾಯಕರಿಂದ ಅದಾನಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹಗಳು ಕೇಳಿ ಬರ್ತಿವೆ. ಅದಾನಿ ಹಾಗೂ ಅದಾನಿ ಗ್ರೂಪ್‌ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಇದಕ್ಕೆ ಅದಾನಿ ಸಮೂಹ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಕೋರ್ಟ್‌ನ ಮೂಲಕವೇ ಉತ್ತರ ನೀಡುವುದಾಗಿ ಹೇಳಿದೆ.

Actor Prakash Raj once again mocks Prime Minister Narendra Modi

ಟ್ವೀಟ್ ಮಾಡಿ ಕಾಲೆಳೆದ ಪ್ರಕಾಶ್‌ರಾಜ್‌

ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್‌ರಾಜ್‌ ಹಾಗೂ ಬಿಜೆಪಿಯ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇವೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಹಾಗೂ ಪ್ರಕಾಶ್‌ ರಾಜ್‌ ಮಧ್ಯೆ ಮಾತಿನ ಚಕಮಕಿ, ಟ್ರೋಲ್‌ಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಪ್ರಕಾಶ್‌ ರಾಜ್‌ ಅವರು, ಮೋದಿ ಹಾಗೂ ಅದಾನಿಗೆ ಸಂಬಂಧಿಸಿದ್ದು ಎನ್ನಲಾಗಿರುವ ಹಳೆಯ ಪೋಟೋವೊಂದನ್ನು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಮೋದಿಯ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಕೆಲಸದಲ್ಲಿ ಸ್ನೇಹಿತರು (Friends in deed) ಎನ್ನುವ ಒಂದೇ ಸಾಲಿನ ಪೋಸ್ಟ್‌ ಮಾಡಿ. ಜಸ್ಟ್‌ ಆಸ್ಕಿಂಗ್ #justasking ಎಂದಿದ್ದಾರೆ.

ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. 19 ಸಾವಿರ ಜನ ಈ ಪೋಸ್ಟ್‌ ಲೈಕ್‌ ಮಾಡಿದ್ದು, 503K ರೀಚ್‌ ಆಗಿದೆ. ರಾಂಟ್ಸ್ ಮತ್ತು ರೋಸ್ಟ್ಸ್ ಎನ್ನುವವರು ಸೋಷಿಯಲ್‌ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ ಅನ್ನು ಪ್ರಕಾಶ್‌ ರಾಜ್‌ ರಿ ಪೋಸ್ಟ್‌ ಮಾಡಿದ್ದಾರೆ.

ಅದಾನಿ ಮೇಲೆ ಕೇಳಿ ಬಂದಿರುವ ಆರೋಪವೇನು

ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಗೌತಮ್‌ ಅದಾನಿ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಈ ಆರೋಪದ ಬೆನ್ನಲ್ಲೇ ಅದಾನಿಯ ಷೇರುಗಳು ಏರಿಳಿತ ಕಂಡಿವೆ. ಷೇರು ಮೌಲ್ಯದಲ್ಲಿನ ಏರಿಳಿತ ಮುಂದುವರಿದಿದೆ. ಸೌರಶಕ್ತಿ ಗುತ್ತಿಗೆಯನ್ನು ಪಡೆದುಕೊಳ್ಳುವುದಕ್ಕೆ ಭಾರತದ ಅಧಿಕಾರಿಗಳಿಗೆ ಕೋಟ್ಯಾಂತರ ರೂಪಾಯಿ ದುಡ್ಡು (ಲಂಚ) ಕೊಟ್ಟಿರುವ ಆರೋಪ ಇದೀಗ ಅದಾನಿಯ ಮೇಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಕೋರ್ಟ್‌ ದೋಷಾರೋಪ (ಚಾರ್ಜ್‌ಶೀಟ್‌) ಸಲ್ಲಿಸಲಾಗಿದೆ. ಈ ಬೆಳವಣಿಗೆ ಅದಾನಿ ಹಾಗೂ ಅದಾನಿ ಸಮೂಹಕ್ಕೆ ಸಂಕಷ್ಟ ಸೃಷ್ಟಿಯಾಗಿದೆ.

ಗೌತಮ್ ಅದಾನಿ ಮೇಲೆ ಅಮೆರಿಕ ಕ್ರಮಕ್ಕೆ ರೋಚಕ ಕಾರಣ

ಇನ್ನು ಗೌತಮ್ ಅದಾನಿಯ ಮೇಲೆ ಅಮೆರಿಕ ಈ ರೀತಿ ಕ್ರಮ ತೆಗೆದುಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಗೌತಮ್ ಅದಾನಿ ಅವರಿಂದ ಅಮೆರಿಕದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆದಿದೆ. ಅಮೆರಿಕದ ಹೂಡಿಕೆದಾರರಿಗೆ ನಷ್ಟವಾಗಿದೆ ಹಾಗೂ ಮೋಸ ಮಾಡಲಾಗಿದೆ ಎನ್ನುವ ಆರೋಪಗಳೇ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+