ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ
ನವದೆಹಲಿ, ಡಿಸೆಂಬರ್ 12: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ "ದುರುದ್ದೇಶಪೂರಿತ ಕಾರಣಗಳಿಂದ ತನ್ನ ವಿರುದ್ಧ ಮಾನಹಾನಿಕರ ಆರೋಪಗಳನ್ನು" ಮಾಡಿದ್ದಾರೆ ಎಂದು ನೋರಾ ಫತೇಹಿ ಆರೋಪಿಸಿದ್ದಾರೆ.
"ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಮುಂದುವರಿಸಲು ಅವರ ವೃತ್ತಿಜೀವನವನ್ನು ನಾಶಮಾಡುವ ಸಲುವಾಗಿ ದೂರುದಾರರನ್ನು ಕ್ರಿಮಿನಲ್ ಆಗಿ ಮಾನಹಾನಿ ಮಾಡಲು ಪ್ರಯತ್ನಿಸಿದರು, ಏಕೆಂದರೆ ಅವರಿಬ್ಬರೂ ಒಂದೇ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತರ ಕಾರಣಗಳ ನಡುವೆ ಒಂದೇ ರೀತಿಯ ಹಿನ್ನೆಲೆ ಹೊಂದಿದ್ದಾರೆ" ಎಂದು ನೋರಾ ಫತೇಹಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಸುಕೇಶ್ ಚಂದ್ರಶೇಖರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿತ್ತು.

ನಟಿ ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ
ನಟಿ ನೋರಾ ಫತೇಹಿ ಅವರು ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಜಾಕ್ವೆಲಿನ್ ಅವರ ಲಿಖಿತ ಮನವಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. "ಇಡಿ ತನ್ನನ್ನು ತಪ್ಪಾಗಿ ಸಿಲುಕಿಸುತ್ತಿದೆ ಮತ್ತು ಸುಕೇಶ್ ಚಂದ್ರಶೇಖರ್ ಅವರಿಂದ ಉಡುಗೊರೆಗಳನ್ನು ಪಡೆದ ನೋರಾ ಫತೇಹಿಯಂತಹ ಸೆಲೆಬ್ರಿಟಿಗಳನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ," ಎಂದು ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಟಿ ನೋರಾ ಫತೇಹಿ ಉಲ್ಲೇಖಿಸಿದ ವಾದವೇನು?
ನಟಿ ನೋರಾ ಫತೇಹಿ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ವಿಷಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಪಾಲ್ ಮೂಲಕ ಸಂಪರ್ಕ ಹೊಂದಿದ್ದೇನೆಯೇ ವಿನಃ ತಮಗೂ ಮತ್ತು ಆರೋಪಿಗೂ ನೇರವಾಗಿ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ. ನಟಿಯು ವಂಚಕರಿಂದ ಯಾವುದೇ ಉಡುಗೊರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ರೀತಿ ಸಂಪರ್ಕವನ್ನು ಹೊಂದಿಲ್ಲದಾಗಿ ಉಲ್ಲೇಖ
"ದೂರುದಾರೆ ನೋರಾ ಫತೇಹಿ ಮತ್ತು ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್ ಇಬ್ಬರೂ ವಿದೇಶಿ ಮೂಲದ ನಟಿಯರಾಗಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಖ್ಯಾತಿ ಗಳಿಸುವಲ್ಲಿ ಇಬ್ಬರೂ ತಮ್ಮ ಹೋರಾಟಗಳನ್ನು ಹೊಂದಿದ್ದಾರೆ ಎಂದು ಇಲ್ಲಿ ಉಲ್ಲೇಖಿಸಲಾಗಿದೆ. ಈ ಕೃತ್ಯದಲ್ಲಿ ದೂರುದಾರರ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ. ಇದು ದುರಾಚಾರದ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಯ ವಿರುದ್ಧ ದೂರುದಾರರು ದೂಷಿಸಿದ್ದಾರೆ. ಅಲ್ಲದೇ ಈ ಕೃತ್ಯದಲ್ಲಿ ತಾವು ಯಾವುದೇ ರೀತಿಯ ಪಾತ್ರವನ್ನು ವಹಿಸಿಲ್ಲ ಎಂಬುದಾಗಿ ಉಲ್ಲೇಖಿಸಿದ್ದಾರೆ.

ಮಾನನಷ್ಟ ಮೊಕದ್ದಮೆಯಲ್ಲಿ ಮಾಧ್ಯಮಗಳ ಹೆಸರು ಉಲ್ಲೇಖ
ಜಾಕ್ವೆಲಿನ್ ಫರ್ನಾಂಡಿಸ್ ಅವರಲ್ಲದೆ ನೋರಾ ಫತೇಹಿ ಅವರು ತಮ್ಮ ಮಾನನಷ್ಟ ಅರ್ಜಿಯಲ್ಲಿ ಹಲವಾರು ಮಾಧ್ಯಮ ಸಂಸ್ಥೆಗಳ ಹೆಸರನ್ನು ಉಲ್ಲೇಖಿದ್ದಾರೆ. "ಹಲವು ಮಾಧ್ಯಮ ಸಂಸ್ಥೆಗಳು ತಮ್ಮನ್ನು ಸಾಮೂಹಿಕವಾಗಿ ದೂಷಿಸುವ ಕೆಲವನ್ನು ಮಾಡಿವೆ, ಇದು ಹತ್ಯೆಗೆ ಸಮನಾದ ಕೃತ್ಯವಾಗಿರುತ್ತದೆ," ಎಂದು ನೋರಾ ಫತೇಹಿ ಆರೋಪಿಸಿದರು.












Click it and Unblock the Notifications