ಮೋದಿ ಅಣತಿಯಂತೆ ಕೊನೆಗೂ ಬಿಜೆಪಿ ಸೇರಿದ ಸ್ಟಾರ್ ನಟ

Posted By:
Subscribe to Oneindia Kannada

ತಿರುವನಂತಪುರಂ, ಅಕ್ಟೋಬರ್ 19: ಮೋದಿ ಅವರ ಭರವಸೆಯಂತೆ ಬಿಜೆಪಿ ಪರ ಪ್ರಚಾರ ಮಾಡಿದ್ದ ಬಹುಭಾಷಾ ನಟ ಸುರೇಶ್ ಗೋಪಿನಾಥನ್ ಅವರು ಬುಧವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ಏಪ್ರಿಲ್​ ನಲ್ಲಿ ಮೋದಿ ಸರ್ಕಾರದ ಕೃಪೆಯಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು.

ಲೋಕಸಭಾ ಚುನಾವಣೆ 2014ರ ಸಂದರ್ಭದಲ್ಲಿ ಗೋಪಿ ಅವರಿಗೆ ಉತ್ತಮ ಸ್ಥಾನ ನೀಡುವ ಭರವಸೆಯನ್ನು ಮೋದಿ ಅವರು ನೀಡಿದ್ದರು. ಅದರಂತೆ ಮಲೆಯಾಳಂ ನಟ, ಗಾಯಕ, ನಿರೂಪಕ, 'ಐ' ಚಿತ್ರದ ಮುಖ್ಯ ವಿಲನ್ ಸುರೇಶ್ ಗೋಪಿ ಅವರನ್ನು ರಾಜ್ಯಸಭೆಗೆ ಶಿಫಾರಸು ಮಾಡಲಾಯಿತು. [ಗೋಪಿಗೆ ಕೊಟ್ಟ ಮಾತು ಉಳಿಸಿಕೊಂಡ ಮೋದಿ!]

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೂ, 1998ರಲ್ಲಿ ನ್ಯೂಡೆಲ್ಲಿ ಕನ್ನಡ ಚಿತ್ರದಲ್ಲಿ ನಟಿಸಿದ್ದ ಗೋಪಿ ಅವರು ಬಿಜೆಪಿ ಆಫರ್ ತಿರಸ್ಕರಿಸಿದ್ದರು. ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ, ನ್ಯಾಷನಲ್ ಫಿಲಂ ಡೆವಲ್ಪ್ ಮೆಂಟ್ ಕಾರ್ಪೊರೇಷನ್ (ಎನ್ಎಫ್ ಡಿಸಿ) ಚೇರ್ಮನ್ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಗೋಪಿಗೆ ರಾಜ್ಯಸಭೆ ಸ್ಥಾನ ಒಲಿದು ಬಂದಿತ್ತು.

ಕೇರಳ ಪ್ರಭಾವ ಹೊಂದಿರುವ ಸುರೇಶ್ ಗೋಪಿ

ಕೇರಳ ಪ್ರಭಾವ ಹೊಂದಿರುವ ಸುರೇಶ್ ಗೋಪಿ

ಮಲೆಯಾಳಂ ಚಿತ್ರರಂಗದ ಟಾಪ್ ನಟರಾದ ಮಮ್ಮೂಟಿ, ಮೋಹನ್ ಲಾಲ್, ದಿಲೀಪ್ ಸಮಾನಾಂತರವಾಗಿ ಸುರೇಶ್ ಗೋಪಿ ಕೇರಳದಲ್ಲಿ ಪ್ರಭಾವ ಹೊಂದಿದ್ದಾರೆ. ನಾಯರ್ ಕುಟುಂಬದ ಗೋಪಿ ಅವರು ಈ ಹಿಂದೆ ಬಿಜೆಪಿ ಸೇರಿಸಿಕೊಳ್ಳುವ ಯತ್ನ ಯಾಕೋ ಸಫಲವಾಗಿರಲಿಲ್ಲ. ಆದರೆ, ಮೋದಿ ಅವರನ್ನು ಭೇಟಿ ಮಾಡಿದ ಮೇಲೆ ಅವರ ತಾರಾ ಮೌಲ್ಯ ಹೆಚ್ಚಿದೆ. 'ಕೋಟ್ಯಧಿಪತಿ' ಕಾರ್ಯಕ್ರಮದ ಮಲೆಯಾಳಂ ಆವೃತ್ತಿಯ ನಿರೂಪಕರಾಗಿ ಮನೆ ಮಾತಾಗಿದ್ದಾರೆ ಕೂಡಾ. ಕನ್ನಡಿಗರಿಗೆ ನ್ಯೂಡೆಲ್ಲಿ ಚಿತ್ರದ ಮೂಲಕ ಪರಿಚಯ.

ಮೋದಿ ಅವರಿಂದ ಮೆಚ್ಚುಗೆ ಪಡೆದ ನಟ ಗೋಪಿ

ಮೋದಿ ಅವರಿಂದ ಮೆಚ್ಚುಗೆ ಪಡೆದ ನಟ ಗೋಪಿ

ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದರು. ಮೊದಲ ಭೇಟಿ ನಂತರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಗೋಪಿ ಹಾಜರಿದ್ದರು. ಹೀಗಾಗಿ ಬಿಜೆಪಿ ಪರ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೇರಳ ಬಿಜೆಪಿಗೆ ಹೊಸ ಇತಿಹಾಸ ಕನಸು

ಕೇರಳ ಬಿಜೆಪಿಗೆ ಹೊಸ ಇತಿಹಾಸ ಕನಸು

ಚಲನಚಿತ್ರಗಳ ಜನಪ್ರಿಯತೆ, ಮೋದಿ ಬೆಂಬಲದ ನಂತರ ಕೇರಳ ಬಿಜೆಪಿ ಅಸೆಂಬ್ಲಿಯಲ್ಲಿ ಖಾತೆ ತೆರೆಯುವ ಕನಸು ಕಾಣುತ್ತಿದೆ. ಈ ಹಿಂದೆ ವಿ.ಎಚ್ ಅಚ್ಯುತಾನಂದನ್ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪರ ನಿರತರಾಗಿದ್ದು ಬಿಟ್ಟರೆ ಮೋದಿ ಅವರನ್ನು ಮಾತ್ರ ಗೋಪಿ ಮೆಚ್ಚಿಕೊಂಡಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ನೋಡಿಕೊಂಡು ಬೆಂಬಲಿಸುತ್ತಾ ಬಂದಿರುವ ಗೋಪಿ ಅವರು ಬಿಜೆಪಿ ಸೇರಿದಂತೆ ಕೇರಳ ರಾಜಕೀಯದಲ್ಲಿ ಹೊಸ ಇತಿಹಾಸ ನಿರ್ಮಿಸುವ ನಿರೀಕ್ಷೆ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor and MP Suresh Gopi (56) who was BJP’s star campaigner in last assembly election has officially joined BJP today(October 19). He was nominated by the Centre as a Rajya Sabha member.
Please Wait while comments are loading...