Kangana Ranaut: ಸುಮಾರು 2 ವರ್ಷಗಳ ನಂತರ ಟ್ವಿಟರ್‌ಗೆ ಕಂಗನಾ ರಣಾವತ್, ಮೊದಲ ಟ್ವೀಟ್ ಹೀಗಿದೆ
ಸುಮಾರು 2 ವರ್ಷಗಳ ನಂತರ ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟರ್‌ಗೆ ಮರಳಿದ್ದಾರೆ. ಅವರ ಮೊದಲ ಟ್ವೀಟ್ ಏನು ಎಂಬುದು ನೀವೇ ನೋಡಿ.
ನವದೆಹಲಿ, ಜನವರಿ. 24: ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುಮಾರು ಎರಡು ವರ್ಷಗಳ ಬಳಿಕ ಟ್ವಿಟರ್‌ಗೆ ಮತ್ತೆ ವಾಪಸ್ ಆಗಿದ್ದಾರೆ.
ಮೇ 2021 ರಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್ ಅವರ ಖಾತೆಯನ್ನು ಅಮಾನತುಗೊಳಿಸಿತ್ತು. ಮಂಗಳವಾರ ಮತ್ತೆ ಕಂಗನಾ ರಣಾವತ್ ಟ್ವಿಟರ್‌ಗೆ ಮರಳಿದ್ದಾರೆ. ಅವರು ಇತ್ತೀಚೆಗಷ್ಟೇ ತಮ್ಮ ಮುಂದಿನ ಚಿತ್ರವಾದ ಎಮರ್ಜೆನ್ಸಿಯ ಚಿತ್ರೀಕರಣವನ್ನು ಮುಗಿಸಿದ್ದಾರೆ.
ತಾನು ಟ್ವಿಟರ್‌ಗೆ ಮರಳಿರುವ ಸುದ್ದಿಯನ್ನು ಅವರ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಎಲ್ಲರಿಗೂ ನಮಸ್ಕಾರ, ಇಲ್ಲಿಗೆ ಹಿಂತಿರುಗಲು ಸಂತೋಷವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಕಂಗನಾ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಕೆಲವು ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕ ಟ್ವಿಟರ್ ಬಳಕೆದಾರರು ಆಕೆಯನ್ನು ಸ್ವಾಗತಿಸಿದ್ದಾರೆ. ಆಕೆಯ ಅಭಿಮಾನಿಗಳು ಇನ್ನು ಮುಂದೆ ಎಲ್ಲರಿಗೂ ಕಾದಿದೆ ಎಂಬಂತೆ ಟ್ವೀಟ್ ಮಾಡುತ್ತಿದ್ದಾರೆ.
ಟ್ವಿಟರ್‌ನಲ್ಲಿ ಬ್ಯಾನ್ ಆದ ಬಳಿಕ ನಟಿ ಕಂಗನಾ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಆಕ್ಟಿವ್ ಆಗಿ ತೊಡಗಿಸಿಕೊಂಡಿದ್ದರು. ತಮ್ಮ ಅಭಿಪ್ರಾಯಗಳನ್ನು ಈ ವೇದಿಕೆಯಿಂದ ಹಂಚಿಕೊಳ್ಳುತ್ತಿದ್ದರು. ಇಲ್ಲಿಯೂ ಅವರು ಹಲವು ವಿವಾದಗಳಿಗೆ ಗುರಿಯಾಗಿದ್ದರು.
ಮೇ 2021 ರಲ್ಲಿ, 'ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಕಂಗನಾರಣಾವತ್ ಅವರ ಟ್ವಿಟರ್ ಖಾತೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ' ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದರು.

ಮತ್ತಷ್ಟು ಟ್ವೀಟ್ ಮಾಡಿರುವ ಕಂಗನಾ ರಣಾವತ್, ತಮ್ಮ ಹೊಸ ಚಲನಚಿತ್ರ "ತುರ್ತು ಪರಿಸ್ಥಿತಿ" ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶೂಟಿಂಗ್‌ನ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ತುರ್ತು ಪರಿಸ್ಥಿತಿ" ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. 20 ಅಕ್ಟೋಬರ್ 2023 ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ಕಾಣುತ್ತೇನೆ" ಎಂದಿದ್ದಾರೆ.
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಅನ್ನು ತೆಗೆದುಕೊಂಡ ನಂತರ, ಕಂಗನಾ ರಣಾವತ್ ಅಭಿಮಾನಿಳು ನಟಿಯ ಖಾತೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದರು.
ಕಂಗನಾ ರಣಾವತ್ ಅವರ ಮುಂದಿನ ಚಿತ್ರ, ತುರ್ತು ಪರಿಸ್ಥಿತಿಯಲ್ಲಿ ಆಕೆ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಅವರೇ ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ತನ್ನ ಮನೆಯನ್ನು ಅಡಮಾನ ಇಡಬೇಕಾಯಿತು ಎಂದು ಹೇಳಿದ್ದರು.












Click it and Unblock the Notifications