ಬೆಂಕಿ ಅವಗಢದಿಂದ ನಟ ಕಮಲ ಹಾಸನ್ ಪಾರು

ಚೆನ್ನೈ ಮಹಾನಗರಿಯ ಆಳ್ವಾರ್ ಪೇಟ್ ನಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ.

ಚೆನ್ನೈ, ಏಪ್ರಿಲ್ 8: ಹೆಸರಾಂತ ಕಲಾವಿದ ಕಮಲ ಹಾಸನ್ ಅವರ ಮನೆಯಲ್ಲಿ ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಬೆಂಕಿ ಅವಗಢ ಸಂಭವಿಸಿದ್ದು, ಬೆಂಕಿಯ ನಡುವೆ ಸಿಲುಕಿಕೊಂಡಿದ್ದ ಅವರನ್ನು ಮನೆಯಲ್ಲಿನ ಆಳುಕಾಳುಗಳು, ಸಿಬ್ಬಂದಿ ಸಂರಕ್ಷಿಸಿದರೆಂದು ಮೂಲಗಳು ತಿಳಿಸಿವೆ.

ಚೆನ್ನೈ ಮಹಾನಗರಿಯ ಆಳ್ವಾರ್ ಪೇಟ್ ನಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದರೆ, ಪೀಠೋಪರಕಣಗಳು, ನೆಲಹಾಸು ಮುಂತಾದ ಪರಿಕರಗಳಿಗೆ ಸ್ಪಲ್ಪ ಹಾನಿಯಾಗಿದೆ ಎಂದು ಹೇಳಲಾಗಿದೆ.

Actor Kamal Hassan escapes fire at his Chennai residence

ತಮ್ಮ ಟ್ವಿಟರ್ ಖಾತೆಯಲ್ಲಿಯೂ ಇದನ್ನು ಹೇಳಿಕೊಂಡಿರುವ ಕಮಲ್, ಬೆಡ್ ರೂಮಿನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿಯಿಂದಾಗಿ ಇಡೀ ರೂಮು ಹೊಗೆಯಿಂದ ಆವೃತ್ತವಾಗಿತ್ತು. ಹಾಗಾಗಿ, ನಾನು ಕಿಟಕಿಯ ಮೂಲಕ ಮನೆಯ ಮೂರನೇ ಮಹಡಿಯಿಂದ ಕೆಳಗಿಳಿದು ಬಂದೆ. ಇದಕ್ಕೆ ನನ್ನ ಮನೆಯ ಸಿಬ್ಬಂದಿ ಸಹಕರಿಸಿದರು. ಅವರಿಗೆ ನನ್ನ ಧನ್ಯವಾದ ಎಂದು ಕಮಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+