ಲೈಂಗಿಕ ಕಿರುಕುಳ : ನಟ ಜಿತೇಂದ್ರ ವಿರುದ್ಧ ಎಫ್ಐಆರ್
ಶಿಮ್ಲಾ, ಮಾರ್ಚ್ 07: ಹಿಂದಿ ಚಿತ್ರರಂಗದ ಹಿರಿಯ ನಟ ಜಿತೇಂದ್ರ ವಿರುದ್ಧ ಹಿಮಾಚಲ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಶಿಮ್ಲಾ ಪೊಲೀಸರು ಜಿತೇಂದ್ರ ವಿರುದ್ಧ ಎಫ್ಐಆರ್ ಹಾಕಿದ್ದಾರೆ.
ಜಿತೇಂದ್ರ ಅವರ ಕಸಿನ್ ಗಳಲ್ಲಿ ಒಬ್ಬರು, ದೂರು ನೀಡಿದ್ದಾರೆ. ವಿಶೇಷವೆಂದರೆ ದೂರಿನಲ್ಲಿ ಉಲ್ಲೇಖಿಸಿದ ಘಟನೆ ನಡೆದಾಗ ಆಕೆಗೆ 18, ಜಿತೇಂದ್ರರಿಗೆ 28 ವರ್ಷ ವಯಸ್ಸಾಗಿತ್ತು. ಈಗ ಜಿತೇಂದ್ರರಿಗೆ 75 ವರ್ಷ ವಯಸ್ಸು.

'ಜಂಪಿಂಗ್ ಜಾಕ್ ' ಜಿತೇಂದ್ರ ವಿರುದ್ಧ ದೂರು ನೀಡಲು #MeToo ಅಭಿಯಾನ ಕಾರಣವಂತೆ. ಈ ರೀತಿಯ ಅಭಿಯಾನದಿಂದ ಅನೇಕ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳದ ಅನುಭವವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಜಿತೇಂದ್ರ ಅವರ ಕಸಿನ್ ಕೂಡಾ ಧೈರ್ಯ ಪಡೆದುಕೊಂಡು ದೂರು ನೀಡಿದ್ದರು.
ನಾವಿಬ್ಬರೂ ಹರೆಯದಲ್ಲಿದ್ದಾಗ ಒಂದು ದಿನ 'ಶೂಟಿಂಗ್ ಗೆ ಜತೆಗೆ ಬಾ' ಎಂದು ಕರೆದರು. ನನ್ನ ತಂದೆಯನ್ನು ಕೇಳಿ ಎಂದೆ. ನನ್ನ ತಂದೆಯ ಒಪ್ಪಿಗೆ ಪಡೆದುಕೊಂಡು, ಕರೆದುಕೊಂಡು ಹೋಗಿದ್ದರು. ಈ ವೇಳೆ ಸಮಯ ಸಾಧಿಸಿ, ನನ್ನ ಮೇಲೆ ಲೈಂಗಿಕ ಕಿರುಕುಳ ಮಾಡಿದರು. ಇಷ್ಟು ವರ್ಷ ನಾನು ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಇದಕ್ಕೆ ಪರಿಹಾರ ಸಿಗಬೇಕಿದೆ ಎಂದು ಜಿತೇಂದ್ರ ಅವರ ಕಸಿನ್ ದೂರಿನಲ್ಲಿ ಹೇಳಿದ್ದಾರೆ.












Click it and Unblock the Notifications