ದೇಶದಲ್ಲಿ 6.80 ಲಕ್ಷಕ್ಕೆ ಇಳಿದ ಕೊರೊನಾ ಸಕ್ರಿಯ ಪ್ರಕರಣ

ನವದೆಹಲಿ, ಅಕ್ಟೋಬರ್ 24: ಭಾರತದಲ್ಲಿ ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 6 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಕೋವಿಡ್ ನಿಯಂತ್ರಣದ ಹೋರಾಟದಲ್ಲಿ ದೇಶದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 53,370 ಹೊಸ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಸಮಾಧಾನ ಮೂಡಿಸಿದೆ.

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 78,14,682 ಏರಿಕೆಯಾಗಿದೆ. ಇವರಲ್ಲಿ 70,16,046 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 67,549 ಮಂದಿ ರೋಗಿಗಳು ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಶನಿವಾರ ಬೆಳಗಿನ ವೇಳೆಗೆ 14,829ರಷ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ದೇಶದಲ್ಲಿ 6,80,680 ಸಕ್ರಿಯ ಪ್ರಕರಣಗಳಿವೆ.

 Active Covid-19 Cases Decreases To 6.80 Lakh

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳ ಪ್ರಮಾಣ ಶೇ 89.78ಕ್ಕೆ ಏರಿದೆ.

650 ಮಂದಿ ಸಾವಿಗೀಡಾಗಿರುವುದು ವರದಿಯಾಗಿದ್ದು, ಸಾವಿನ ಸಂಖ್ಯೆ 1,17,956ಕ್ಕೇರಿದೆ. ಆದರೆ ಒಟ್ಟಾರೆ ಮರಣ ಪ್ರಮಾಣ ಶೇ 1.51ಕ್ಕೆ ಇಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+