ಉ.ಪ್ರ:ದೂರು ಹಿಂಪಡೆಯುವಂತೆ ಬೆದರಿಸಿ, ಯುವತಿ ಮೇಲೆ ಆಸಿಡ್ ದಾಳಿ
ಡಿಯೋರಿಯಾ(ಉತ್ತರ ಪ್ರದೇಶ), ಜುಲೈ 31: ಯುವತಿಯೊಬ್ಬಳ ಮೇಲೆ ಮೂವರು ಯುವಕರು ಆಸಿಡ್ ದಾಳಿ ನಡೆಸಿದ ಪ್ರಕರಣ ಉತ್ತರ ಪ್ರದೇಶದ ಡಿಯೋರಿಯಾ ಎಂಬಲ್ಲಿ ಇಂದು(ಜುಲೈ 31) ನಡೆದಿದೆ.
ಆಸಿಡ್ ದಾಳಿ ನಡೆಸಿದ ಯುವಕರ ವಿರುದ್ಧ ದೂರು ನೀಡಿರುವ ಯುವತಿ, ಆ ಮೂವರೂ ತಮ್ಮದೇ ಊರಿನವರು ಎಂಬ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಇದೇ ಯುವತಿಯ ಮೇಲೆ ಯುವಕರು ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾಗ ಆ ಮೂವರ ಮೇಲೂ ಯುವತಿ ದೂರು ನೀಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ದೂರನ್ನು ವಾಪಸ್ ಪಡೆಯುವಂತೆ ಬೆದರಿಸಿ, ಆಸಿಡ್ ದಾಳಿ ನಡೆಸಿದ್ದಾರೆಂದು ಅಂದಾಜಿಸಿರುವ ಪೊಲೀಸರು ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದಾರೆ.











Click it and Unblock the Notifications