ಕಾಶ್ಮೀರ ಕಣಿವೆಯಲ್ಲಿನ ಟಾಪ್ 5 ಉಗ್ರರ ಪಟ್ಟಿ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 15 : ಅಮರನಾಥ ಯಾತ್ರಿಗಳ ಮೇಲೆ ನಡೆದ ಉಗ್ರರ ದಾಳಿಯ ಸಂಚು ರೂಪಿಸಿದ್ದ ಅಬು ಇಸ್ಮಾಯಿಲ್‌ನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಲಷ್ಕರ್ ಏ ತೋಯ್ಬಾದ ಕಮಾಂಡರ್ ಆಗಿದ್ದ ಇಸ್ಮಾಯಿಲ್ ಹತ್ಯೆಯಿಂದ ಕಾಶ್ಮೀರ ಕಣಿವೆಯಲ್ಲಿ ಮತ್ತೊಬ್ಬ ಭಯೋತ್ಪಾದಕ ನಾಯಕನ ಹತ್ಯೆ ನಡೆದಂತಾಗಿದೆ.

ಇತ್ತೀಚೆಗೆ ನಡೆದ ಎನ್ ಕೌಂಟರ್‌ಗಳಲ್ಲಿ ಲಷ್ಕರ್ ಏ ತೋಯ್ಬಾದ ಕಮಾಂಡರ್ ಅಬು ದುಜಾನ್, ಸಬ್‌ ಜಾರ್ ಭಟ್, ಬುರ್ಹಾನ್ ವಾನಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಪ್ರಮುಖ ಉಗ್ರರ ಹತ್ಯೆ ಮೂಲಕ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಚಟುವಟಿಕೆಗೆ ತಡೆ ಉಂಟಾಗಿದೆ.

ಕಾಶ್ಮೀರದ ಟಾಪ್ 12 ಭಯೋತ್ಪಾದಕರ ಪಟ್ಟಿ ಬಹಿರಂಗ

ಭದ್ರತಾ ಪಡೆಗಳು ಕೆಲವು ದಿನಗಳ ಹಿಂದೆ ಗ್ರೇಡ್ A++ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೇ ಪಟ್ಟಿಯಲ್ಲಿದ್ದ ಅಬು ಇಸ್ಮಾಯಿಲ್‌ನನ್ನು ಗುರುವಾರ ನಡೆದ ಮೂರು ನಿಮಿಷಗಳ ಎನ್‌ ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

ವೆಚ್ಚ ಕಡಿತದಿಂದ ಉಗ್ರರ ವೇತನಕ್ಕೆ ಕತ್ತರಿ, ಸಂಬಳ ಎಷ್ಟು?

ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ಪ್ರಮುಖ ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಪಟ್ಟಿಯಲ್ಲಿರುವ ಬಾಕಿ ಉಳಿದಿರುವ ಉಗ್ರರ ಮಾಹಿತಿ ಇಲ್ಲಿದೆ....

ಅಲ್ ಕೈದಾ ಸ್ಥಾಪಕ ಝಾಕೀರ್

ಅಲ್ ಕೈದಾ ಸ್ಥಾಪಕ ಝಾಕೀರ್

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಲ್ಲಿದ್ದ ಉಗ್ರ ಝಾಕೀರ್ ಮೂಸಾ ಅದರಿಂದ ಹೊರಬಂದು ಕಾಶ್ಮೀರ ಕಣಿವೆಯಲ್ಲಿ ಅಲ್ ಖೈದಾ ಸ್ಥಾಪನೆ ಮಾಡಿದ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಈತ, ಕಣಿವೆ ರಾಜ್ಯದ ಜನರಿಗೆ ಚಿರಪರಿಚಿತನಾಗಿದ್ದಾನೆ. ಭದ್ರತಾ ಪಡೆಗಳ ಪಟ್ಟಿಯಲ್ಲಿ ಈತನ ಹೆಸರಿದೆ.

ಮುಂದಿನ ಲಷ್ಕರ್ ಕಮಾಂಡರ್

ಮುಂದಿನ ಲಷ್ಕರ್ ಕಮಾಂಡರ್

ಅಬು ಇಸ್ಮಾಯಿಲ್‌ ಹತ್ಯೆ ಬಳಿಕ ಕಣಿವೆ ರಾಜ್ಯದಲ್ಲಿ ಲಷ್ಕರ್ ಮುನ್ನಡೆಸುವ ಜವಾಬ್ದಾರಿ ಜೀನತ್ ಉಲ್ ಇಸ್ಲಾಂ ತೆಗೆದುಕೊಳ್ಳಲಿದ್ದಾನೆ. 28 ವರ್ಷದ ಜೀನತ್ 2015ರಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಬಾಂಬ್ ತಯಾರು ಮಾಡುವುದರಲ್ಲಿ ಈತ ಪಳಗಿದವನು.

ಜೈಷ್ ಎ ಮೊಹಮದ್ ಉಗ್ರ

ಜೈಷ್ ಎ ಮೊಹಮದ್ ಉಗ್ರ

ಖಾಲಿದ್ ಮತ್ತು ಅಬು ಹಮಾಸ್ ಹೆಸರಿನಿಂದ ಕರೆಯಲ್ಪಡುವ ಜೈಷ್ ಎ ಮೊಹಮದ್ ಸಂಘಟನೆಯ ಉಗ್ರ ನೀತ. 2016ರಿಂದ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯನಾಗಿರುವ ಈತ ಪಾಕಿಸ್ತಾನ ಮೂಲದವನು. ದಕ್ಷಿಣ ಕಾಶ್ಮೀರದಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯ ರೂವಾರಿ ಈತ. ಈ ದಾಳಿಯಲ್ಲಿ 8 ಜನರು, 4 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು.

ಅಪಾಯಕಾರಿ ಉಗ್ರ

ಅಪಾಯಕಾರಿ ಉಗ್ರ

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೂತನ ಮುಖ್ಯಸ್ಥ ರಿಯಾಜ್ ನಾಯ್ಕೂ ಅಪಾಯಕಾರಿ ಉಗ್ರ. 20 ವರ್ಷದ ಈತ ಭದ್ರತಾ ಪಡೆಗಳ ಕೈಗೆ ಸಿಗದೆ ಹಲವು ಬಾರಿ ತಪ್ಪಿಸಿಕೊಂಡಿದ್ದಾನೆ.

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಜಿಲ್ಲಾ ಕಮಾಂಡರ್ ಸಲೀಂ ಪದ್ದಾರ್. ಶೋಪಿಯಾನ್ ಪ್ರಾಂತ್ಯದ ನಿವಾಸಿಯಾದ ಈತನನ್ನು 2015ರಲ್ಲಿ ಸಂಘಟನೆಗೆ ಸೇರಿಸಿಕೊಳ್ಳಲಾಗಿದೆ. ಎನ್ ಕೌಂಟರ್‌ನಲ್ಲಿ ಹತ್ಯೆಯಾದ ಬುರ್ಹಾನ್ ವಾನಿ ಕ್ಯಾಂಪ್‌ನ ಸದಸ್ಯನಾಗಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the likes of Sabzar Bhat, Abu Dujana and Bashir Ahmed Wani being killed, let us look at the remaining Grade A++ terrorists remaining in the Valley. The security forces had recently released a list of Grade A++ terrorists in the Valley.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ