ಎಬಿಪಿ ನ್ಯೂಸ್ ಸಮೀಕ್ಷೆ: ಆಂಧ್ರದಲ್ಲಿ ವೈಎಸ್ಸಾರ್, ತೆಲಂಗಾಣದಲ್ಲಿ ಟಿಆರ್ ಎಸ್
ಲೋಕಸಭೆ ಚುನಾವಣೆ 2019ರ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ನಡೆಸಿದ್ದು, ಎಬಿಪಿ ಸುದ್ದಿ ವಾಹಿನಿ ಈ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸುತ್ತಿದೆ. ಒಟ್ಟು 22,309 ಸಮೀಕ್ಷೆ ಮಾದರಿಗಳನ್ನು ಬಳಸಿಕೊಳ್ಳಲಾಗಿದ್ದು, 2018ರ ಡಿಸೆಂಬರ್‌ನಿಂದ ಜನವರಿ ಮೂರನೇ ವಾರದವರೆಗೆ ಸಮೀಕ್ಷೆ ನಡೆಸಲಾಗಿದೆ. ಎಲ್ಲ ರಾಜ್ಯಗಳಲ್ಲಿನ ಎಲ್ಲ 543 ಲೋಕಸಭೆ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿದೆ.
ದೇಶದಲ್ಲಿ ಕಳೆದ 24 ವರ್ಷಗಳಲ್ಲಿಯೇ ನಡೆದ ಅತಿ ದೊಡ್ಡ ಹಾಗೂ ನಿಖರ ಸ್ವತಂತ್ರ ಚುನಾವಣಾ ಪೂರ್ವ ಮಾದರಿ ಸಮೀಕ್ಷೆಯಾಗಿದೆ ಎಂದು ಸಿ ವೋಟರ್ ಹೇಳಿಕೊಂಡಿದೆ.
ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮುನ್ನಡೆ ಪಡೆದುಕೊಳ್ಳಲಿವೆ.

ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಫಲಿತಾಂಶ ಏನಾಗಬಹುದು? ಮುಂದೆ ಓದಿ...
ಆಂಧ್ರಪ್ರದೇಶ(42 ಕ್ಷೇತ್ರಗಳು)
ಟಿಡಿಪಿ : 6
ವೈಎಸ್ಸಾರ್ ಕಾಂಗ್ರೆಸ್ : 19
ಇತರೆ : 00
2014ರಲ್ಲಿ ಟಿಡಿಪಿ 16; ಟಿಆರ್ ಎಸ್: 11; ವೈಎಸ್ಸಾರ್ ಕಾಂಗ್ರೆಸ್: 9; ಬಿಜೆಪಿ :3; ಕಾಂಗ್ರೆಸ್ : 2; ಎಐಎಂಐಎಂ : 1
****
ತೆಲಂಗಾಣ(17)
ಟಿಆರ್ ಎಸ್ : 16
ಎಐಎಂಐಎಂ : 1
ಇತರೆ : 00
2014ರಲ್ಲಿ ಬಿಜೆಪಿ +ಟಿಡಿಪಿ :2; ಕಾಂಗ್ರೆಸ್ :2; ಟಿಆರ್ ಎಸ್: 11; ವೈಎಸ್ಸಾರ್ ಕಾಂಗ್ರೆಸ್ : 1, ಇತರೆ : 1












Click it and Unblock the Notifications