Abhijeet Dipke: ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ದೆಹಲಿ ಪೊಲೀಸರಿಗೆ ವಿಚಿತ್ರವಾದ ಅಭ್ಯಾಸವಿದೆ ಎಂದ ಅಭಿಜೀತ್ ದೀಪ್ಕೆ!
Abhijeet Dipke: ಜೈಲಿನಿಂದ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ದೆಹಲಿ ಪೊಲೀಸರಿಗೆ ವಿಚಿತ್ರವಾದ ಅಭ್ಯಾಸವಿದೆ ಎನ್ನುವ ಸಾಲುಗಳೊಂದಿಗೆ ಅಭಿಜೀತ್ ದೀಪ್ಕೆ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ದೆಹಲಿ ಪೊಲೀಸರಿಗೆ ಒಂದು ವಿಚಿತ್ರ ಅಭ್ಯಾಸವಿದೆ. ಮೊದಲನೆಯದಾಗಿ, ಅವರು ನಿಮ್ಮನ್ನು ಬಂಧಿಸುತ್ತಾರೆ ಮತ್ತು ಎಲ್ಲಾ ಸಮಯದಲ್ಲೂ ವಕೀಲರನ್ನು ಭೇಟಿ ಮಾಡಲು ನಿಮಗೆ ಅವಕಾಶ ನೀಡುವುದಿಲ್ಲ. ಅವರು ನಿಮಗೆ ಅಥವಾ ಯಾರಿಗೂ ನಿಮ್ಮನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳುವುದಿಲ್ಲ. ನಂತರ, ಬೆಳಿಗ್ಗೆ 3:30 ಕ್ಕೆ, ಅವರು ಇದ್ದಕ್ಕಿದ್ದಂತೆ ಬಂಧನ ದಾಖಲೆಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ ಮತ್ತು ಅಂತಿಮವಾಗಿ ಬೆಳಿಗ್ಗೆ 4 ಗಂಟೆಗೆ ನಿಮ್ಮ ವಕೀಲರಿಗೆ ಕರೆ ಮಾಡುತ್ತಾರೆ!

ಇದು ನನಗೆ ಎರಡು ಬಾರಿ ಸಂಭವಿಸಿದೆ. ನೀವು ಬೆಳಿಗ್ಗೆ 3:30 ಕ್ಕೆ ನಿಮ್ಮನ್ನು ಕರೆದುಕೊಳ್ಳಲು ಬಿಡುತ್ತೀರಾ, ದೆಹಲಿ ಪೊಲೀಸರೇ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅಭಿಜೀತ್ ದೀಪ್ಕೆ ಅವರ ಈ ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗಿನ ಜಾವ 3:30 ಕ್ಕೆ ಬ್ರಹ್ಮ ಮುಹೂರ್ತ. ನಿಮ್ಮ ಹಗಲಿನ ಜೀವನದ ಆಯ್ಕೆಗಳು ಸ್ಪಷ್ಟವಾಗಿ ಆಗಿಲ್ಲದ ಕಾರಣ ಅವರು ನಿಮ್ಮ ಕರ್ಮವನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಉಚಿತ ಬಂಧನಕ್ಕೆ ನಿಮಗೆ ಪಂಚ್ ಕಾರ್ಡ್ ಅಗತ್ಯವಿದೆ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸಿಜೆಪಿಗೆ ಒಂದು ವಿಚಿತ್ರ ಅಭ್ಯಾಸವಿದೆ. ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯ ಬಗ್ಗೆ ಚರ್ಚಿಸಿ ದಾಗಲೆಲ್ಲಾ, ಅವರು ಇದ್ದಕ್ಕಿದ್ದಂತೆ ಆಧಾರರಹಿತ ಕಾರ್ಯಸೂಚಿಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ ಎಂದೂ ಕೆಲವರು ಹೇಳಿದ್ದಾರೆ.
ವೆಬ್ ಸರಣಿಗಳಿಂದ ಸ್ಫೂರ್ತಿ ಪಡೆದವರು. ಅವಿದ್ಯಾವಂತ ಮತ್ತು ಹೇಡಿಗಳಾದ ಮಂತ್ರಿಗಳ ಆದೇಶವನ್ನು ಅನುಸರಿಸ ಬೇಕಾಗಿರುವುದರಿಂದ ದೆಹಲಿ ಪೊಲೀಸರು ಅಸಹಾಯಕರು. ನೀವು ಮತ್ತೆ ನಿಲ್ಲದಂತೆ ನಿಮ್ಮನ್ನು ಮಾನಸಿಕವಾಗಿ ಸೋಲಿಸಲು ಈ ತಂತ್ರಗಳನ್ನು ಬಳಸಲಾಗಿದೆ ಆದರೆ ಪ್ರಶಾಂತ್ ಕಿಶೋರ್ ಹೇಳಿದಂತೆ ಇದು ಈಗ ನಡೆಯುವುದಿಲ್ಲ ಎಂದು ಹಲವರು ಅಭಿಜೀತ್ ದೀಪ್ಕೆ ಅವರಿಗೆ ಬೆಂಬಲ ನೀಡಿದ್ದಾರೆ.


Click it and Unblock the Notifications
