Abbayi Kanth: ಒಬ್ಬ ವ್ಯಕ್ತಿಯಿಂದ ಪುರಾತನ ಬಾವಿಗಳಿಗೆ ಮರುಜೀವ: ಗ್ರಾಮಸ್ಥರು ಒಂದಾಗಿದ್ದು ಹೇಗೆ ?!
Abbai Kant: 20 ವರ್ಷದ ಯುವಕ ಸುರೇಂದ್ರ ಸಿಂಗ್ ಚೌಧರಿ ಇದೀಗ ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಕಸದಿಂದ ತುಂಬಿದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸಿದ ನಂತರ ಭಾರತೀಯ ಯುವಕನ ಕಾರ್ಯಾಚರಣೆಯು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅದೇ ರೀತಿ ಹಲವು ವರ್ಷಗಳಿಂದ ಆಂಧ್ರಪ್ರದೇಶದಲ್ಲಿರುವ ಪುರಾತನ ಮೆಟ್ಟಿಲುಬಾವಿ ಹಾಗೂ ಪುರಾತನ ಪ್ರದೇಶಗಳಲ್ಲಿ ಸ್ವಚ್ಛ ಮಾಡುವ ಮೂಲಕ ಮತ್ತೊಬ್ಬ ಯುವಕ ದೇಶದಾದ್ಯಂತ ಗಮನ ಸೆಳೆದಿದ್ದಾರೆ. ಕಸದ ರಾಶಿಗಳ ಅಡಿಯಲ್ಲಿ ನಿಧಾನವಾಗಿ ಕಣ್ಮರೆಯಾಗುತ್ತಿದ್ದ ಪುರಾತನ ಪ್ರದೇಶಗಳನ್ನು ಸ್ವಚ್ಛ ಮಾಡುವಲ್ಲಿ ಅಬ್ಬಾಯಿ ಕಾಂತ್ (Abbayi Kanth) ಎನ್ನುವವರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಪುರಾತನ ದೇವಾಲಯ, ಬಾವಿ ಹಾಗೂ ಪ್ರದೇಶಗಳನ್ನು ಸ್ವಚ್ಛಗೊಳಿಸುವಲ್ಲಿ ಅಬ್ಬಾಯಿ ಕಾಂತ್ ಅವರ ಮಾದರಿ ಇದೀಗ ದೇಶದಾದ್ಯಂತ ಸುದ್ದಿಯಾಗಿದೆ. ಅಬ್ಬಾಯಿ ಕಾಂತ್ ಅವರು ಪ್ರಾರಂಭಿಸಿದ ಸ್ವಚ್ಛತಾ ಕೆಲಸಕ್ಕೆ ಮುಂದೆ ನೂರಾರು ಸಾಮಾನ್ಯ ಜನರು ಕೈಜೋಡಿಸಿದರು. ಈ ಬದಲಾವಣೆ ಮುಖ್ಯವೆಂದು ನಿರ್ಧರಿಸಿ ಸ್ವಚ್ಛತಾ ಕಾರ್ಯಕ್ಕೆ ಇಳಿದಿರು ನೋಡ ನೋಡುತ್ತಿದ್ದಂತೆಯೇ ಆಂಧ್ರಪ್ರದೇಶದ ಹಲವು ಪ್ರದೇಶಗಳು ಬದಲಾಗಿ ಹೋದವು. ಇದಕ್ಕೆ ಕಾರಣವಾಗಿದ್ದು ಅಬ್ಬಾಯಿ ಕಾಂತ್!

ಆಂಧ್ರಪ್ರದೇಶದ ಅಬ್ಬಾಯಿ ಕಾಂತ್ ಅವರು ಪೀಪಲ್ಲಿ ಮಂಡಲದಲ್ಲಿರುವ ಹಳೆಯ ಬಾವಿಯ ಹದಗೆಡುತ್ತಿರುವುದನ್ನು ನೋಡಿದರು. ಒಂದಾನೊಂದು ಕಾಲದಲ್ಲಿ ಪ್ರಮುಖ ನೀರಿನ / ಕುಡಿಯುವ ನೀರಿನ ಮೂಲವಾಗಿದ್ದ ಪುರಾತನ ಬಾವಿಯ ಮೆಟ್ಟಿಲುಗಳು ಮುಚ್ಚಿ ಹೋಗುತ್ತಿರುವುದನ್ನು ನೋಡಿದ ಅವರು ಇದನ್ನು ಹೇಗಾದರೂ ರಕ್ಷಿಸಬೇಕು ಎಂದು ಪಣ ತೊಟ್ಟರು. ಮೆಟ್ಟಿಲುಬಾವಿಯ ಮೇಲೆ ಕಾಲಾನಂತರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಆಹಾರದ ಪ್ಯಾಕೆಟ್‌ಗಳು, ತೆಂಗಿನ ಚಿಪ್ಪುಗಳು, ಎಲೆ ತಟ್ಟೆಗಳು ಮತ್ತು ಹೂವಿನ ಹಾರ ಸೇರಿದಂತೆ ಪೂಜಾ ಸಾಮಾಗ್ರಿಗಳನ್ನು ಎಸೆಯಲಾಗಿತ್ತು.
ಡಂಪಿಂಗ್ ಮೈದಾನದಂತೆ ಈ ಪುರಾತನ ಪ್ರದೇಶವು ಬದಲಾಗಿತ್ತು. ಈ ವಿಷಯದ ಬಗ್ಗೆ ಆನ್‌ಲೈನ್‌ನಲ್ಲಿ ಅಬ್ಬಾಯಿ ಕಾಂತ್ ಅವರು ವಿಡಿಯೋವೊಂದನ್ನು ಮಾಡಿ ಹಾಕಿದರು. ಈ ಪ್ರದೇಶದಲ್ಲಿ ಕಸ ಸೇರುತ್ತಿರುವುದು ಮಾತ್ರವಲ್ಲ, ಪರಂಪರೆಯೊಂದು ನಶಿಸಿ ಹೋಗುತ್ತಿದೆ ಎಂದು ಹೇಳಿದರು. ಈ ವಿಡಿಯೋ ವೈರಲ್ ಆಯ್ತು.
ಅಬ್ಬಾಯಿ ಕಾಂತ್ ಅವರು ಹೇಳಿದ ವಿಷಯ ಹಲವರಿಗೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ, ಪರಂಪರೆಯ ರಕ್ಷಣೆಗೆ ಸಾಮೂಹಿಕ ಪೂರ್ವ ಸಂಪದ ರಕ್ಷಕ ಸೇನೆ ಎನ್ನುವ ಸಂಘಟನೆಯ ಮೂಲಕ 300 ಕ್ಕೂ ಹೆಚ್ಚು ಸ್ವಯಂಸೇವಕರು ಸ್ಥಳವನ್ನು ಸ್ವಚ್ಛಗೊಳಿಸಲು ಸಹಾಯ ಮಾಡಲು ಮುಂದೆ ಬಂದರು. ಕೈಗವಸುಗಳು, ಉಪಕರಣಗಳೊಂದಿಗೆ ಕಾರ್ಯಾಚರಣೆಗೆ ಮುಂದಾದರು. ಸ್ವಯಂಸೇವಕರು ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಬಾವಿಯ ಮೂಲ ರಚನೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಒಂದಾಗಿ ಕೆಲಸ ಮಾಡಿದರು. ಈ ಪ್ರಯತ್ನವು ಒಂದೇ ದಿನಕ್ಕೆ ಸೀಮಿತವಾಗಿರಲಿಲ್ಲ, ಜಾಗವನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ತಂಡಗಳು ಸ್ವಚ್ಛಗೊಳಿಸುವ ಅಭಿಯಾನವನ್ನು ಈ ಪ್ರದೇಶದಲ್ಲಿ ಕೈಗೊಂಡವು.
Abbayi Kanth: 100% ನಾಗರಿಕ ಪ್ರಜ್ಞೆ; ವೈರಲ್ ವಿಡಿಯೋ
ಒಂದು ಪುರಾತನ ಬಾವಿಯನ್ನು ಸಂರಕ್ಷಣೆ ಮಾಡುವುದರೊಂದಿಗೆ ಪ್ರಾರಂಭವಾದ ಈ ಅಭಿಯಾನವು ಹಲವು ಪುರಾತನ ಪ್ರದೇಶಗಳ ಸಂರಕ್ಷಣೆಗೆ ಕಾರಣವಾಯಿತು. ಅಬ್ಬಾಯಿ ಕಾಂತ್ ಅವರು ಎರಡೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರು. ಅದರಲ್ಲಿ ಮೊದಲು ಹಾಗೂ ನಂತರ ಎಂದು ಬರೆಯಲಾಗಿತ್ತು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆದವು. "100% ನಾಗರಿಕ ಪ್ರಜ್ಞೆ' ಎಂದು ಹಲವರು ಈ ಬದಲಾವಣೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು. ಐತಿಹಾಸಿಕ ತಾಣಗಳು ಭಾರತದಲ್ಲಿ ಹೇಗೆ ಅವನತಿ ಆಗುತ್ತಿವೆ ಎನ್ನುವ ವಿಷಯವನ್ನು ಚರ್ಚೆ ಮಾಡುವುದಕ್ಕೆ ಅಬ್ಬಾಯಿ ಕಾಂತ್ ಅವರ ಕೆಲಸ ಕಾರಣವಾಯಿತು.
ಪುರಾತನ ಬಾವಿ ಮತ್ತೆ ಕೊಳಕಾಗದಂತೆ ನೋಡಿಕೊಳ್ಳಲು ಸಂಘಟಕರು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಯಿತು. ಪರಂಪರೆಯ ಸ್ಥಳಗಳನ್ನು ಗೌರವಿಸಲು ಮತ್ತು ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಲು ಜನರಿಗೆ ತಿಳಿ ಹೇಳಲಾಯಿತು. ಈ ಪ್ರದೇಶಗಳ ಸಂರಕ್ಷಣೆ ಕೇವಲ ಅಧಿಕಾರಿಗಳ ಕೆಲಸವಲ್ಲ, ಎಲ್ಲರ ಕರ್ತವ್ಯ ಎಂಬ ಸಂದೇಶವನ್ನು ಸಾರುವುದಕ್ಕೆ ಜಾಗೃತಿ ಫಲಕಗಳನ್ನು ಅಳವಡಿಸಲಾಯಿತು.


Click it and Unblock the Notifications
