AAP: ಲೋಕಸಭೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ನವದೆಹಲಿ, ಡಿ. 30: ದಿಲ್ಲಿಯಲ್ಲಿ ಅಧಿಕಾರ ಗದ್ದುಗೆಗೇರಿದ ಬಳಿಕ ನವೋತ್ಸಾಹದಿಂದ ಪುಟಿದೆದ್ದಿರುವ ಆಮ್ ಆದ್ಮಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಗೆ ಈಗಿಂದಲೇ ಭರ್ಜರಿ ಸಿದ್ಧತೆ ನಡೆಸಿದೆ.
ಹಣ ಬಲ/ ತೋಳ್ಬಲವಿಲ್ಲದೆ ಪ್ರಾಮಾಣಿಕವಾಗಿಯೂ ಚುನಾವಣೆಗಳನ್ನು ಗೆಲ್ಲಬಹುದು ಎಂಬುದನ್ನು ಅನುಮಾನಕ್ಕೆಡೆಯಿಲ್ಲದಂತೆ ನಿರೂಪಿಸಿರುವ/ ಸಾದರಪಡಿಸಿರುವ ಆಮ್ ಆದ್ಮಿ ಪಕ್ಷವು ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಹಾಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರಾಮಾಣಿಕ ಆಮ್ ಆದ್ಮಿ / ಔರತ್ ಗಳಿಗೆ ತಲಾಶೆ: ಪಕ್ಷದ ವೆಬ್ ಸೈಟಿನಲ್ಲಿ ಮಾದರಿ ಅರ್ಜಿಯನ್ನು ಪ್ರಕಟಿಸಿರುವ AAP, ಸೂಕ್ತ/ ಸಮರ್ಥ ಅಭ್ಯರ್ಥಿಗಳು ನಾಮಪತ್ರ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಕಳುಹಿಸಬಹುದಾಗಿದೆ.
ಅರ್ಜಿ ಸಲ್ಲಿಸಲು/ ಸಂಪರ್ಕಿಸಲು ಪಕ್ಷದ ಅಧಿಕೃತ ವಿಳಾಸ ಇಂತಿದೆ: Pankaj Gupta, Aam Aadmi Party, A-119, Kaushambi, Ghaziabad, UP. E-mail ID : [email protected], Helpline No - 8588833599












Click it and Unblock the Notifications