ದೇವಾಲಯದಲ್ಲೇ ಅತ್ಯಾಚಾರ, ಛಿ, ಛಿ ನಾಚಿಕೆಗೇಡು!
Recommended Video

Uttarpradesh : Shocking incident happened in the temple | Watch video
ಮಥುರಾ(ಉತ್ತರ ಪ್ರದೇಶ), ಸೆಪ್ಟೆಂಬರ್, 16: ದೇವಾಲಯದ ಆವರಣದಲ್ಲೇ ಯುವತಿಯೊಬ್ಬಳ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ಸೆ.11 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದೇವಾಲಯದಲ್ಲಿ ಅಡುಗೆಯವನಾಗಿ ಕೆಲಸ ಮಾಡುವ ವ್ಯಕ್ತಿ ಮತ್ತು ದೇವಾಲಯದ ಸೆಕ್ಯುರಿಟಿ ಗಾರ್ಡ್ ಸೇರಿ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.

ರಾಧಾ ಅಷ್ಟಮಿಯ ನಿಮಿತ್ತ ಜಗನ್ನಾಥ ಪುರಿಯಿಂದ ಮಹಿಳೆ ಮಥುರೆಗೆ ಬಂದಿದ್ದರು. ಯಾರೂ ಇಲ್ಲದ ಸಮಯದಲ್ಲಿ ದೇವಾಲಯಕ್ಕೆ ಬಂದಿದ್ದ ಯುವತಿಯ ಮೇಲೆ ದೇವಾಲಯದ ಅಡುಗೆಯವ ಮತ್ತು ಸೆಕ್ಯರಿಟಿ ಗಾರ್ಡ್ ಸೇರಿ ಅತ್ಯಾಚಾರ ನಡೆಸಿದ್ದಾರೆ.
ದೇವಾಲಯದ ಆವರಣದಲ್ಲಿರುವ ಸಿಸಿಟಿವಿ ಫೂಟೇಜ್ ಅನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು, ಸಾಕ್ಷ್ಯ ಕಲೆಹಾಕುತ್ತಿದ್ದಾರೆ.












Click it and Unblock the Notifications